Last Updated:
Shruti Haasan: ಕಮಲ್ ಹಾಸನ್ ಮಗಳು ದಿಢೀರ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದೇಕೆ? 15 ಕೋಟಿ ಡಿಮ್ಯಾಂಡ್ ಮಾಡಿದ್ದೇಕೆ?
AI ತಂತ್ರಜ್ಞಾನವು (AI Technology) ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಂತೆ, ಸೆಲೆಬ್ರಿಟಿಗಳ (Celebrities) ಫೋಟೋಗಳನ್ನು ಡೌನ್ಲೋಡ್ ಮಾಡುವ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಫೇಜ್ ಜಾಹೀರಾತು ಹರಡುವ ಗ್ಯಾಂಗ್ಗಳು ಹೊರಹೊಮ್ಮಿವೆ. ಖ್ಯಾತ ಸೆಲೆಬ್ರಿಟಿಗಳು ಕೆಲವು ಪ್ರಾಡಕ್ಟ್ ರೆಕಮಂಡ್ ಮಾಡುತ್ತಿದ್ದಾರೆ ಅಥವಾ ಅವರು ಎಂದಿಗೂ ಕಾಣಿಸಿಕೊಳ್ಳದೇ ಇರುವ ಜಾಹೀರಾತುಗಳನ್ನೂ ಸೃಷ್ಟಿಸಿ ಶೇರ್ ಮಾಡಲಾಗುತ್ತಿದೆ.
ಈ ನಕಲಿ ಜಾಹೀರಾತುಗಳು ಉತ್ಪನ್ನಗಳನ್ನು ಮಾರಾಟ ಮಾಡುವ ಮತ್ತು ಅವುಗಳನ್ನು ಬಳಸಿಕೊಳ್ಳುವ ಸಾರ್ವಜನಿಕರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ, ಸೆಲೆಬ್ರಿಟಿಗಳ ಖ್ಯಾತಿ ಮತ್ತು ವ್ಯವಹಾರ ಮೌಲ್ಯವನ್ನು ಹಾನಿಗೊಳಿಸುತ್ತವೆ.
ವಿಶೇಷವಾಗಿ ನಟಿಯರ ಫೋಟೋಗಳು, ವೀಡಿಯೊಗಳು ಮತ್ತು ಧ್ವನಿಗಳು ಸಾರ್ವಜನಿಕ ವಲಯದಲ್ಲಿ ಸುಲಭವಾಗಿ ಲಭ್ಯವಿರುವುದರಿಂದ, ಅವುಗಳನ್ನು ಬಳಸಿಕೊಂಡು ನಕಲಿ ಜಾಹೀರಾತುಗಳನ್ನು ರಚಿಸುವುದು ಇನ್ನೂ ಸುಲಭವಾಗುತ್ತದೆ. ನಟಿ ಶ್ರುತಿ ಹಾಸನ್ ಕೂಡ ಪ್ರಸ್ತುತ ಇದರಿಂದ ಪ್ರಭಾವಿತರಾಗಿದ್ದಾರೆ.
ತಮ್ಮ ಹೆಸರು ಮತ್ತು ಫೋಟೋ ಬಳಸಿ ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಅನುಮತಿಯಿಲ್ಲದೆ ಮಾರಾಟ ಮಾಡಲಾಗುತ್ತಿದೆ ಮತ್ತು ನಕಲಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಶ್ರುತಿ ಹಾಸನ್ ಬಾಂಬೆ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಗುರುತನ್ನು ಅಕ್ರಮವಾಗಿ ಬಳಸುತ್ತಿರುವ ಕಂಪನಿಗಳು ಮತ್ತು ಸಂಬಂಧಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತಮಗೆ ಆಗಿರುವ ಹಾನಿಗೆ 15 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ನಟಿ ಐಶ್ವರ್ಯಾ ರೈ, ನಟ ಸಲ್ಮಾನ್ ಖಾನ್ ಮತ್ತು ಜೂನಿಯರ್ ಎನ್ಟಿಆರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ತಮ್ಮ ಹೆಸರುಗಳು, ಫೋಟೋಗಳು ಮತ್ತು ಗುರುತುಗಳ ಅನಧಿಕೃತ ಬಳಕೆಯನ್ನು ತಡೆಯಲು ಈಗಾಗಲೇ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಶ್ರುತಿ ಹಾಸನ್ ಅವರ ಸೇರ್ಪಡೆಯು AI ತಂತ್ರಜ್ಞಾನದ ದುರುಪಯೋಗದ ವಿರುದ್ಧ ಕಾನೂನು ಕ್ರಮಗಳು ತೀವ್ರಗೊಳ್ಳುವ ಸಾಧ್ಯತೆಯ ಪ್ರಮುಖ ಸಂಕೇತವಾಗಿದೆ.
Bangalore,Karnataka














