Sigm Movie: ಸಿಎಂ ವಿಜಯ್ ಮಗನ ಮೊದಲ ನಿರ್ದೇಶನದ ಸಿನಿಮಾಗೆ ಹೇಗಿದೆ ಪ್ರತಿಕ್ರಿಯೆ? ಸಿಗ್ಮಾ ನೋಡಿ ಜನ ಏನಂದ್ರು? | CM vijay son jason sanjay s first directorial debut | | ACTPnews

ಸಿಗ್ಮಾ ಬಿಡುಗಡೆ


Last Updated:

Jason Sanjay-Sigma: ವಿಜಯ್ ಮಗನ ಮೊದಲ ನಿರ್ದೇಶನದ ಸಿಗ್ಮಾ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿ ಜನ ಏನಂದ್ರು? X ವಿಮರ್ಶೆ ಹೇಗಿದೆ?

ಸಿಗ್ಮಾ ಬಿಡುಗಡೆ
ಸಿಗ್ಮಾ ಬಿಡುಗಡೆ

ಸಿಎಂ ವಿಜಯ್ (CM Vijay) ಅವರ ಮಗ ಜೇಸನ್ ಸಂಜಯ್ (Jasaon Sanjay) ಮೊದಲ ನಿರ್ದೇಶನದ ಸಿಗ್ಮಾ ಸಿನಿಮಾ  (Sigma Release) ರಿಲೀಸ್ ಆಗಿದೆ. ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗಿದ್ದು, ಮೊದಲ ದಿನ ಸಿನಿಮಾ ನೋಡಿದ ಮಂದಿ ಏನಂತಿದ್ದಾರೆ? ಸಿನಿಮಾದ ಫಸ್ಟ್ ಟ್ವಿಟರ್ ರಿವ್ಯೂ ಇಲ್ಲಿದೆ.

ಎಕ್ಸ್​ನಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ಪ್ರೇಕ್ಷಕ ಸಿನಿಮಾದಲ್ಲಿರುವ ಕಾಮಿಡಿ ಎಲಿಮೆಂಟ್ ಹಾಗೂ ಸಂದೀಪ್ ಕಿಶನ್ ಅವರ ಅಭಿನಯ ಸೂಪರ್ ಎಂದಿದ್ದಾರೆ. ಸಿಗ್ಮಾದ ಕಾಮಿಡಿ ಸಖತ್ ಆಗಿ ವರ್ಕೌಟ್ ಆಗಿದೆ. ಕಾಸ್ಟಿಂಗ್ ಸೂಪರ್ ಆಗಿದೆ. ಸಂದೀಪ್ ಕಿಶನ್​ನ ಪಾತ್ರ ಸೂಪರ್ ಆಗಿ ರಚಿಸಲಾಗಿದೆ ಎಂದಿದ್ದಾರೆ.

ಇನ್ನೊಬ್ಬ ಪ್ರೇಕ್ಷಕ ಸಿನಿಮಾ ನೋಡಿ, ಸಿನಿಮಾದ ಒಟ್ಟು ಔಟ್​ಪುಟ್ ನೋಡಿ ಇದು ಔಟ್​ಡೇಟೆಡ್ ಎಂದಿದ್ದಾರೆ. ಇನ್ನೊಬ್ಬರು ಯುವ ನಿರ್ದೇಶಕ ಹಳೆಯ ಕಾನ್ಸೆಪ್ಟ್ ಹಿಡಿದಿದ್ದಾರೆ. ಜೇಸನ್ ಸಂಜಯ್ ಅವರಂತಹ ಯುವ ನಿರ್ದೇಶಕ ಸಿಗ್ಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿರುವುದು ಅಚ್ಚರಿ, ಇಲ್ಲಿ ಹೊಸತನ ಇಲ್ಲ. ಎಲ್ಲವೂ 20 ವರ್ಷ ಹಳೆಯದರಂತೆ ಭಾಸವಾಗುತ್ತದೆ. ಫಾರ್ಮುಲ ಕೂಡಾ ಅಷ್ಟೇ. ಯಾವುದೇ ಒಂದು ಅಂಶವೇ ಎದ್ದು ಕಾಣಿಸುತ್ತಿಲ್ಲ ಎಂದಿದ್ದಾರೆ.

ಇಂಟರ್​ವೆಲ್​ಗೆ ಮೆಚ್ಚುಗೆ

ಸಿಗ್ಮಾ ಸಿನಿಮಾದ ಇಂಟರ್​ವೆಲ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ತುಂಬಾ ಪಾಸಿಟಿವ್ ಆಗಿ ಮಾತನಾಡಿರುವ ಅಂಶ ಎಂದರೆ ಅದು ಇಂಟರ್​ವೆಲ್.  ಆ್ಯಕ್ಷನ್, ಮ್ಯೂಸಿಕ್ ಹಾಗೂ ಸಂದೀಪ್ ಕಿಶನ್ ಪರ್ಫಾಮೆನ್ಸ್​ಗೂ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾದ ಮೊದಲ ಭಾಗ ತುಂಬಾ ಹಳೆಯ ಕಥೆ, ಬಡತನದ ಹೀರೋ, ಸಮಸ್ಯೆ, ಹಣದ ತೊಂದರೆ ಇವಿಷ್ಟನ್ನೇ ತೋರಿಸಲಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸಿನಿಮಾದ ಮೊದಲಾರ್ಧ ಔಟ್​ ಡೇಟ್ ಆಗಿದ್ರೂ ಎಂಗೇಜಿಂಗ್ ಆಗಿದೆ ಎಂದಿದ್ದಾರೆ ಕೆಲವರು.

ಆರಂಭಿಕ ಪ್ರತಿಕ್ರಿಯೆಗಳು ಫರಿಯಾ ಹಾಗೂ ಸಂದೀಪ್ ಕಿಶನ್ ಅವರ ಅಭಿನಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಂತೂ ವಿಜಯ್ ಮಗನ ಮೊದಲ ನಿರ್ದೇಶನದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed