Last Updated:
ಇಂದು ಬಾಲಿವುಡ್ನ ಖ್ಯಾತ ನಿರ್ದೇಶಕಿ ಹಾಗೂ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ಫರಾ ಖಾನ್ (Farah Khan) ಸಿನಿಮಾ ಪಯಣದ ಆರಂಭದ ದಿನಗಳ ಬಗ್ಗೆ ತಿಳಿದರೆ ಅಚ್ಚರಿಯಾಗಬಹುದು.
ಇಂದು ಬಾಲಿವುಡ್ನ ಖ್ಯಾತ ನಿರ್ದೇಶಕಿ ಹಾಗೂ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ಫರಾ ಖಾನ್ (Farah Khan) ಸಿನಿಮಾ ಪಯಣದ ಆರಂಭದ ದಿನಗಳ ಬಗ್ಗೆ ತಿಳಿದರೆ ಅಚ್ಚರಿಯಾಗಬಹುದು. ಶಾರುಖ್ ಖಾನ್ (Shah Rukh Khan), ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಸ್ಟಾರ್ಗಳ ಜೊತೆ ಕೆಲಸ ಮಾಡಿರುವ ಫರಾ ಖಾನ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ಕನ್ನಡದ ದಿಗ್ಗಜ ನಟ ಮತ್ತು ನಿರ್ದೇಶಕ ಶಂಕರ್ ನಾಗ್ ಅವರ ಜೊತೆ ಕೆಲಸ ಮಾಡಿದ್ದರು. ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಶಂಕರ್ ನಾಗ್ ನಿರ್ದೇಶನದ ಪ್ರಸಿದ್ಧ ಕಿರುತೆರೆ ಸರಣಿ ಮಾಲ್ಗುಡಿ ಡೇಸ್ನಲ್ಲಿ (Malgudi Days) ಫರಾ ಖಾನ್ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು ಎಂಬ ವಿಚಾರ ಈಗ ಮತ್ತೆ ಗಮನ ಸೆಳೆಯುತ್ತಿದೆ.














