Siddharth Parasanur: ಕಾಣೆಯಾಗಿದ್ದ ಮಜಾಭಾರತದ ಹಾಸ್ಯ ನಟನ ಮೃತದೇಹ ಪತ್ತೆ, ಸಿದ್ಧಾರ್ಥ್ ಪರಸನೂರು ಇನ್ನಿಲ್ಲ | | ACTPnews

ಸಿದ್ಧಾರ್ಥ್


Last Updated:

Siddharth Parasanur: ಮಜಾ ಭಾರತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಾಮಿಡಿ ನಟನಿಗೆ ಏನಾಯ್ತು? ಕಾಣೆಯಾಗಿದ್ದವನು ಸಿಕ್ಕಿದ್ದು ಶವವಾಗಿ.

ಸಿದ್ಧಾರ್ಥ್
ಸಿದ್ಧಾರ್ಥ್

ಕನ್ನಡ ಕಿರುತೆರೆಯ ಕಾಮಿಡಿ (Comedy) ಪ್ರಿಯರ ನೆಚ್ಚಿನ ಶೋಗಳಾದ ಜನಪ್ರಿಯ ಟಿವಿ ರಿಯಾಲಿಟಿ ಶೋ (Reality Show) ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ಖ್ಯಾತಿಯ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಸಿದ್ದಾರ್ಥ ಪರಸನೂರು ಅವರ ಮೃತದೇಹ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಖಾಲಿ‌ ಜಾಗದಲ್ಲಿ ಪತ್ತೆಯಾಗಿದೆ.

ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಸಿದ್ದಾರ್ಥ ಪರಸನೂರು ಅವರ ಮೃತ ದೇಹ ನೋಡಿ ಇದು ಸಹಜ ಸಾವಲ್ಲ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರಬಹುದು ಎಂದು ಮತ್ತೆ ಕೆಲವರು ಶಂಕಿಸಿದ್ದಾರೆ. ಸದ್ಯ ಇದು ಕನ್ನಡ ಕಿರುತೆರೆ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports