ಕನ್ನಡ ಡ್ಯಾಡ್ ಕಂಪ್ಲೀಟ್
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)
ಈ ಚಿತ್ರ ಅಲ್ಲದೆ ತಮಿಳಿನ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಅಬಿಶಾನ್ ಜೀವಿಂತ್ ಈ ಚಿತ್ರದ ನಾಯಕರಾಗಿದ್ದಾರೆ. ಟೂರಿಸ್ಟ್ ಫ್ಯಾಮಿಲಿ ಚಿತ್ರವನ್ನ ಈ ಅಬಿಶಾನ್ ಜೀವಿಂತ್ ಡೈರೆಕ್ಷನ್ ಮಾಡಿದ್ದಾರೆ.
ಆದರೆ, ಶಿವಣ್ಣ ಅಭಿನಯಿಸಿರೋ ಚಿತ್ರದಲ್ಲಿ ಅಬಿಶಾನ್ ಜೀವಿಂತ್ ನಾಯಕರಾಗಿದ್ದಾರೆ. ನಾಯಕ ಅಪ್ಪನ ಪಾತ್ರದಲ್ಲಿ ಶಿವಣ್ಣ ಇಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ರಾಜಕಾರಣಿ ಗುಮ್ಮಡಿ ನರಸಯ್ಯನವರ ಕತೆ ಇದೆ. ಸರಳ ರಾಜಕಾರಣಿ ಜೀವನಾಧರಿತ ಈ ಚಿತ್ರದಲ್ಲಿ ಗುಮ್ಮಡಿ ನರಸಯ್ಯ ಪಾತ್ರದಲ್ಲಿಯೇ ಶಿವಣ್ಣ ಅಭಿನಯಿಸುತ್ತಿದ್ದಾರೆ.
ಈ ಚಿತ್ರ ಅನೌನ್ಸ್ ಆಗಿದೆ. ಇನ್ನು ಶುರು ಆಗಿರೋ ಸುದ್ದಿ ಏನೂ ಇಲ್ಲ. ಆದರೆ, ಸಿನಿಮಾದ ಪೋಸ್ಟರ್‌ಗಳು ರಿಲೀಸ್ ಆಗಿದೆ. ಇತ್ತಿಚಿಗೆ ಪೆದ್ದಿ ಚಿತ್ರ ರಿಲೀಸ್ ಆಗಿದೆ. ಇದರಲ್ಲಿ ಗೌರ್ ನಾಯ್ಡು ಅನ್ನುವ ಪಾತ್ರವನ್ನೆ ಶಿವಣ್ಣ ಮಾಡಿದ್ದರು. ಜನರಿಗೂ ಈ ಕುಸ್ತಿ ಉಸ್ತಾದ್ ಪಾತ್ರ ಹೆಚ್ಚು ಇಷ್ಟ ಆಗಿತ್ತು ಅಂತಲೂ ಹೇಳಬಹುದು.
ಶಿವರಾಜ್ ಕುಮಾರ್ ಅವರು ಡ್ಯಾಡ್ ಅನ್ನುವ ಚಿತ್ರ ಒಪ್ಪಿದ್ದರು. ಈ ಚಿತ್ರದ ಕೆಲಸ ಅಷ್ಟೆ ತೀವ್ರಗತಿಯಲ್ಲಿಯೇ ಸಾಗಿದೆ. ಐದಾರು ತಿಂಗಳಲ್ಲಿಯೇ ಕಂಪ್ಲೀಟ್ ಕೂಡ ಆಗಿದೆ ನೋಡಿ.
ಬೇಲ್ ಸೂಪರ್ ಟೀಸರ್
ಅಪ್ಪ ಮತ್ತು ಮಗಳ ಈ ಚಿತ್ರದಲ್ಲಿ ಎಮೋಷನಲ್ ಕಂಟೆಂಟ್ ಇದೆ. ಇದರೊಟ್ಟಿಗೆ ಅಪ್ಪ ಹಾಗೂ ಮಗಳ ಬಾಂಧವ್ಯದ ಕತೆನೂ ಇದೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ಶಿವಣ್ಣ ಬಾಂಡ್ ಪ್ರಕಾಶ್ ಪಾತ್ರ ಮಾಡಿದ್ದಾರೆ. ಈ ಒಂದು ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ಇದ್ದಾರೆ. ಅದಿತಿ ಬಾಲನ್, ಪ್ರಿಯಾಂಕಾ ಮೋಹನ್ ಹೀಗೆ ಇನ್ನು ಹಲವು ಪಾತ್ರಗಳೂ ಇವೆ.
ಬೇಲ್ ಚಿತ್ರದಲ್ಲಿ ಶಿವಣ್ಣ ನಿವೃತ್ತ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಆದರೆ, ಡೈರೆಕ್ಟರ್ ಪವನ್ ಒಡೆಯರ್ ಈ ವಿಚಾರವನ್ನ ಇನ್ನು ಅಧಿಕೃತವಾಗಿ ರಿವೀಲ್ ಮಾಡಿಲ್ಲ.
ಶಿವಣ್ಣ ಒಪ್ಪಿರೋ ಸಿನಿಮಾ
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)
ಆದರೆ, ಈ ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಇದರಲ್ಲಿ ಬೇರೆ ಯಾವುದೇ ಪಾತ್ರಗಳಿಲ್ಲ. ಶಿವಣ್ಣನ ಪಾತ್ರ ಒಂದೇ ಇದೆ. ಆದರೂ ಅಷ್ಟೆ ಎಫೆಕ್ಟಿವ್ ಆಗಿಯೇ ಇಲ್ಲಿ ಶಿವಣ್ಣ ಕಾಣಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಶಿವಣ್ಣ ಇನ್ನೂ ಒಂದು ಚಿತ್ರ ಒಪ್ಪಿದ್ದಾರೆ. ಈ ಚಿತ್ರಕ್ಕೆ ಎ ಫಾರ್ ಆನಂದ್ ಅಂತಲೇ ಹೆಸರಿಟ್ಟಿದ್ದಾರೆ. ಘೋಸ್ಟ್ ಡೈರೆಕ್ಟರ್ ಶ್ರೀನಿ ಈ ಚಿತ್ರ ಮಾಡುತ್ತಿದ್ದಾರೆ.
ಶಿವಣ್ಣನ ಜನ್ಮ ದಿನಕ್ಕೆ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಜುಲೈ-12 ರಂದು ಬೆಳಗ್ಗೆ 8 ಗಂಟೆಗೆ ಈ ಟೀಸರ್ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.













