Singer: ಭಾರತೀಯ ಸಂಗೀತ ಲೋಕಕ್ಕೆ ಮತ್ತೊಂದು ಆಘಾತ! ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕಿ ನಿಧನ | | ACTPnews

ಸುಮನ್ ಕಲ್ಯಾಣ್‌ಪುರ್


Last Updated:

Singer: ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್‌ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ.

ಸುಮನ್ ಕಲ್ಯಾಣ್‌ಪುರ್
ಸುಮನ್ ಕಲ್ಯಾಣ್‌ಪುರ್

ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್‌ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ. ದಶಕಗಳ ಕಾಲ ತಮ್ಮ ಮಧುರ ಗಾಯನದ ಮೂಲಕ ಕೋಟ್ಯಂತರ ಸಂಗೀತ ಪ್ರಿಯರ ಮನ ಗೆದ್ದಿದ್ದ ಅವರು ಮೇ 31, 2026ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ 89ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುಮನ್ ಕಲ್ಯಾಣ್‌ಪುರ್ ಅವರ ನಿಧನದ ಸುದ್ದಿ ಭಾರತೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದ್ದು, ದೇಶದಾದ್ಯಂತ ಅಭಿಮಾನಿಗಳು, ಸಂಗೀತಗಾರರು ಹಾಗೂ ರಾಜಕೀಯ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ.

ಜನವರಿ 28, 1937ರಂದು ಅವಿಭಜಿತ ಭಾರತದ ಭವಾನಿಪುರದಲ್ಲಿ, ಇಂದಿನ ಬಾಂಗ್ಲಾದೇಶದಲ್ಲಿ ಜನಿಸಿದ ಸುಮನ್ ಕಲ್ಯಾಣ್‌ಪುರ್ ಅವರ ಮೂಲ ಹೆಸರು ಸುಮನ್ ಹೆಮಾಡಿ. ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ತಮ್ಮ ಪ್ರತಿಭೆಯಿಂದಲೇ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡರು. ಮದುವೆಗೆ ಮುನ್ನ ಅವರು ಸುಮನ್ ಹೆಮಾಡಿ ಹೆಸರಿನಲ್ಲೇ ಅನೇಕ ಹಾಡುಗಳನ್ನು ಹಾಡಿದ್ದರು.

ಅವರ ಗಾಯನದಲ್ಲಿ ಭಾವನೆ, ಮಧುರತೆ ಮತ್ತು ಆಧ್ಯಾತ್ಮಿಕ ಸ್ಪರ್ಶಗಳಿದ್ದ ಕಾರಣ ಈ ಹಾಡುಗಳು ಕಾಲ ಕಳೆದರೂ ಜನಪ್ರಿಯತೆಯನ್ನು ಕಳೆದುಕೊಳ್ಳಲಿಲ್ಲ. ಮಹಾರಾಷ್ಟ್ರದ ಮನೆಮನೆಗಳಲ್ಲಿ ಇಂದಿಗೂ ಅವರ ಹಾಡುಗಳು ಕೇಳಿಬರುತ್ತಿರುವುದು ಅವರ ಸಂಗೀತದ ಶಾಶ್ವತತೆಯನ್ನು ಸಾಬೀತುಪಡಿಸುತ್ತದೆ.

ಮೊಹಮ್ಮದ್ ರಫಿ ಅವರೊಂದಿಗೆ ಹಾಡಿದ ಗೀತೆಗಳು ವಿಶೇಷ ಜನಪ್ರಿಯತೆ ಗಳಿಸಿದ್ದವು. ಇವರಿಬ್ಬರ ಧ್ವನಿಗಳ ಸಂಯೋಜನೆ ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಆ ಕಾಲದ ಅನೇಕ ಸಂಗೀತ ನಿರ್ದೇಶಕರು ಸುಮನ್ ಕಲ್ಯಾಣ್‌ಪುರ್ ಅವರ ಕಂಠದ ಸೊಗಸನ್ನು ಮೆಚ್ಚಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದ್ದರು.

ಸುಮನ್ ಕಲ್ಯಾಣ್‌ಪುರ್ ಅವರ ಗಾಯನ ವೃತ್ತಿಜೀವನದಲ್ಲಿ ಅನೇಕ ಅಮರ ಗೀತೆಗಳು ಜನಮನ ಗೆದ್ದಿವೆ. ಯುನ್ ಹಿ ದಿಲ್ ನೆ ಚಾಹಾ ಥಾ, ಮೇರೆ ಮೆಹಬೂಬ್ ನಾ ಜಾ, ಶರಾಬಿ ಶರಾಬಿ ಯೇ ಸಾವನ್ ಕಾ ಮೌಸಂ, ಅಪ್ನೆ ಪಿಯಾ ಕಿ ಮೈ ತೋ ಬನಿ ರೇ ಜೋಗನಿಯಾ ಮತ್ತು ಛೋಡೋ ಛೋಡೋ ಮೋರಿ ಬೈಯಾನ್ ಮುಂತಾದ ಹಾಡುಗಳು ಇಂದಿಗೂ ಸಂಗೀತಾ ಪ್ರಿಯರ ನೆಚ್ಚಿನ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed