Last Updated:
ಸಿಂಪಲ್ ಸುನಿ ಡೈರೆಕ್ಷನ್ ಮಾಡ್ತಿರೋ ಲಂಬೋದರ 2.0 ಚಿತ್ರದ ಶೂಟಿಂಗ್ ಸ್ಪಾಟ್‌ಗೆ UK ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ IGF ಸದಸ್ಯರು ಭೇಟಿ ಕೊಟ್ಟಿದ್ದಾರೆ. ಇವರ ಭೇಟಿ ಹಿಂದಿನ ಕಾರಣ ಏನು ಅನ್ನೋದು ಇಲ್ಲಿದೆ ಓದಿ.
ಡೈರೆಕ್ಟರ್ ಸಿಂಪಲ್ ಸುನಿ (Simple Suni) ಲಂಬೋದರ್ 2.0 ಚಿತ್ರ (Lambodhara 2.0 Movie) ಮಾಡ್ತಿದ್ದಾರೆ. ಇದರಲ್ಲಿ ಇವರು ಆಯ್ದುಕೊಂಡ ವಿಷಯ ಚೆನ್ನಾಗಿದೆ. ಇಂದಿನ ದಿನಮಾನಗಳಲ್ಲಿ ಯುವಕರ ಮೇಲೆ ಸಾಮಾಜಿಕ ತಾಣದ ಪ್ರಭಾವ ಅದೆಷ್ಟು ಇದೆ. ಇಂದಿನ Gen Z ಯುವಕರ ಜೀವನ ಶೈಲಿ ಹಾಗೂ AI ಎಫೆಕ್ಟ್ ಹೀಗೆ ಈ ಎಲ್ಲ ವಿಚಾರಗಳನ್ನ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಸದ್ಯದ ಹೊಸ ಸುದ್ದಿ ಏನಂದ್ರೆ ಈ ಚಿತ್ರದ ಶೂಟಿಂಗ್ ಸ್ಪಾಟ್‌ಗೆ UK ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ IGF ಸದಸ್ಯರು ಬಂದಿದ್ದಾರೆ. ಇವರು ಈ ಕನ್ನಡ ಸಿನಿಮಾದ (Kannada Movie) ಕೆಲಸವನ್ನ ಗಮನಿಸಿದ್ದಾರೆ. ಆದರೆ, ಇವರು ಸುಮ್ನೆ ಬಂದಿಲ್ಲ. ಇವರು ಯಾರು ಅನ್ನೋದನ್ನ ಚಿತ್ರ ತಂಡವೇ ಹೇಳಿಕೊಂಡಿದೆ. ಅದೇನು ಇಲ್ಲಿದೆ ಓದಿ.
ಲಂಬೋದರ 2.0 ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಒಂದು ಚಿತ್ರದ ಶೂಟಿಂಗ್ ಸ್ಪಾಟ್‌ಗೆ UK ಮೇಯರ್ ಕಚೇರಿ ಪ್ರತಿನಿಧಿ ಮಂಡಳಿ ಬಂದಿದ್ದಾರೆ. ಚಿತ್ರದ ಕೆಲಸವನ್ನ ಗಮನಿಸಿದ್ದಾರೆ.
UK ಮೇಯರ್ ಕಚೇರಿ ಪ್ರತಿನಿಧಿ ಮಂಡಳಿ
ಆದರೆ, ಇವರು ಯಾಕೆ ಬಂದರು ಅನ್ನುವ ಪ್ರಶ್ನೆಗೆ ಚಿತ್ರ ತಂಡವೇ ಉತ್ತರ ಕೊಟ್ಟಿದೆ. ಅದು ಈ ರೀತಿ ಇದೆ. ಯುನೈಟೆಡ್ ಕಿಂಗ್‌ಡಮ್‌ನ ವೆಸ್ಟ್ ಮಿಡ್ಲ್ಯಾಂಡ್ಸ್ ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ ಇಂಡಿಯಾ ಗ್ಲೋಬಲ್ ಫೋರಂ (IGF) ಸದಸ್ಯರು ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇವರು ಕನ್ನಡ ಚಿತ್ರರಂಗದ ಕಾರ್ಯವೈಖರಿಯನ್ನು ಇಡೀ ಒಂದು ದಿನ ಸಮೀಪದಿಂದ ಅವಲೋಕಿಸಿದ್ದಾರೆ ಅನ್ನೋದು ಆಗಿದೆ.
ವಿದೇಶದಿಂದ ಬಂದ ಈ ಸದಸ್ಯರು ಚಿತ್ರದ ಕಲಾವಿದರು ಹಾಗೂ ಟೆಕ್ನಿಷನ್‌ಗಳ ಜೊತೆಗೆ ಸಂವಾದ ಮಾಡಿದ್ದಾರೆ. ಕಾರಣ, ಈ ಚಿತ್ರದಲ್ಲಿ ವಿಜ್ಞಾನ ಇದೆ. ಕಲ್ಪನೆ ಮತ್ತು ಪ್ರಸಕ್ತ ವಿಷಯವನ್ನ ಇಟ್ಟುಕೊಂಡೇ ಸಿಂಪಲ್ ಸುನಿ ಸಿನಿಮಾ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ವಿದೇಶಿ ಸದಸ್ಯರು ಈ ಚಿತ್ರದ ಮಾಹಿತಿಯನ್ನ ಚಿತ್ರ ತಂಡದಿಂದಲೇ ಪಡೆದುಕೊಂಡಿದ್ದಾರೆ. ಹಾಗೆ ಇವರು ಇನ್ನೂ ಒಂದು ವಿಷಯವನ್ನು ಹೇಳಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ಚಿತ್ರ ತಂಡದಿಂದ ಎಲ್ಲ ಉಪಯುಕ್ತ ಮಾಹಿತಿ ಪಡೆದ ಈ ವಿದೇಶಿ ಸದಸ್ಯರು, ಇನ್ನೂ ಒಂದು ಕೆಲಸ ಮಾಡಿದ್ದಾರೆ. ಲಂಬೋದರ 2.0 ಚಿತ್ರವನ್ನ ತಮ್ಮ ಬರ್ಮಿಂಗ್‌ಹ್ಯಾಮ್ ನಗರದಲ್ಲಿ ವಿಶೇಷ ಪ್ರದರ್ಶನ ಏಪರ್ಡಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್ ಅಲ್ಲಿ ಚಿತ್ರ ಪ್ರದರ್ಶನ
ಹಾಗೆ ಇಡೀ ಚಿತ್ರ ತಂಡವನ್ನ ಕೂಡ ಆಹ್ವಾನಿಸಿದೆ ಅಂತಲೂ ಹೇಳಬಹುದು. ಆದರೆ, ಚಿತ್ರ ತಂಡವೇ ಹೇಳಿಕೊಂಡಂತೆ ಈ ಒಂದು ಭೇಟಿ ಭವಿಷ್ಯದಲ್ಲಿ ಸಾಂಸ್ಕೃತಿಕ ಹಾಗೂ ಚಲನಚಿತ್ರ ಸಹಯೋಗಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬುದೆ ಆಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲೂ ಇದನ್ನ ರಿಲೀಸ್ ಮಾಡುವ ಪ್ಲಾನ್ ಇದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು ಅಂತರಾಷ್ಟ್ರೀಯ ವಿತರಣೆಯ ಅವಕಾಶವನ್ನು ಹುಡುಕುತ್ತಿದ್ದಾರೆ. ಇನ್ನುಳಿದಂತೆ ಸಿಂಪಲ್ ಸುನಿ ಅವರ ಚಿತ್ರ ಜೀವನದ ಮಹತ್ವದ ಪ್ರಾಜೆಕ್ಟ್ ಕೂಡ ಇದಾಗಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 10, 2026 10:47 PM IST













