Last Updated:
ಗಂಡನ ಹೆಸರಲ್ಲಿದ್ದ ವಿಮಾ ಹಣವನ್ನು ಪಡೆಯಲು ಮತ್ತು ವಿವಾಹೇತರ ಸಂಬಂಧದಲ್ಲಿದ್ದ ತನ್ನ ಗೆಳೆಯನ ಜೊತೆ ಬದುಕಲು ಭಾರತಿ ಮತ್ತು ಆಕೆಯ ಪ್ರಿಯಕರ ಈ ಕೊಲೆಗೆ ಸಂಚು ರೂಪಿಸಿದ್ದರು. ಪೊಲೀಸ್ ತನಿಖೆಯಲ್ಲಿ ಭಾರತಿ ಮತ್ತು ಸುರೇಂದರ್ ಕುಮಾರ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಗಂಡ ಮತ್ತು ಆತನ ಹೆಸರಿನಲ್ಲಿದ್ದ 2 ಕೋಟಿ ರೂಪಾಯಿ ವಿಮಾ ಹಣವನ್ನು ಪಡೆಯಲು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಚೇರಿಯಲ್: ಮಹಿಳೆಯೊಬ್ಬಳು ವಿಮಾ ಹಣವನ್ನು (Insurance Money) ಪಡೆಯುವ ಸಲುವಾಗಿ ತನ್ನ ಪ್ರಿಯಕರ ಮತ್ತು ಇತರ ಇಬ್ಬರ ಸಹಾಯದಿಂದ ತಾಳಿ ಕಟ್ಟಿದ ಪತಿಯನ್ನೇ ಕೊಂದು ನಂತರ ಅಪಘಾತದ ಕಥೆ ಕಟ್ಟಿರುವ ಘಟನೆ ತೆಲಂಗಾಣದಲ್ಲಿ (Telangana News) ನಡೆದಿದೆ.
ಭಾರತಿ ಎಂಬ ಮಹಿಳೆ ಕೆಲ ವರ್ಷಗಳ ಹಿಂದೆ ಸೈನಿ ಕುಮಾರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆದರೆ ಆಕೆ ತನ್ನ ಜೊತೆ ಅನೈತಿಕ ಸಂಬಂಧ ಹೊಂದಿರುವ ಲಗಿಸೆಟ್ಟಿ ಸುರೇಂದರ್ ಎಂಬಾತನ ಜೊತೆ ಸೇರಿ, ತನ್ನ ಪತಿ ಸೈನಿ ಕುಮಾರ್ ನನ್ನು ಕೊಲೆ ಮಾಡಲು ಇಬ್ಬರು ವ್ಯಕ್ತಿಗಳಿಗೆ ಸುಪಾರಿ ಕೊಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಭಾರತಿ, ಆಕೆಯ ಪ್ರಿಯಕರ ಸುರೇಂದರ್ ಮತ್ತು ಇಬ್ಬರು ಸುಪಾರಿ ಹಂತಕರಲ್ಲಿ ಒಬ್ಬನಾದ ಶ್ರೀರಾಮ್ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಸುಪಾರಿ ಹಂತಕ ರಾಮ್ ಮಲ್ಲೇಶ್ ತಲೆಮರೆಸಿಕೊಂಡಿದ್ದು, ಅವನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇಲ್ಲಿನ ಗುಡಿಪೇಟೆಯ 45 ವರ್ಷದ ಸೈನಿ ಕುಮಾರ್, ಮೇ 22 ರಂದು ರಸ್ತೆಬದಿಯಲ್ಲಿ ತೀವ್ರವಾಗಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿತ್ತು. ಆಂಬ್ಯುಲೆನ್ಸ್ನಲ್ಲಿ ಕರೀಂನಗರದ ಆಸ್ಪತ್ರೆಗೆ ಸಾಗಿಸುವಾಗ ಅವರು ನಿಧನರಾದರು. ಆರಂಭದಲ್ಲಿ ರಸ್ತೆ ಅಪಘಾತ ಎಂದು ಭಾವಿಸಲಾಗಿದ್ದ ಇದು ನಂತರ ಯೋಜಿತ ಕೊಲೆ ಎಂದು ತಿಳಿದುಬಂದಿದೆ.
ಗಂಡನ ಹೆಸರಲ್ಲಿದ್ದ ವಿಮಾ ಹಣವನ್ನು ಪಡೆಯಲು ಮತ್ತು ವಿವಾಹೇತರ ಸಂಬಂಧದಲ್ಲಿದ್ದ ತನ್ನ ಗೆಳೆಯನ ಜೊತೆ ಬದುಕಲು ಭಾರತಿ ಮತ್ತು ಆಕೆಯ ಪ್ರಿಯಕರ ಈ ಕೊಲೆಗೆ ಸಂಚು ರೂಪಿಸಿದ್ದರು. ಪೊಲೀಸ್ ತನಿಖೆಯಲ್ಲಿ ಭಾರತಿ ಮತ್ತು ಸುರೇಂದರ್ ಕುಮಾರ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಗಂಡ ಮತ್ತು ಆತನ ಹೆಸರಿನಲ್ಲಿದ್ದ 2 ಕೋಟಿ ರೂಪಾಯಿ ವಿಮಾ ಹಣವನ್ನು ಪಡೆಯಲು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಜನವರಿ 2025 ರಿಂದ ಭಾರತಿ ತನ್ನ ಪತಿಯ ಜೀವ ವಿಮಾ ಪಾಲಿಸಿಗಳಿಗೆ ಪ್ರೀಮಿಯಂಗಳನ್ನು ಪಾವತಿಸುತ್ತಿದ್ದಳು. ಸೈನಿ ಕುಮಾರ್ ರಸ್ತೆ ಅಪಘಾತದಲ್ಲಿ ಸತ್ತರೆ, ಅವರಿಗೆ ಸುಮಾರು 2 ಕೋಟಿ ರೂ. ಸಿಗುತ್ತದೆ ಎಂದು ಅವರು ಅಂದಾಜಿಸಿದ್ದರು.
ಇದಕ್ಕೂ ಮೊದಲು ಸೈನಿ ಕುಮಾರ್ ಗುಡಿಪೇಟೆಯ ರಾಮ್ ಮಲ್ಲೇಶ್ನಿಂದ 60,000 ರೂ. ಸಾಲ ಪಡೆದಿದ್ದರು, ಆದರೆ ಆ ಹಣವನ್ನು ಮರುಪಾವತಿಸಲು ವಿಫಲರಾಗಿದ್ದರು. ಈ ವೇಳೆ ಮಲ್ಲೇಶ್ಗೆ ಭಾರತಿಯ ಪರಿಚಯವಾಗಿದೆ. ಕಳೆದ ತಿಂಗಳು, ಭಾರತಿ ಮತ್ತು ಸುರೇಂದರ್, ಮಲ್ಲೇಶ್ಗೆ ಸೈನಿ ಕುಮಾರ್ ಅವರನ್ನು ಕೊಂದರೆ ಒಟ್ಟು 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿ 2 ಲಕ್ಷ ರೂ.ಗಳನ್ನು ಅಡ್ವಾನ್ಸ್ ನೀಡಿದ್ದರು. ಮಲ್ಲೇಶ್ ಒಬ್ಬಂಟಿಯಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಆತ ಮಂಚೇರಿಯಲ್ನ ಎಲ್ಐಸಿ ಕಾಲೋನಿಯ ಶ್ರೀರಾಮ್ ಎಂಬಾತನನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದಾನೆ.
ಸೈನಿ ಕುಮಾರ್ ಅವರ ತಾಯಿ ಲಕ್ಷ್ಮಿ ಅವರಿಗೆ ರಾಮ್ ಮಲ್ಲೇಶ್ ಮೇಲೆ ಅನುಮಾನ ಬಂದಿದೆ ಎಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ, ಭಾರತಿ ಮತ್ತು ಸುರೇಂದರ್ ನಡುವಿನ ಅನೈತಿಕ ಸಂಬಂಧದ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ. ಇಬ್ಬರನ್ನು ಬಾಯಿಬಿಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಈಟಿವಿ ಭಾರತ್ ವರದಿ ಮಾಡಿದೆ.
Mancherial,Adilabad,Telangana
May 27, 2026 12:49 PM IST













