Shiva Rajkumar: ಶಿವಣ್ಣನ ಜನ್ಮದಿನದಂದು ‘ಶಕ್ತಿಧಾಮ’ಕ್ಕೆ ಶಕ್ತಿ ತುಂಬಲಿರೋ ಫ್ಯಾನ್ಸ್ | | ACTPnews

ಶಿವಣ್ಣನ ಜನ್ಮದಿನದಂದು 'ಶಕ್ತಿಧಾಮ'ಕ್ಕೆ ಶಕ್ತಿ ತುಂಬಲಿರೋ ಅಭಿಮಾನಿ ದೇವರುಗಳು!


Last Updated:

ಶಿವರಾಜ್ ಕುಮಾರ್ ಜನ್ಮದಿನವನ್ನ ಮತ್ತಷ್ಟು ಅರ್ಥಪೂರ್ಣವಾಗಿಯೇ ಆಚರಿಸಲು ಫ್ಯಾನ್ಸ್ ಪ್ಲಾನ್ ಮಾಡಿದ್ದಾರೆ. ಮೈಸೂರಿನಲ್ಲಿರೋ ಶಕ್ತಿಧಾಮಕ್ಕೆ ಈ ದಿನ ಸಹಾಯ ಮಾಡೋಕೆ ಮುಂದಾಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಶಿವಣ್ಣನ ಜನ್ಮದಿನದಂದು 'ಶಕ್ತಿಧಾಮ'ಕ್ಕೆ ಶಕ್ತಿ ತುಂಬಲಿರೋ ಅಭಿಮಾನಿ ದೇವರುಗಳು!
ಶಿವಣ್ಣನ ಜನ್ಮದಿನದಂದು ‘ಶಕ್ತಿಧಾಮ’ಕ್ಕೆ ಶಕ್ತಿ ತುಂಬಲಿರೋ ಅಭಿಮಾನಿ ದೇವರುಗಳು!

ಶಿವರಾಜ್ ಕುಮಾರ್ (Shiva Rajkumar) ಜನ್ಮ ದಿನಕ್ಕೆ (Birthday) ವಿಶೇಷ ಪ್ಲಾನ್ ಆಗಿದೆ. ರಾತ್ರಿ 12 ಗಂಟೇನೆ ಸೆಲೆಬ್ರೇಷನ್ ಶುರು ಆಗುತ್ತದೆ. ಸಿಡಿಮದ್ದು ಸಿಡಿಸಿ ಸಂಭ್ರಮಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ. ಅಭಿಮಾನಿಗಳಿಗೆ ಶಿವಣ್ಣ (Shivanna) ಒಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಯಾರೂ ಕೇಕ್ ತರಬೇಡಿ, ಗಿಫ್ಟ್ ಕೂಡ ತರೋಕೆ ಹೋಗ್ಬೇಡಿ. ಆ ದಿನ ನಿಮ್ಮ ಪರವಾಗಿ ನಾನೇ ಒಂದು ಕೇಕ್ ಕಟ್ ಮಾಡ್ತೀನಿ ಅಂತ ಹೇಳಿದ್ದಾರೆ. ಆದರೆ, ಈ ದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಇನ್ನೂ ಒಂದು ಕೆಲಸ ಮಾಡುತ್ತಿದ್ದಾರೆ. ಅದು ಶಕ್ತಿಧಾಮಕ್ಕೆ (Shaktidhama) ಶಕ್ತಿ ತುಂಬುವ ಕೆಲಸ ಅಂತಲೇ ಹೇಳಬಹುದು. ಅದರ ವಿವರ ಮುಂದೆ ಇದೆ ಓದಿ.

ಜುಲೈ-12 ರಂದು ಜನ್ಮ ದಿನ

ಶಿವಣ್ಣನ ಜನ್ಮ ದಿನ ಜುಲೈ-12 ರಂದು ಇದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಒಂದು ಮನವಿ ಮಾಡಿದ್ದರು. ತಾವು ಯಾರೂ ಕೇಕ್ ಮತ್ತು ಇತರ ಉಡುಗೊರೆಯನ್ನ ತರಬೇಡಿ. ಹಾಗೆ ಬನ್ನಿ, ಆ ದಿನ ಸಿಗೋಣ, ಖುಷಿಪಡೋಣ ಅಂತಲೇ ವಿಡಿಯೋ ಮೂಲಕವೇ ಶಿವಣ್ಣ ಹೇಳಿದ್ದಾರೆ.
Shiva Rajkumar Fans step forward to help mysurus shaktidhama to make birthday meaningful

ಶಕ್ತಿಧಾಮಕ್ಕೆ ಫ್ಯಾನ್ಸ್ ಸಹಾಯ

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)

ಆದರೆ, ಅಭಿಮಾನಿಗಳು ಇದೀಗ ಇನ್ನೂ ಒಂದು ಕೆಲಸ ಮಾಡುತ್ತಿದ್ದಾರೆ. ಶಿವಣ್ಣನ ಜನ್ಮ ದಿನವನ್ನ ಇನ್ನಷ್ಟು ಅರ್ಥ ಪೂರ್ಣ ಮಾಡುತ್ತಿದ್ದಾರೆ. ಮೈಸೂರಿನಲ್ಲಿರೋ ಶಕ್ತಿಧಾಮಕ್ಕೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ.

ಶಕ್ತಿಧಾಮಕ್ಕೆ ಫ್ಯಾನ್ಸ್ ಸಹಾಯ

ಡಾಕ್ಟರ್ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಈ ಒಂದು ಶಕ್ತಿಧಾಮವನ್ನ ಸ್ಥಾಪಿಸಿದ್ದಾರೆ. ಹೆಣ್ಣು ಮಕ್ಕಳಿಗೆ ನೆರವಾಗಲೆಂದೇ ಈ ಒಂದು ಶಕ್ತಿಧಾಮವನ್ನ ಶುರು ಮಾಡಿದ್ದರು.

ಶಕ್ತಿಧಾಮಕ್ಕೆ ಸಹಾಯ ಮಾಡೋರು

ಶಿವಣ್ಣನ ಜನ್ಮ ದಿನಕ್ಕೆ ಬರೋ ಅಭಿಮಾನಿಗಳು ಯಾರ ಕೈಯಲ್ಲೂ ದುಡ್ಡು ಕೊಡ್ಬೇಕಿಲ್ಲ. ನೇರವಾಗಿಯೇ ಶಕ್ತಿಧಾಮದ ಎಸ್ ಆರ್ ಕೆ ಚಾರಿಟಬಲ್ ಟ್ರಸ್ಟ್ ಬ್ಯಾಂಕ್ ಖಾತೆಗೆ ದುಡ್ಡು ಕಳಿಸಬೇಕು ಅಂತ ಶಿವಣ್ಣನ ಫ್ಯಾನ್ಸ್ ಹೇಳಿಕೊಂಡಿದ್ದಾರೆ.

ಇನ್ನುಳಿದಂತೆ ಇದು ಒಂದು ಒಳ್ಳೆ ಕೆಲಸವೇ ಆಗಿದೆ. ಸುಮ್ನೆ ಕೇಕ್ ಮತ್ತು ಇತರ ಉಡುಗೊರೆ ತಂದು ವೇಸ್ಟ್ ಮಾಡುವ ಬದಲು ಶಕ್ತಿಧಾಮಕ್ಕೆ ದುಡ್ಡು ಹಾಕಿದರ ಒಳ್ಳೆಯದು ಅನಿಸುತ್ತದೆ. ಹಾಗಾಗಿಯೇ ಈ ಸಲ ಶಿವಣ್ಣನ ಫ್ಯಾನ್ಸ್ ಈ ಒಂದು ಕೆಲಸ ಮಾಡೋಕೆ ಮುಂದಾಗಿದ್ದಾರೆ.

Shiva Rajkumar Fans step forward to help mysurus shaktidhama to make birthday meaningful

ಜುಲೈ-12 ಮಧ್ಯ ರಾತ್ರಿನೇ ಸಂಭ್ರಮ
ಜುಲೈ-12 ಮಧ್ಯ ರಾತ್ರಿನೇ ಸಂಭ್ರಮ

ಜುಲೈ-12 ರಂದು ಮಧ್ಯ ರಾತ್ರಿ 12 ಗಂಟೆಗೆ ಸಂಭ್ರಮ ಶುರು ಆಗುತ್ತದೆ. ಸಿಡಿಮದ್ದು ಸಿಡಿಸಿಯೇ ಸೆಲೆಬ್ರೇಷನ್ ಮಾಡಲು ಪ್ಲಾನ್ ಮಾಡಲಾಗಿದೆ.

ಅಭಿಮಾನಿಗಳ ಪರವಾಗಿಯೇ ಶಿವಣ್ಣ ಒಂದೇ ಒಂದು ಕೇಕ್ ಅನ್ನ ಕಟ್ ಮಾಡಲಿದ್ದಾರೆ. ಅದು ಬಿಟ್ಟರೆ, ಕೇಕ್ ಮತ್ತು ಉಡುಗೊರೆ ತರಬೇಡಿ ಅಂತಲೇ ಕೇಳಿಕೊಂಡಿದ್ದಾರೆ. ಹಾಗೆ ಅಭಿಮಾನಿಗಳು ಶಿವಣ್ಣನ 64 ನೇ ಜನ್ಮವನ್ನ ಇನ್ನಷ್ಟು ಅರ್ಥ ಪೂರ್ಣವಾಗಿಯೇ ಆಚರಿಸಲು ಶಕ್ತಿಧಾಮಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ ಅಂತ ಹೇಳಬಹುದು.

ಎ ಫಾರ್ ಆನಂದ್ ಸ್ಪೆಷಲ್ ಪ್ರೋಮೋ

ಈ ಒಂದು ಜನ್ಮ ದಿನಕ್ಕೆ ಎ ಫಾರ್ ಆನಂದ್ ಚಿತ್ರದಿಂದ ವಿಶೇಷ ಪ್ರೋಮೋ ರಿಲೀಸ್ ಆಗುತ್ತಿದೆ. ಈ ವಿಷಯವನ್ನ ಚಿತ್ರದ ಡೈರೆಕ್ಟರ್ ಶ್ರೀನಿ ಹೇಳಿಕೊಂಡಿದ್ದಾರೆ.

ಶಿವಣ್ಣನ ಜನ್ಮ ದಿನಕ್ಕೆ ಮತ್ಯಾವ ಹೊಸ ಚಿತ್ರಗಳು ಅನೌನ್ಸ್‌ ಆಗುತ್ತವೆಯೋ ನೋಡ್ಬೇಕು. ಶಿವಣ್ಣ ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರ ಒಪ್ಪಿರೋದು ಗೊತ್ತೇ ಇದೆ.

ಕನ್ನಡದಲ್ಲಿ 666 ಆಪರೇಷನ್ ಡ್ರೀಮ್ ಥಿಯೇಟ್, ಬೇಲ್, ಡ್ಯಾಡ್ ಸಿನಿಮಾಗಳು ತಮ್ಮದೇ ರೀತಿಯಲ್ಲಿಯೇ ಸದ್ದು ಮಾಡುತ್ತಿವೆ. ಇವುಗಳ ಇತರ ಹೊಸ ಮಾಹಿತಿ ಈ ದಿನ ಏನು ಹೊರಗೆ ಬೀಳುತ್ತದೆ ಅನ್ನುವ ಕುತೂಹಲ ಹೆಚ್ಚಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *