Sharan New Movie: 80ರ ಕಾಲಘಟ್ಟದ ಕಥೆಯೊಂದಿಗೆ ಕನ್ನಡ ಸಿನಿಮಾ; ಇದರ ಹಿಂದಿದೆಯಾ 80ರ ದಶಕದ ಸ್ಫೂರ್ತಿ? | | ACTPnews

ಕನ್ನಡದಲ್ಲಿ 80 ರ ಕಾಲಘಟ್ಟದ ಕತೆಯ ಸಿನಿಮಾ!


Last Updated:

ಕನ್ನಡದಲ್ಲಿ 1980 ರ ಕಾಲಘಟ್ಟದ ಕಥೆಯ ಚಿತ್ರ ಸೆಟ್ಟೇರಿದೆ. ಸದ್ಯದ 80 ರ ಟ್ರೆಂಡ್ ಇದಕ್ಕೆ ಸಪೂರ್ತಿ ಇದಿಯಾ ಅನ್ನುವ ಪ್ರಶ್ನೇನೂ ಇದೆ. ಇದಕ್ಕೆ ಚಿತ್ರದ ನಾಯಕ ಉತ್ತರ ಕೊಟ್ಟಿದ್ದಾರೆ. ಅದೇನು ಅನ್ನುವುದು ಇಲ್ಲಿದೆ ಓದಿ.

ಕನ್ನಡದಲ್ಲಿ 80 ರ ಕಾಲಘಟ್ಟದ ಕತೆಯ ಸಿನಿಮಾ!
ಕನ್ನಡದಲ್ಲಿ 80 ರ ಕಾಲಘಟ್ಟದ ಕತೆಯ ಸಿನಿಮಾ!

ಸದ್ಯ ಎಲ್ಲೆಡೆ 80 ರ ಟ್ರೆಂಡ್ (80s Trend) ಶುರು ಆಗಿದೆ. ಇದರ ನಡುವೆ ಕನ್ನಡದಲ್ಲಿ (Kannada) “ಬೊಮ್ ಭಾಯ್” (Bom Bhai) ಅನ್ನುವ ಚಿತ್ರ ಶುರು ಆಗಿದೆ. ಈ ಚಿತ್ರಕ್ಕೆ ಈ 80 ರ ಟ್ರೆಂಡ್ (80s Trend) ಸ್ಪೂರ್ತಿನಾ? ಈ ಒಂದು ಪ್ರಶ್ನೆ ಸಹಜವಾಗಿಯೇ ಬರುತ್ತೆ. ಕಾರಣ ಈ ಚಿತ್ರದ ಕಥಾಹಂದರ 1980 ಕಾಲಘಟ್ಟದ್ದೇ ಆಗಿದೆ. ಆದರೆ, ಈ ಟ್ರೆಂಡ್ ಶುರು ಆಗುವ ಮುಂಚೇನೆ ಕತೆ ರೆಡಿ ಆಗಿದೆ ಅಂತ ಚಿತ್ರದ ನಾಯಕ ಹೇಳಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಇಬ್ಬರು ನಾಯಕರಿದ್ದಾರೆ. ಒಬ್ಬ ನಾಯಕಿನೂ ಇವರ ಈ ಚಿತ್ರದಲ್ಲಿದ್ದಾರೆ. ಈ ಚಿತ್ರದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.

ಬೊಮ್ ಭಾಯ್ ಸಿನಿಮಾ

ಬೊಮ್ ಭಾಯ್ ಚಿತ್ರದ ಟೈಟಲ್ ಮಜವಾಗಿದೆ. ಇದು 1980 ರ ಕಾಲಘಟ್ಟದಲ್ಲಿ ನಡೆಯುವ ಕಥೆಯ ಚಿತ್ರವೂ ಆಗಿದೆ. ಇಡೀ ಕಥಾಹಂದರ 80 ಕಾಲಘಟ್ಟದ್ದೇ ಆಗಿದೆ.

bom bhai kannada movie sharan diganth nishvika naidu updates

ಬೊಮ್ ಭಾಯ್ ಸಿನಿಮಾ
ಆದರೆ, ಚಿತ್ರದ ನಾಯಕ ನಟ ಶರಣ್ ಒಂದು ಕ್ಲೀಯರ್ ಮಾಡಿದ್ದಾರೆ. ಸದ್ಯದ 80 ರ ಈ ಟ್ರೆಂಡ್‌ ಶುರು ಆಗುವ ಮುಂಚೇನೆ ನಮ್ಮ ಕತೆ ರೆಡಿ ಆಗಿತ್ತು ಅಂತ ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಗುರು ಶಿಷ್ಯರು ನಾಯಕಿ

ಈ ಚಿತ್ರದಲ್ಲಿ ಗುರು ಶಿಷ್ಯರು ಚಿತ್ರದ ನಾಯಕಿ ಇದ್ದಾರೆ. ಅದು ನಿಶ್ವಿಕಾ ನಾಯ್ಡು ಅನ್ನೋದು ಗೊತ್ತೇ ಇದೆ. ಈ ಒಂದು ಚಿತ್ರದ ಮುಹೂರ್ತ ಗಣಪತಿ ಹಬ್ಬದ ದಿನ ಸೆಪ್ಟೆಂಬರ್-14 ರಂದು ನಡೆದಿದೆ.

ದಿಗಂತ್ ಏನೂ ಹೇಳಲಿಲ್ವಾ?

ದೂದ್ ಪೇಡ ದಿಗಂತ್ ಮಾತನಾಡಿದ್ದಾರೆ. ತಮ್ಮ ಈ ಚಿತ್ರದ ಕುರಿತು ಹೇಳಿಕೊಂಡಿದ್ದಾರೆ. ಈ ಚಿತ್ರ ರೆಟ್ರೋ ಕಾಲಘಟ್ಟದ ಕತೆಯ ಚಿತ್ರವಾಗಿದೆ.

ಇದರಲ್ಲಿ ಒಂದು ಒಳ್ಳೆ ಪಾತ್ರವೇ ಸಿಕ್ಕಿದೆ. ನಾನು ಈ ಹಿಂದೆ ಇಂತಹ ಪಾತ್ರ ಮಾಡಿಯೇ ಇಲ್ಲ. ಡೈರೆಕ್ಟರ್ ಶಶಿಧರ್ ಹೇಳಿದ ಕಥೆ ಇಷ್ಟ ಆಯಿತು. ಜನಕ್ಕೆ ಇದು ಇಷ್ಟ ಆಗುತ್ತದೆ ಅಂತ ಭರವಸೆ ಇದೆ ಅನ್ನೋದನ್ನ ದಿಗಂತ್ ಹೇಳಿಕೊಂಡಿದ್ದಾರೆ.

bom bhai kannada movie sharan diganth nishvika naidu updates

ಇದಕ್ಕೆ 80 ರ ಟ್ರೆಂಡ್ ಸ್ಪೂರ್ತಿ ಇದಿಯಾ?
ಡೈರೆಕ್ಟರ್ ಶಶಿಧರ್ ಮಾತುಗಳು

ಡೈರೆಕ್ಟರ್ ಶಶಿಧರ್ ಅವರಿಗೆ ಇದು ಮೂರನೇ ಚಿತ್ರವಾಗಿದೆ. ಇದರಲ್ಲಿ1980 ಕಾಲಘಟ್ಟದ ರೆಟ್ರೋ ಶೈಲಿಯ ಕಥೆ ಹೇಳುತ್ತಿದ್ದಾರೆ.

ಶರಣ್, ನಿಶ್ವಿಕಾ ನಾಯ್ಡು, ದಿಗಂತ್ ಅವರ ಮೂರು ಮುಖ್ಯ ಪಾತ್ರದ ಸುತ್ತವೆ ಕತೆ ಸಾಗುತ್ತದೆ. ಈ ಚಿತ್ರದಲ್ಲಿ ಕನ್ನಡದ ಜನಪ್ರಿಯ ಕಲಾವಿದರು ನಟಿಸಲಿದ್ದಾರೆ ಅಂತ ಶಶಿಧರ್ ಹೇಳಿಕೊಂಡಿದ್ದಾರೆ.

ಕಾಮಿಡಿ ಜಾನರ್ ಸಿನಿಮಾ

ಈ ಚಿತ್ರ ಕಾಮಿಡಿ ಜಾನರ್‌ನ ಚಿತ್ರವೆ ಆಗಿದೆ. ದೀಪಕ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ವಿಂಧ್ಯಾ ಬಾಲಾಜಿ ಪೋತರಾಜ್ ಹಾಗೂ ಕಾಂತರಾಜ್ ಈ ಚಿತ್ರವನ್ನ ನಿರ್ಮಸುತ್ತಿದ್ದಾರೆ.

ಸದ್ಯಕ್ಕೆ ಈ ಚಿತ್ರದ ಮಾಹಿತಿ ಇಷ್ಟಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನ ನೀಡುತ್ತೇನೆ. ಸದ್ಯದಲ್ಲಿಯೇ ಚಿತ್ರೀಕರಣ ಶುರು ಆಗುತ್ತದೆ ಅಂತ ಡೈರೆಕ್ಟರ್ ಶಶಧರ್ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed