Last Updated:
Siya-Ketan: ನಮ್ಮ ಮನೆಯಲ್ಲಿ ಮದ್ಯ ಸೇವಿಸೋ ಹಾಗಿಲ್ಲ ಎಂದು ಹೇಳಿದ್ದರಾ ಕೇತನ್ ಅಮ್ಮ? ಎಣ್ಣೆ ಪಾರ್ಟಿ, ಕ್ಲಬ್ ಅಂತ ಓಡಾಡುತ್ತಿದ್ದಳಾ ಸಿಯಾ?
ನಿಶ್ಚಿತಾರ್ಥವಾಗಿದ್ದ ನಿಶ್ಚಿತ ವರನನ್ನು ಕೊಲೆ ಮಾಡಿದ ಕೇಸ್ ಈಗ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮದುವೆ ಇಷ್ಟ ಇಲ್ಲ ಅಂತ ಒಂದು ಮಾತು ಹೇಳಿದ್ದರೆ ಮುಗಿಯುತ್ತಿದ್ದ ಸಂಗತಿ ಈಗ 26 ವರ್ಷದ ಜೀವವನ್ನೇ ಬಲಿ ತೆಗೆದುಕೊಂಡಿದೆ. ಈ ಘಟನೆ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ.
ಕೇತನ್ ಅಗರ್ವಾಲ್ ಅವರನ್ನು 20 ವರ್ಷದ ಭಾವೀ ವಧು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಕೊಲೆ ಮಾಡಿದ್ದಾರೆಂದು ಹೇಳಲಾದ ಸುದ್ದಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಸುದ್ದಿ ಕೇಳಿದ ನಂತರ ದೇಶವೇ ಹೀಗೂ ನಡೆಯುತ್ತಾ ಅಂತ ಶಾಕ್ ಆಗಿದೆ.
ಎನ್‌ಡಿಟಿವಿಗೆ ಮಾತನಾಡಿದ ಕೇತನ್ ಅವರ ತಾಯಿ, “ಸಿಯಾ ನಮ್ಮ ಮನೆಗೆ 2-3 ಬಾರಿ ಭೇಟಿ ನೀಡಿದ್ದರು. ಒಮ್ಮೆ ಪೂಜೆಗೆ ಮತ್ತು 2-3 ಬಾರಿ ಊಟಕ್ಕೆ ಬಂದಿದ್ದರು. ನನ್ನ ಮನೆಯಲ್ಲಿ ಮದ್ಯಪಾನ ಮಾಡಲು ಅವಕಾಶವಿಲ್ಲ. ನಾನು ಅವಳನ್ನು ಪಾರ್ಟಿಗಳಿಗೆ ಹೋಗಲು ಬಿಡುವುದಿಲ್ಲ ಎಂದು ನಾನು ಅವಳಿಗೆ ಸ್ಪಷ್ಟವಾಗಿ ಹೇಳಿದ್ದೆ. ಇದರ ಹೊರತಾಗಿಯೂ, ಅವಳು ಕುಡಿಯುತ್ತಿದ್ದಳು. ಆದರೆ ಈ ವಿಚಾರ ನಮಗೆ ಹೇಳಿರಲಿಲ್ಲ ಎಂದಿ ಕೇತನ್ ತಾಯಿ ಹೇಳಿದ್ದಾರೆ.
ಪುಣೆಯ ಲೋಹಗಡ್ ಕೋಟೆಯ ಬಳಿ 26 ವರ್ಷದ ಕೇತನ್ ಅಗರ್ವಾಲ್ ಅವರನ್ನು ಅವರ 20 ವರ್ಷದ ನಿಶ್ಚಿತಾರ್ಥ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾದ 22 ವರ್ಷದ ಚೇತನ್ ಚೌಧರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವು ಅನೇಕರನ್ನು ಆಘಾತಗೊಳಿಸಿದೆ.
ಎನ್‌ಡಿಟಿವಿ ಜೊತೆ ಮಾತನಾಡಿದ ಕೇತನ್‌ನ ತಾಯಿ, ಮದುವೆಗೆ ಮೊದಲು ಸಿಯಾ ಹಲವಾರು ಬಾರಿ ತಮ್ಮ ಮನೆಗೆ ಭೇಟಿ ನೀಡಿದ್ದರು, ಅದರಲ್ಲಿ ಪೂಜೆ ಮತ್ತು ಫ್ಯಾಮಿಲಿ ಡಿನ್ನರ್ ಕೂಡಾ ಸೇರಿದೆ.
ದುಃಖಿತಳಾದ ತಾಯಿ, ಸಿಯಾ ಮತ್ತು ಚೇತನ್ ಒಟ್ಟಾಗಿ ತನ್ನ ಮಗನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಹೇಳಿಕೊಂಡಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
Bangalore [Bangalore],Bangalore,Karnataka













