Last Updated:
ರಾಮ್ ಚರಣ್ ಲಾಂಗ್ ಏನೋ ಹಿಡಿದಿದ್ದಾರೆ. ಆದರೆ, ಜಾನ್ವಿ ಕಪೂರ್ ಆ ತರ ಮಾಡಲಿಲ್ಲ. ಶಿವಣ್ಣ ಹೇಳಿದ ಡೈಲಾಗ್ ಸಖತ್ ಆಗಿಯೇ ಹೇಳಿದ್ದಾರೆ. ಈ ಲಾಂಗ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
“ಲಾಂಗ್” ಬ್ರ್ಯಾಂಡ್ ಅಂಬಾಸೆಡರ್ (Brand Ambassador) ಯಾರು? ಅದು ಶಿವಣ್ಣ (Shivanna) ಅಂತ ಹೇಳ್ಬೇಕಿಲ್ಲ. ಲಾಂಗ್ ಹಿಡಿದು ಡೈಲಾಗ್ ಹೊಡೆಯೋ ಶಿವಣ್ಣ ಎಲ್ಲರಿಗೂ ಇಷ್ಟ ಆಗುತ್ತಾರೆ. ಶಿವಣ್ಣ ಇದ್ದಾರೆ ಅಂದ್ರೆ ಆಯಿತು. ಅಲ್ಲಿ ಲಾಂಗ್ ಜೊತೆಗೆ ಒಂದು ಡೈಲಾಗ್ (Dialogue) ಇದ್ದೇ ಇರುತ್ತದೆ. ಈ ಒಂದು ಡೈಲಾಗ್ ಪೆದ್ದಿ ಚಿತ್ರದ (Peddi Movie) ಸಂದರ್ಶನದಲ್ಲೂ ಇತ್ತು. ಆ್ಯಕರ್ ಅನುಶ್ರೀ ಈ ಚಾನ್ಸ್ ಮಿಸ್ ಮಾಡಿಕೊಳ್ಳಲೇ ಇಲ್ಲ. ಅದನ್ನ ಸರಿಯಾಗಿಯೇ ಬಳಕೆ ಮಾಡಿಕೊಂಡರು. ಜಾನ್ವಿ ಕೈಯಲ್ಊ ಡಮ್ಮಿ ಲಾಂಗ್ ಕೊಟ್ಟರು. ಪೆದ್ದಿ ಡೈಲಾಗ್ ಹೇಳಿಸಿಯೇ ಬಿಟ್ಟರು. ಈ ಕ್ಷಣದ ಇನ್ನಷ್ಟು ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ಓದಿ.
ಗುರು ಶಿಷ್ಯರ ಬಾಂಡಿಂಗ್
ಸೈಲೆಂಟ್ ಆಗಿದ್ದರೆ ರಾಮ, ವೈಲೆಂಟ್ ಆದ್ನೋ ರಾವಣ ಅಂತ ದಿ ವಿಲನ್ ಚಿತ್ರದ ಡೈಲಾಗ್ ಹೇಳಿದರು. ಇದನ್ನೆ ಜಾನ್ವಿ ರಿಪೀಟ್ ಮಾಡಿದರು. ಅಷ್ಟೆ ಖುಷಿಯಲ್ಲಿಯೇ ಈ ಡೈಲಾಗ್ ಹೇಳಿದರು ನೋಡಿ.
ರಾಮ್ ಚರಣ್ ಲಾಂಗ್ ಹಿಡಿದರು. ಆದರೆ, ಡೈಲಾಗ್ ಹೇಳೋಕೆ ಬೇಡೆ ಅಂದರು. ಜೋಗಯ್ಯ ಚಿತ್ರದ ಬರಕೋ ಮುಂದಾ ಪೇಜ್ ಅಲ್ಲಿ ಬರಕೋ ಅನ್ನುವ ಡೈಲಾಗ್ ಹೇಳಿ ಅಂತ ಅನುಶ್ರೀ ಹೇಳಿದರು. ಶಿವಣ್ಣ ಹೇಳೋಕೆ ರೆಡಿ ಇದ್ದರು.
ಆದರೆ, ರಾಮ್ ಚರಣ್ ಬೇಡ್ವೇ ಬೇಡ ಅಂತ ಹೇಳಿದರು. ಸಿನಿಮಾ ರಿಲೀಸ್ ಇದೆ. ಬಂದ್ಮೇಲೆ ಇದನ್ನ ಮಾಡೋಣ ಅಂತಲೂ ಹೇಳಿದರು. ಶಿವಣ್ಣನ ಡೈಲಾಗ್‌ಗಳನ್ನ ರೀಮೇಕ್ ಮಾಡೋಣ ಅಂತಲು ರಾಮ್ ಚರಣ್ ಶಿವಣ್ಣನ ಮುಂದೆ ಹೇಳಿಕೊಂಡರು. ಆದರೆ, ಜೋಗಯ್ಯ ಚಿತ್ರ ಡೈಲಾಗ್ ಹೇಳೋಕೆ ಹಿಂಜರಿದರು.
ಭಜರಂಗಿ ಚಿತ್ರದಲ್ಲಿ ಶಿವಣ್ಣ ಅದ್ಭುತವಾಗಿಯೇ ನಟಿಸಿದ್ದಾರೆ. ಈ ಚಿತ್ರ ಜನರ ಮನದಲ್ಲಿ ಇನ್ನೂ ಇದೆ. ಹಾಗೆ ಒಂದು ವೇಳೆ ರಾಮ್ ಚರಣ್ ಅವರು ನಿಮ್ಮ ಚಿತ್ರಗಳಲ್ಲಿ ಯಾವುದನ್ನ ರೀಮೇಕ್ ಮಾಡ್ಬೇಕು ಅಂತಲೇ ಅನುಶ್ರೀ ಇಲ್ಲಿ ಶಿವಣ್ಣನಿಗೆ ಕೇಳ್ತಾರೆ.
ಲಾಂಗ್ ಹಿಡಿದು ಡೈಲಾಗ್ ಹೊಡೆದ ಜಾನ್ವಿ
ಆಗಲೇ ಶಿವಣ್ಣ ಹೇಳ್ತಾರೆ. ನನ್ನ ಚಿತ್ರಗಳಲ್ಲಿ ಭಜರಂಗಿ ಚಿತ್ರವನ್ನ ರೀಮೇಕ್ ಮಾಡಿದ್ರೆ ಚೆನ್ನಾಗಿ ಇರುತ್ತದೆ. ಇದು ರಾಮ್ ಚರಣ್ ಅವರಿಗೆ ಸೂಟೇಬಲ್ ಆಗಿರುತ್ತದೆ. ಫಿಜಿಕ್ ಮತ್ತು ಲಾಂಗ್ ಹೇರ್ ಇರೋದ್ರಿಂದ ಚೆನ್ನಾಗಿ ಇರುತ್ತದೆ ಅನ್ನುವ ಅರ್ಥದಲ್ಲಿಯೇ ಶಿವಣ್ಣ ಇಲ್ಲಿ ಹೇಳಿದ್ದಾರೆ.
ಪೆದ್ದಿ ಚಿತ್ರ ಕಂಟೆಂಟ್ ಮೇಲೆ ಭಾರೀ ಭರವಸೆ ಇದೆ. ಚಿತ್ರ ತಂಡ ಇದನ್ನ ಹಲವು ಕಡೆ ಹೇಳಿಕೊಂಡಿದೆ. ರಾಮ್ ಚರಣ್ ಕೂಡ ಈ ಕತೆಯ ಮೇಲೆ ನಂಬಿಕೆ ಇಟ್ಟಿದ್ದಾರೆ.
ಒಂದು ಒಳ್ಳೆಯ ಕತೆ ಇರೋದ್ರಿಂದಲೇ ರಾಮ್ ಚರಣ್ ರಿಸ್ಕ್ ತೆಗೆದುಕೊಂಡಿದ್ದಾರೆ. ದೇಹ ದಂಡಿಸಿದ್ದಾರೆ. ಪಕ್ಕಾ ಪೈಲ್ವಾನ್ ರೀತಿನೇ ರೆಡಿ ಆಗಿದ್ದಾರೆ. ಚಿತ್ರದ ಇತರ ಕಲಾವಿದರು ಇದೇ ಎನರ್ಜಿಯಲ್ಲಿಯೇ ಕೆಲಸ ಮಾಡಿದ್ದಾರೆ.
ಮಚ್ಚು ಹಿಡಿದು ಶಿವಣ್ಣನ ಜೊತೆಗೆ ಡೈಲಾಗ್ ಹೊಡೆದ ಜಾನ್ವಿ; ಹಿಂಜರಿದ ರಾಮ್ ಚರಣ್!
ಈ ಚಿತ್ರದಲ್ಲಿ ಶಿವಣ್ಣ ಕುಸ್ತಿ ಕಲಿಸಿಕೊಡುವ ಗುರು ಆಗಿದ್ದಾರೆ. ಶಿಷ್ಯನ ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ. ಇವರ ಈ ಪಾತ್ರಗಳು ಈಗಾಗಲೇ ಜನರ ಗಮನ ಸೆಳೆದಿವೆ.
ಆದರೆ, ಇಡೀ ಚಿತ್ರದಲ್ಲಿ ಹೇಗೆ ಇರುತ್ತವೆ ಅನ್ನುವ ಕುತೂಹಲವೂ ಜಾಸ್ತಿ ಇದೆ. ಜೂನ್-4 ರಂದು ಈ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ಇದು ತೆರೆಗೂ ಬರ್ತಿದೆ.
ಮೊದಲ ದಿನದ ರೆಸ್ಪಾನ್ಸ್ ಮತ್ತು ಕಲೆಕ್ಷನ್ ಮೇಲೂ ಇದೀಗ ಎಲ್ಲ ಕಣ್ಣು ಇದೆ. ಆದರೆ, ಈ ಚಿತ್ರದ ಪ್ರೀಮಿಯರ್ ಶೋ ಜೂನ್-3 ರಂದೇ ಇದೆ. ಹಾಗಾಗಿಯೇ ಚಿತ್ರದ ರೆಸ್ಪಾನ್ಸ್ ರಿಲೀಸ್‌ನ ಒಂದು ದಿನ ಮೊದಲೇ ಗೊತ್ತಾಗುತ್ತದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













