Shiva Rajkumar: ಟೂರಿಸ್ಟ್ ಫ್ಯಾಮಿಲಿ ಅಬಿಶಾನ್ ಜೀವಿಂತ್ ಜೊತೆಗೆ ಶಿವಣ್ಣನ ಸಿನಿಮಾ; ಇಲ್ಲಿ ರೋಲ್ ಏನ್ ಗೊತ್ತಾ? | | ACTPnews

Tourist Family Director Abishan Jeevinth Shiva Rajkumar Tamil New Movie Launch


ಶಿವಣ್ಣನ ತಮಿಳು ಸಿನಿಮಾ

ನವ ನಿರ್ದೇಶಕ ಅಬಿಶಾನ್ ಜೀವಿಂತ್ ಈ ಚಿತ್ರದಲ್ಲಿ ನಾಯಕರಾಗಿದ್ದಾರೆ. ಆದರೆ, ಈ ಚಿತ್ರದಲ್ಲಿ ಇವರು ಆ್ಯಕ್ಟಿಂಗ್ ಮಾತ್ರ ಮಾಡುತ್ತಿದ್ದಾರೆ. ಗೌತಮ್ ಶಿವರಾಮನ್ ಈ ಚಿತ್ರನ್ನ ನಿರ್ದೇಶನ ಮಾಡುತ್ತಿದ್ದಾರೆ.

ಶಿವಣ್ಣನ ತಮಿಳು ಸಿನಿಮಾ

(ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್‌ಸ್ಟಾಗ್ರಾಮ್)

ಡ್ರಾಮಾ ಕಂಪನಿ ಈ ಚಿತ್ರವನ್ನ ನಿರ್ಮಿಸುತ್ತಿದೆ. ಸದ್ಯಕ್ಕೆ ಪ್ರೊಡಕ್ಷನ್ -1 ಅಂತಲೇ ಹೆಸರಿಟ್ಟಿದ್ದಾರೆ. ಚೆನ್ನೈ ಅಲ್ಲಿಯೇ ಈ ಚಿತ್ರ ಲಾಂಚ್ ಕೂಡ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಕೋರಿದ್ದಾರೆ.

ಅಪ್ಪನ ರೋಲ್

ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಅಪ್ಪನ ರೋಲ್ ಮಾಡಿದ್ದಾರೆ. ನಾಯಕ ನಟ ಅಬಿಶಾನ್ ಜೀವಿಂತ್ ತಂದೆಯ ರೋಲ್ ಅನ್ನೆ ಶಿವಣ್ಣ ಇಲ್ಲಿ ಮಾಡುತ್ತಿದ್ದಾರೆ.
ಅಪ್ಪ-ಮಗನ ಸ್ಟೋರಿ

ಈ ಚಿತ್ರ ಅಪ್ಪ ಮತ್ತು ಮಗನ ಎಮೋಷನಲ್ ಸ್ಟೋರಿ ಇರೋ ಚಿತ್ರವೇ ಆಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಹೇಗೆ ಕಾಣಿಸುತ್ತಾರೆ ಅನ್ನುವ ಕುತೂಹಲವೂ ಇದೆ.

ಎ. ಲಿಯಾನ್ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಜೂನ್-1 ರಂದು ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಆದಷ್ಟು ಬೇಗ ಚಿತ್ರದ ಶೂಟಿಂಗ್ ಕೂಡ ಶುರು ಆಗುತ್ತದೆ ಅನ್ನುವ ಮಾಹಿತಿಯನ್ನು ಸಿನಿಮಾ ತಂಡ ಕೊಟ್ಟಿದೆ.

Tourist Family Director Abishan Jeevinth Shiva Rajkumar Tamil New Movie Launch

ಅಪ್ಪನ ರೋಲ್

(ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್‌ಸ್ಟಾಗ್ರಾಮ್)

ಗೌತಮ್ ಶಿವರಾಮನ್ ಯಾರು

ಈ ಚಿತ್ರದ ಡೈರೆಕ್ಟರ್ ಗೌತಮ್ ಶಿವರಾಮನ್ ಈ ಹಿಂದೆ ಟೂರಿಸ್ಟ್ ಫ್ಯಾಮಿಲಿ ಚಿತ್ರದಲ್ಲಿ ಕೋ ಡೈರೆಕ್ಟರ್ ಆಗಿಯೇ ಕೆಲಸ ಮಾಡಿದ್ದರು. ಹೀಗೆ ಅಬಿಶಾನ್ ಜೀವಿಂತ್ ಜೊತೆಗೆ ಕೆಲಸ ಮಾಡಿದ್ದರು.

ಹಾಗೆ ಶಿವರಾಜ್ ಕುಮಾರ್ ಅವರಿಗೆ ಇದು ಮತ್ತೊಂದು ತಮಿಳು ಸಿನಿಮಾ ಆಗಿದೆ. ಈ ಹಿಂದೆ ಜೈಲರ್ ಚಿತ್ರ ಮಾಡಿದ್ದರು. ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲೂ ನಟಿಸಿದ್ದರು. ಜೈಲರ್-2 ಸಿನಿಮಾ ಕೂಡ ಮಾಡಿದ್ದಾರೆ. ಈ ಸಿನಿಮಾಗಳು ಆದ್ಮೇಲೆ ಈಗ ಈ ಚಿತ್ರ ಒಪ್ಪಿದ್ದಾರೆ.

ಪೆದ್ದಿ ಸಿನಿಮಾ

ಶಿವರಾಜ್ ಕುಮಾರ್ ಪರ ಭಾಷೆಯಲ್ಲಿ ಒಳ್ಳೆ ಸಿನಿಮಾಗಳನ್ನೆ ಮಾಡಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಅದು ತೆಲುಗು ಪೆದ್ದಿ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಗೌರ್ ನಾಯ್ಡು ಹೆಸರಿನ ಪಾತ್ರವನ್ನ ಶಿವಣ್ಣ ಮಾಡಿದ್ದಾರೆ.

ಕುಸ್ತಿ ಉಸ್ತಾದ್ ಪಾತ್ರ ಇದಾಗಿದೆ. ಪೆದ್ದಿ ರಾಮ್ ಚರಣ್ ಅವರಿಗೆ ಕುಸ್ತಿ ಕಲಿಸಿಕೊಡುವ ಗುರು ಆಗಿಯೇ ಶಿವಣ್ಣ ಇಲ್ಲಿ ನಟಿಸಿದ್ದಾರೆ. ಈ ಪಾತ್ರದ ಖದರ್ ಜೋರಾಗಿಯೇ ಇದೆ ಅಂತ ಹೇಳಬಹುದು.

ಅಬಿಶಾನ್ ಜೀವಿಂತ್ ಸಿನಿಮಾಗಳು

ಅಬಿಶಾನ್ ಜೀವಿಂತ್ ಡೈರೆಕ್ಟರ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಟೂರಿಸ್ಟ್ ಫ್ಯಾಮಿಲಿ ಅನ್ನುವ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆ ಕಲೆಕ್ಷನ್ ಕೂಡ ಮಾಡಿದೆ.

ಈ ಮೂಲಕ ಡೈರೆಕ್ಟರ್‌ ಅಬಿಶಾನ್ ಜೀವಿಂತ್ ಒಳ್ಳೆ ಹೆಸರು ತಂದುಕೊಟ್ಟಿದೆ. ಆದರೆ, ಅಬಿಶಾನ್ ಜೀವಿಂತ್ ನಾಯಕ ಕೂಡ ಆಗಿದ್ದಾರೆ. ವಿತ್ ಲವ್ ಅನ್ನುವ ಚಿತ್ರದ ಮೂಲಕವೇ ಹೀರೋ ಆಗಿದ್ದಾರೆ. ಮೇ-1 ಅಬಿಶಾನ್ ಜೀವಿಂತ್ ಜನ್ಮ ದಿನ ನೋಡಿ. ಈ ದಿನವೇ ಶಿವಣ್ಣನ ಜೊತೆಗಿನ ಚಿತ್ರ ಲಾಂಚ್ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed