ರಾಜೀನಾಮೆ ನೀಡಿದ ಆ ನಾಲ್ವರು CM ಯಾರು?
- ಪಿಣರಾಯಿ ವಿಜಯನ್ – ಕೇರಳಂ
- ಮಮತಾ ಬ್ಯಾನರ್ಜಿ – ಪಶ್ಚಿಮ ಬಂಗಾಳ
- ಎಂ.ಕೆ. ಸ್ಟಾಲಿನ್ – ತಮಿಳುನಾಡು
- ಸಿದ್ದರಾಮಯ್ಯ – ಕರ್ನಾಟಕ
ಏಪ್ರಿಲ್ 9ರಂದು ನಡೆದ ಕೇರಳಂ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4ರಂದು ಪ್ರಕಟವಾಯಿತು. ಅದರಂತೆ, ಈ ಚುನಾವಣೆಯಲ್ಲಿ ಎಡರಂಗ ಕೇವಲ 35 ಸ್ಥಾನಕ್ಕೆ ಕುಸಿದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನ ಗೆದ್ದಿತು. ಹಾಗಾಗಿ, ಹತ್ತು ವರ್ಷಗಳ ಆಡಳಿತದ ನಂತರ ಪಿಣರಾಯಿ ವಿಜಯನ್ ಅವರು ಸೋಲಿನ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದರು. ಅದರಲ್ಲೂ, ವಿಜಯನ್ ಸ್ವತಃ ಧರ್ಮಡಂ ಕ್ಷೇತ್ರದಲ್ಲೂ ಸೋತಿದ್ದು ದೊಡ್ಡ ಆಘಾತವಾಗಿತ್ತು. ಅದರಂತೆ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ರಾಜೀನಾಮೆ ಅಂಗೀಕರಿಸಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ತಿಳಿಸಿದರು.
ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆದಿತ್ತು. ಅದರಲ್ಲಿ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ 108 ಸ್ಥಾನ ಗೆದ್ದು ಅಚ್ಚರಿ ಮೂಡಿಸಿತು. ಇದರ ನಡುವೆ ಡಿಎಂಕೆ 59ಕ್ಕೆ ಕುಸಿದು ದೊಡ್ಡ ಸೋಲು ಅನುಭವಿಸಬೇಕಾಯಿತು. ಹಾಗಾಗಿ, ಫಲಿತಾಂಶದ ಮರುದಿನವೇ, ದ್ರಾವಿಡ ತತ್ವದ ಗಟ್ಟಿ ಧ್ವನಿಯಾಗಿದ್ದ ಸ್ಟಾಲಿನ್ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ರಾಜೀನಾಮೆ ಅಂಗೀಕರಿಸಿ, ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸೂಚಿಸಿದರು.
ಮಮತಾ ಬ್ಯಾನರ್ಜಿ ಅವರ ಕಥೆ ಸ್ಟಾಲಿನ್ ಹಾಗೂ ಪಿಣರಾಯಿ ಸ್ಟೋರಿಗಿಂತ ತದ್ವಿರುದ್ಧವಾಗಿದೆ. ಯಾಕಂದರೆ, ಈ ಇಬ್ಬರೂ ನಾಯಕರು ನಾಯಕರು ಚುನಾವಣೆ ಸೋಲಿನ ಬಳಿಕ ರಾಜೀನಾಮೆ ನೀಡಿದ್ದಾರೆ. ಆದರೆ, ದೀದಿ ಮಾತ್ರ ಚುನಾವಣಾ ಫಲಿತಾಂಶವನ್ನ ಟೀಕಿಸುತ್ತಾ ಸಿಎಂ ಕುರ್ಚಿ ಬಿಡಲು ನಿರಾಕರಿಸಿದರು.
ಹೌದು, 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಿತು. ಮತ್ತೊಂದೆಡೆ, ತೃಣಮೂಲ 80ಕ್ಕೆ ಕುಸಿದರೂ, ಮಮತಾ ರಾಜೀನಾಮೆ ನೀಡಲು ಒಪ್ಪಲಿಲ್ಲ. ಚುನಾವಣಾ ಆಯೋಗ ಪಕ್ಷಪಾತ ಮಾಡಿದೆ, ಫಲಿತಾಂಶ ಕಾನೂನುಬಾಹಿರ ಎಂದು ಆರೋಪಿಸಿ ನಾನು ಸೋಲಲಿಲ್ಲ ಎಂದು ರಾಜೀನಾಮೆಯನ್ನ ನಿರಾಕರಿಸಿದರು. ಇದರೊಂದಿಗೆ, “ಸಂವಿಧಾನದ ಪ್ರಕಾರ ಸೋಲಿನ ನಂತರ ಮುಖ್ಯಮಂತ್ರಿ ರಾಜೀನಾಮೆ ನೀಡುವುದು ಸಂಪ್ರದಾಯವಾದರೂ ಕಡ್ಡಾಯವಲ್ಲ” ಎಂಬ ವಾದ ಮುಂದಿಟ್ಟರು. ಇದರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಯಿತು. ಹಾಗಾಗಿ, ರಾಜ್ಯಪಾಲರು ಮಧ್ಯಪ್ರವೇಶಿಸಿ, ವಿಧಾನಸಭೆಯನ್ನು ವಿಸರ್ಜಿಸಿದರು. ಇದಾದ ತರುವಾಯ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ಮುಖ್ಯಮಂತ್ರಿಯಾಗಿ ಮೇ 9ರಂದು ಪ್ರಮಾಣವಚನ ಸ್ವೀಕರಿಸಿದರು. ಆದರೆ ತೃಣಮೂಲ ಕಾಂಗ್ರೆಸ್ ರಾಜ್ಯಪಾಲರ ಈ ನಿರ್ಧಾರವನ್ನ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಅದರಂತೆ, ಮಮತಾ 20ಕ್ಕೂ ಹೆಚ್ಚು ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಈ ಹಿಂದೆ ರಾಜೀನಾಮೆ ನೀಡಿದ್ದರೂ, ಮುಖ್ಯಮಂತ್ರಿ ಹುದ್ದೆಯನ್ನು ಮಾತ್ರ ಬಿಡಲಿಲ್ಲ.
ಕೊನೆಯದಾಗಿ, ಕೇವಲ ಕರ್ನಾಟಕವಲ್ಲದೇ ದೇಶದ ಹಿಂದುಳಿದ ವರ್ಗದ ಅತ್ಯಂತ ಬಲಿಷ್ಠ ನಾಯಕ ಎನಿಸಿಕೊಂಡ ಸಿದ್ದರಾಮಯ್ಯ ಅವರು, 2023ರಲ್ಲಿ ನಡೆದ ಅಧಿಕಾರ ಹಂಚಿಕೆ ಒಪ್ಪಂದದಂತೆ 2.5 ವರ್ಷ ಪೂರೈಸಿದ ನಂತರ, ಇಂದು ರಾಜೀನಾಮೆ ನೀಡಿದರು. ಲೋಕಭವನದಲ್ಲಿ ರಾಜ್ಯಪಾಲರಿಲ್ಲದ ಕಾರಣ, ಅವರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ, “ಹೈಕಮಾಂಡ್ ಆದೇಶ ಪಾಲಿಸಿದ್ದೇನೆ”. ಆದರೆ, ರಾಜ್ಯಸಭೆಗೆ ಹೋಗುವುದಿಲ್ಲ, ಬದಲಾಗಿ ಕೋಮುವಾದದ ವಿರುದ್ಧ ಹೋರಾಟ ಮುಂದುವರಿಸುತ್ತೇನೆ ಎಂದರು.
ಈ ಮೂಲಕ ಒಂದೇ ತಿಂಗಳಲ್ಲಿ ದಕ್ಷಿಣದ ಮೂರು ದಿಗ್ಗಜರು ಮತ್ತು ಈಶಾನ್ಯದ ಪ್ರಬಲ ನಾಯಕರು ಅಧಿಕಾರದಿಂದ ನಿರ್ಗಮಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣದ ಸಮೀಕರಣವನ್ನೇ ಬದಲಾಗಿದೆ. ಕೇರಳಂ ಮತ್ತು ತಮಿಳುನಾಡಿನಲ್ಲಿ ದಶಕಗಳ ದ್ರಾವಿಡ-ಎಡ ಪ್ರಾಬಲ್ಯಕ್ಕೆ ಕೊನೆಗೊಂಡ್ರೆ, ಬಂಗಾಳದಲ್ಲಿಯೂ ಟಿಎಂಸಿ ಆಟಕ್ಕೆ ಬ್ರೇಕ್ ಬಿದ್ದಿದೆ. ಜೊತೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಸ್ತಾಂತರದ ಪರೀಕ್ಷೆ ಎದುರಿಸುತ್ತಿದೆ.












