Special Marriage Story: 20 ವರ್ಷ ಕಿರಿಯ ಲವರ್‌ ಜೊತೆ ಓಡಿ ಹೋದ ವಿವಾಹಿತೆ, ಮರಳಿ ಬರಲ್ಲ ಎಂದಾಕೆಗೆ ಧಾರೆ ಎರೆದ ಗಂಡ / Unique Marriage Story: Woman Elopes with Younge | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹೆಂಡತಿಯನ್ನೇ ಧಾರೆ ಎರೆದ ಗಂಡ


Last Updated:

ಪ್ರಿಯಕರನೊಂದಿಗೆ ಓಡಿಹೋದ ಮಹಿಳೆ ಮತ್ತೆ ವಾಪಾಸ್​​ ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ. ಇದಕ್ಕೆ ಗಂಡ ಕೂಡ ವಿರೋಧ ಮಾಡದೇ ತನ್ನ ಸ್ವಂತಿ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.

ಹೆಂಡತಿಯನ್ನೇ ಧಾರೆ ಎರೆದ ಗಂಡ
ಹೆಂಡತಿಯನ್ನೇ ಧಾರೆ ಎರೆದ ಗಂಡ

ಪ್ರಿಯಕರನೊಂದಿಗೆ ಓಡಿ ಹೋದ ಮಹಿಳೆ ವಾಪಾಸ್​​ ಬರಲು ನಿರಾಕರಿಸಿದ್ದಕ್ಕೆ ಗಂಡನೇ ಆಕೆಯ ಮದುವೆ ಮಾಡಿಸಿದ್ದಾನೆ. ಉತ್ತರ ಪ್ರದೇಶದ (Uttar Pradesh) ಚಂದೌಲಿ ಜಿಲ್ಲೆಯಲ್ಲಿ ಈ ಒಂದು ವಿಚಿತ್ರ ಘಟನೆ ನಡೆದಿದೆ. ತನ್ನ ಪತ್ನಿ ಸರಿತಾ ಅವಳ ಪ್ರಿಯಕರ ಅಜಯ್‌ನೊಂದಿಗೆ ಓಡಿಹೋಗಿದ್ದಳು. ನಂತರ ನಂತರ, ಜೀವನನಾಥ್ ರಾಜ್‌ಭರ್ ಎಂಬ ವ್ಯಕ್ತಿ ತನ್ನ ಹೆಂಡತಿಯನ್ನು ಹುಡುಕಲು ಪ್ರಾರಂಭಿಸಿದ್ದಾನೆ. ಆದರೆ ನಂತರ ಆಕೆ ವಾಪಾಸ್​​ ಬರಲು ನಿರಾಕರಿಸಿದ್ದಕ್ಕೆ ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.

ಚಂದೌಲಿ ಜಿಲ್ಲೆಯಲ್ಲಿ ಈ ಒಂದು ವಿಚಿತ್ರ ಘಟನೆ ನಡೆದಿದೆ. ತನ್ನ ಪತ್ನಿ ಸರಿತಾ ಅವಳ ಪ್ರಿಯಕರ ಅಜಯ್‌ನೊಂದಿಗೆ ಓಡಿಹೋಗಿದ್ದಳು. ನಂತರ ನಂತರ, ಜೀವನನಾಥ್ ರಾಜ್‌ಭರ್ ಎಂಬ ವ್ಯಕ್ತಿ ತನ್ನ ಹೆಂಡತಿಯನ್ನು ಹುಡುಕಲು ಪ್ರಾರಂಭಿಸಿದ್ದಾನೆ. ಆದರೆ ನಂತರ ಆಕೆ ವಾಪಾಸ್​​ ಬರಲು ನಿರಾಕರಿಸಿದ್ದಕ್ಕೆ ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.

ಈ ಘಟನೆ ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಚರ್ಚೆಗೆ ಕಾರಣವಾಗಿದೆ. ಹೆಂಡತಿಯನ್ನು ಸ್ವಂತ ಗಂಡನೇ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವುದು ಬಹಳ ವಿಚಿತ್ರ ಎನಿಸಿದೆ.

ಪ್ರಿಯಕರನೊಂದಿಗೆ ಓಡಿಹೋದ ಮೂರು ಮಕ್ಕಳ ತಾಯಿ

ಜೀವನನಾಥ್ ರಾಜ್‌ಭರ್ ದೆಹಲಿಯಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಸರಿತಾ ಮತ್ತು ಮೂವರು ಮಕ್ಕಳು ಚಂದೌಲಿಯಲ್ಲಿ ವಾಸಿಸುತ್ತಿದ್ದರು. ಗಂಡನ ಅನುಪಸ್ಥಿತಿಯಲ್ಲಿ ಸರಿತಾ (45) ತನ್ನ ವಯಸ್ಸಿನ ಅರ್ಧದಷ್ಟು ವಯಸ್ಸಿನ ಅಜಯ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಅಜಯ್ ರೈಲುಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದ. ಇಬ್ಬರೂ ರೈಲು ಪ್ರಯಾಣದ ಸಮಯದಲ್ಲಿ ಭೇಟಿಯಾಗಿ ಪರಿಚಯ ಬೆಳೆಸಿಕೊಂಡರು. ನಂತರ ಅದು ಪ್ರಣಯ ಸಂಬಂಧವಾಗಿ ಬೆಳೆಯಿತು. ಜೀವನನಾಥ್ ಗೆ ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಾಗ ಆ ಸಂಬಂಧವನ್ನು ಬಲವಾಗಿ ವಿರೋಧಿಸಿದರು.

ಹೆಂಡತಿ ವಾಪಾಸ್​ ಬರಲು ನಿರಾಕರಿಸಿದ್ದಕ್ಕೆ ಮದುವೆ

ಆದರೆ ಸರಿತಾ ಅಜಯ್ ಜೊತೆ ಓಡಿಹೋದಳು. ಜೀವನನಾಥ್ ಅವಳನ್ನು ಹುಡುಕಲು ಬಹಳ ಪ್ರಯತ್ನ ಮಾಡಿದ್ರೂ, ಆದರೆ ನಾಲ್ಕು ತಿಂಗಳ ಕಾಲ ನಂತರ ಪತ್ತೆಯಾದರು. ಈ ವಾರದ ಆರಂಭದಲ್ಲಿ ಜೀವನನಾಥ್ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಸರಿತಾ ಮತ್ತು ಅಜಯ್ ರನ್ನು ಅನಿರೀಕ್ಷಿತವಾಗಿ ಭೇಟಿಯಾಗಿದ್ದು, ಸರಿತಾಳನ್ನು ಮನೆಗೆ ಮರಳುವಂತೆ ಬೇಡಿಕೊಂಡರು. ಆದರೆ ಸರಿತಾ ಅಜಯ್ ಜೊತೆ ತನ್ನ ಜೀವನ ಕಳೆಯುವ ಬಗ್ಗೆ ದೃಢವಾಗಿ ಹೇಳಿದ್ದು, ಆಗ ಜೀವನನಾಥ್ ತನ್ನ ಹೆಂಡತಿಯನ್ನು ಅಜಯ್‌ನೊಂದಿಗೆ ಮದುವೆ ಮಾಡಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಇಬ್ಬರನ್ನೂ ವಿವಾಹ ನೋಂದಣಾಧಿಕಾರಿ ಕಚೇರಿಗೆ ಕರೆದೊಯ್ದು, ಅವರ ಮದುವೆ ಮಾಡಿಸಿದ್ದಾರೆ.

ಘಟನೆ ಬಗ್ಗೆ ಮಹಿಳೆ ಮತ್ತು ಆಕೆಯ ಗಂಡ ಹೇಳಿದ್ದೇನು?

ತನ್ನ ನಿರ್ಧಾರದ ಬಗ್ಗೆ ಮಾತನಾಡುತ್ತಾ ಜೀವನನಾಥ್, ‘ಅವಳು ನನ್ನೊಂದಿಗೆ ಇರಲು ನಾನು ಬಯಸುತ್ತೇನೆ. ಆದರೆ ಅವಳಿಗೆ ಇಷ್ಟಪಡದಿದ್ದರೆ, ನಾವು ಮಾಡಲು ಸಾಧ್ಯವಾಗಲ್ಲ’ ಎಂದು ಹೇಳಿದ್ದಾರೆ. ಸರಿತಾ ತನ್ನ ಗಂಡನನ್ನೇ ದೂಷಿಸಿದ್ದಾಳೆ. ‘ಮನೆಯ ಖರ್ಚಿಗೆ ಅವರು ಸಾಕಷ್ಟು ಹಣ ಕಳುಹಿಸುತ್ತಿರಲಿಲ್ಲ. ನಾವು ಆಗಾಗ್ಗೆ ಜಗಳವಾಡುತ್ತಿದ್ದೆವು’ ಎಂದು ಹೇಳಿದ್ದಾರೆ.

ಈ ಘಟನೆಯು ಸ್ಥಳೀಯರಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸುವುದು ಅಪರೂಪದ ನಡವಳಿಕೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಜೀವನನಾಥ್ ಅವರು ತಮ್ಮ ಮೂವರು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಇದು ಮಾನವೀಯತೆಯ ಉದಾಹರಣೆ ಎಂದು ಕರೆಯುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed