Last Updated:
ಸ್ಯಾಂಡಲ್‌ವುಡ್‌ನ ಸುಂದರಿ ಶರ್ಮಿಳಾ ಮಾಂಡ್ರೆ ಭಾವಿ ಪತಿಯ ಸುಧನ್ ಸುಂದರಂ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಇವರ ಎಂಗೇಜ್‌ಮೆಂಟ್ ಕೂಡ ಆಗಿದೆ. ಈ ಕ್ಷಣದ ಕೆಲವು ವಿಶೇಷ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ಭಾವಿ ಪತಿ ಸುಧನ್ ಸುಂದರಂ ಜೊತೆಗಿನ ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಇವು ಎಂಗೇಜ್‌ಮೆಂಟ್‌ನ ವಿಶೇಷ ಕ್ಷಣದ ಫೋಟೋಗಳೇ ಆಗಿವೆ. ಈ ಫೋಟೋದಲ್ಲಿ ಇಬ್ಬರು ಬಿಳಿ ಬಣ್ಣದ ಉಡುಪು ತೊಟ್ಟಿದ್ದಾರೆ. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಶರ್ಮಿಳಾ ಮಾಂಡ್ರೆ ಈ ಫೋಟೊಗಳ ಜೊತಗೆ “And just like that” ಅಂತಲೂ ಬರೆದುಕೊಂಡಿದ್ದಾರೆ. ಇದರ ಅರ್ಥ ಸಿಂಪಲ್ ಆಗಿದೆ. ಎಲ್ಲವೂ ಸಡನ್ ಆಗಿಯೇ ನಡೆಯಿತು ಅನ್ನೋದೇ ಈ ಇಂಗ್ಲೀಷ್ ಸಾಲುಗಳ ಕನ್ನಡ ಅರ್ಥ ಆಗಿದೆ. ಇಲ್ಲಿ ಇನ್ನೂ ಒಂದು ವಿಶೇಷ ಗಮನಿಸಬಹುದು. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಸುಂದರಂ ಸಿಂಪಲ್ ಆಗಿಯೇ ಕಾಣಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ಎಲ್ಲೂ ಹೆವಿ ಮೇಕ್‌ಅಪ್ ಹಾಕಿದಂತೆ ಕಾಣೋದಿಲ್ಲ. ಸುಧನ್ ಸುಂದರಂ ಕೂಡ ಇಲ್ಲಿ ವಿಗ್ ಏನು ಹಾಕಿಕೊಳ್ಳಲು ಹೋಗಿಲ್ಲ. ಹ್ಯಾಗೆ ಇದ್ದಾರೋ ಹಾಗೆ ಕಾಣಿಸಿಕೊಂಡಿದ್ದಾರೆ. ಆದರೆ, ಬಿಯರ್ಡ್ ಟ್ರಿಮ್ ಮಾಡಿಸಿ ನೀಟ್ ಆಗಿಯೇ ಕಾಣಿಸುತ್ತಿದ್ದಾರೆ. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಸುಂದರಂ ಇತ್ತೀಚಿಗೆ ಎಂಗೇಜ್ ಆಗಿದ್ದಾರೆ. ಜೂನ್-25 ರಂದು ಇವರ ನಿಶ್ಚಿತಾರ್ಥ ಆಗಿದೆ. ಇನ್ನೇನು ಅತೀ ಶೀಘ್ರದಲ್ಲಿ ಮದುವೆನೂ ಆಗ್ತಾರೆ ಅನ್ನುವ ಸುದ್ದಿನೂ ಇದೆ. ಅಷ್ಟರಲ್ಲಿಯೇ ಶರ್ಮಿಳಾ ಮಾಂಡ್ರೆ ತಮ್ಮ ಎಂಗೇಜ್‌ಮೆಂಟ್ ಅಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳನ್ನ ಹಂಚಿಕೊಂಡಿದ್ದಾರೆ. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಶರ್ಮಿಳಾ ಮಾಂಡ್ರೆ ಅವರು ತಮ್ಮ ಈ ವಿಶೇಷ ಕ್ಷಣದ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿಯೇ ಹಂಚಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಹೆಸರಿನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಶೇರ್ ಮಾಡಿಕೊಂಡಿದ್ದಾರೆ. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಅಂದ್ಹಾಗೆ ಶರ್ಮಿಳಾ ಮಾಂಡ್ರೆ ಅವರ ಪತಿ ಸುಧನ್ ಸುಂದರಂ ಏನ್ ಮಾಡ್ತಾರೆ ಅನ್ನುವ ಪ್ರಶ್ನೆನು ಬರುತ್ತದೆ. ಅದಕ್ಕೆ ಉತ್ತರ ಬಹುತೇಕರಿಗೆ ಗೊತ್ತೇ ಇದೆ. ಅದನ್ನ ಇಲ್ಲಿ ಮತ್ತೆ ಹೇಳೋದಾದ್ರೆ, ಇವರು ಚಿತ್ರಗಳನ್ನ ನಿರ್ಮಿಸುತ್ತಾರೆ. ಅಂದ್ರೆ, ಇವರು ಸಿನಿಮಾ ನಿರ್ಮಾಪಕರೇ ಆಗಿದ್ದಾರೆ. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಸುಧನ್ ಸುಂದರಂ ಅವರು ತಮಿಳು ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರೇ ಆಗಿದ್ದಾರೆ. ಇವರದ್ದೇ ಒಂದು ಚಿತ್ರ ನಿರ್ಮಾಣ ಸಂಸ್ಥೆ ಇದೆ. ಇದಕ್ಕೆ ಪ್ಯಾಷನ್ ಸ್ಟುಡಿಯೋಸ್ ಅಂತ ಹೆಸರಿಟ್ಟಿದ್ದಾರೆ. ಈ ಸಂಸ್ಥೆ ಮೂಲಕ ಮಹಾರಾಜ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಅಭಿನಯಿಸಿದ್ದರು. ಇದು ಸೂಪರ್ ಹಿಟ್ ಕೂಡ ಆಗಿದೆ. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಶರ್ಮಿಳಾ ಮಾಂಡ್ರೆ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಆದರೆ, ಮೊದಲಿನಷ್ಟು ಅಲ್ವೇ ಅಲ್ಲ. ಕನ್ನಡದಲ್ಲಿ ಇತ್ತೀಚಿನ ಸಿನಿಮಾಗಳು ಅಂತ ಬಂದ್ರೆ, ಡೆವಿಲ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಒಂದು ರೋಲ್ ಮಾಡಿದ್ದರು. ಇದು ಚಿಕ್ಕ ಪಾತ್ರವೇ ಆಗಿತ್ತು. ಆದರೆ, ಅಷ್ಟೆ ಗಮನ ಸೆಳೆದಿತ್ತು. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
ಈ ಸಿನಿಮಾ ಆದ್ಮೇಲೆ ಈಗ ಶರ್ಮಿಳಾ ಮಾಂಡ್ರೆ ಅವರು ತಮ್ಮ ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಹೇಳಿದಂತೆ ಎಂಗೇಜ್ ಆಗಿದ್ದಾರೆ. ಇನ್ನೇನು ಮದುವೆ ಕೂಡ ಆಗುತ್ತದೆ ಅಂತಲೂ ಹೇಳಬಹುದು. (ಚಿತ್ರ ಕೃಪೆ: ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಮ್)
Location :
Bangalore [Bangalore],Bangalore,Karnataka
First Published :
Jun 28, 2026 11:40 AM IST













