Sharmila Mandre: 2024ರಲ್ಲಿ ಬಂದ ಬ್ಲಾಕ್​ಬಸ್ಟರ್ ಸಿನಿಮಾದ ನಿರ್ಮಾಪಕನ ಜೊತೆ ಶರ್ಮಿಳಾ ಮಾಂಡ್ರೆ ಮದುವೆ, ಗಾಳಿಪಟ ಚೆಲುವೆಗೆ ಕಂಕಣ ಭಾಗ್ಯ ’ sharmila mandre to get married | | ACTPnews

ಶರ್ಮಿಳಾ ಮಾಂಡ್ರೆ-ಸುಧನ್


Last Updated:

Sharmila Mandre: ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗುತ್ತಿದ್ದಾರೆ. ವರ ಯಾರು ಗೊತ್ತಾ? 2024ರಲ್ಲಿ ರಿಲೀಸ್ ಆದ ಬ್ಲಾಕ್​ಬಸ್ಟರ್ ಸಿನಿಮಾದ ನಿರ್ಮಾಪಕ.

ಶರ್ಮಿಳಾ ಮಾಂಡ್ರೆ-ಸುಧನ್
ಶರ್ಮಿಳಾ ಮಾಂಡ್ರೆ-ಸುಧನ್

ಕನ್ನಡದ ಖ್ಯಾತ ನಟಿ (Actress), ನವಗ್ರಹ, ಗಾಳಿಪಟದಂತಹ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸು ಗೆದ್ದ ಮುದ್ದು ಮುಖದ ಚೆಲುವೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ. ಶರ್ಮಿಳಾ ಮಾಂಡ್ರೆಗೆ (Sharmila Mandre) ಕಂಕಣ ಭಾಗ್ಯ ಕೂಡಿ ಬಂದಿದೆ.

ಹಸೆಮಣೆ ಏರಲು ಸಜ್ಜಾದ ಕನ್ನಡದ ಸ್ಟಾರ್ ನಟಿ ಶರ್ಮಿಳಾ ಮಾಂಡ್ರೆ ಅವರು 25ನೇ ತಾರೀಕಿನಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಶಾಸ್ತ್ರ ನಡೆಯಲಿದೆ ಎನ್ನಲಾಗಿದೆ.

ತಮಿಳಿನ ಖ್ಯಾತ ಪ್ರೊಡ್ಯೂಸರ್ ಅವರನ್ನು ನಟಿ ಮದುವೆಯಾಗಲಿದ್ದಾರೆ. ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿರುವ ಸುಧನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಶರ್ಮಿಳಾ ಮಾಂಡ್ರೆ ರೆಡಿಯಾಗಿದ್ದಾರೆ.

ಮಹಾರಾಜಾ ಸಿನಿಮಾದ ಪ್ರೊಡ್ಯೂಸರ್ ಸುಧನ್ ಅವರು ಕೈಹಿಡಿಯಲಿರುವ ಶರ್ಮಿಳಾ ಮಾಂಡ್ರೆ ಮದುವೆ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದೆ.

ಸುಧನ್ ಸುಂದರಂ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ‘ಪ್ಯಾಷನ್ ಸ್ಟುಡಿಯೋಸ್’ ಎಂಬ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾಗಿದ್ದು ವಿಜಯ್ ಸೇತುಪತಿ, ಅನುರಾಗ್ ಕಷ್ಯಪ್ ಅಭಿನಯಿಸಿದ ಮಾಹಾರಾಜಾದಂತಹ ಸಿನಿಮಾ ನಿರ್ಮಿಸಿದ್ದಾರೆ. ಮದುವೆ ನಂತರ ಶರ್ಮಿಳಾ ಮಾಂಡ್ರೆಯವರೂ ನಿರ್ಮಾಣದಲ್ಲಿ ತೊಡಗಿಸಿಕೊಳ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Aparichita Movie: 48 ವರ್ಷದ ಹಿಂದೆ ಹಿಂದಿಗೂ ರಿಮೇಕ್ ಆಗಿತ್ತು ಈ ಕನ್ನಡ ಸಿನಿಮಾ

2024ರಲ್ಲಿ ರಿಲೀಸ್ ಆದ ವಿಜಯ್ ಸೇತುಪತಿ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ‘ಮಹಾರಾಜ’ ನಿರ್ಮಾಣ ಮಾಡಿದ ಸುಧನ್ ಅವರು ಇತ್ತೀಚೆಗಷ್ಟೇ ರಿಲೀಸ್ ಆಗಿ ಭರ್ಜರಿ ಮೆಚ್ಚುಗೆ ಪಡೆದ ‘ತಾಯ್ ಕಿಳವಿ’ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ‘ಬೆಂಜ್’, ‘ಇರೈವನ್’ ಸೇರಿ ಹಲವು ಸಿನಿಮಾ ನಿರ್ಮಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports