Last Updated:
ಆರು ಮಂದಿಯನ್ನು ಕೊಲೆಗೈದ ಆರೋಪಿ ರಾಜ್ಕುಮಾರ್ ಶವವಾಗಿ ಪತ್ತೆ. ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ. ಕೊನೆಯ ಸೆಲ್ಫಿ ವಿಡಿಯೋದಲ್ಲಿ ಕೊಲೆಗೆ ಕಾರಣ, ಸಾವಿಗೆ ನಾಲ್ವರು ಕಾರಣ ಎಂದು ಉಲ್ಲೇಖ.
ತನ್ನ ಮಕ್ಕಳು, ಪತ್ನಿ ಸೇರಿದಂತೆ ಆರು (Wife and Children) ಮಂದಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ (Accused) ಬರೋಬ್ಬರಿ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಕ್ರಿಮಿನಾಶಕ (Sterilization) ಸೇವಿಸಿ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದು, ಆರೋಪಿಯ ಬಳಿ ಇದ್ದ ಫೋನ್ನಲ್ಲಿ ಆತ ಮಾಡಿದ್ದ ಕೊನೆಯ ಸೆಲ್ಫಿ ವಿಡಿಯೋ (Selfie Video) ಪತ್ತೆಯಾಗಿದೆ. ಈ ಮೊಬೈಲ್ (Mobile) ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು, ಆರೋಪಿ ರಾಜ್ಕುಮಾರ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸಿದ ಸಂದರ್ಭದಲ್ಲಿ ಸೆಲ್ಫಿ ವಿಡಿಯೋ ಒಂದು ಪತ್ತೆಯಾಗಿದೆ. ಆರೋಪಿ ಆರು ಮಂದಿಯನ್ನು ಕೊಲೆ ಮಾಡುವ ತನ್ನ ಕೃತ್ಯಕ್ಕೆ ಕಾರಣವೇನು ಎಂದು ತಿಳಿಸಿದ್ದಾನೆ. ವಿಡಿಯೋದಲ್ಲಿ ತನ್ನ ಸಾವಿಗೆ ಈ ನಾಲ್ವರು ಕಾರಣ ಎಂದು ಆರೋಪಿ, ನಾಲ್ವರ ಹೆಸರನ್ನು ಉಲ್ಲೇಖಿಸಿದ್ದಾನೆ ಎಂದು ನ್ಯೂಸ್18 ತೆಲುಗು ವರದಿ ಮಾಡಿದೆ.
ಕೃತ್ಯ ಎಸಗುವ ಮುನ್ನ ರಾಜ್ಕುಮಾರ್ ಸೆಲ್ಫಿ ವಿಡಿಯೋ ಮಾಡಿರೋದಾಗಿ ಪೊಲೀಸರು ಗುರುತಿಸಿದ್ದಾರೆ. ರಾಜ್ಕುಮಾರ್ ಮೃತದೇಹ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆತನ ಜೇಬಿನಲ್ಲಿ ಮೊಬೈಲ್ ಸಿಕ್ಕಿದೆ. ಇದರಲ್ಲಿ ಸುಮಾರು 2.26 ನಿಮಿಷದ ವಿಡಿಯೋ ಪತ್ತೆಯಾಗಿದೆ. ಹತ್ಯೆ ನಡೆದ ದಿನ ಸುಮಾರು 4:45ರ ಸಮಯದಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ಜೊತೆಗೆ ನಾಲ್ಕು ಪುಟಗಳ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಸೆಲ್ಫಿ ವಿಡಿಯೋದಲ್ಲಿ ಮತ್ತು ಸೂಸೈಡ್ ನೋಟ್ನಲ್ಲಿ, ನಾನು ಬಾಲಕಿಯ ಕುಟುಂಬವನ್ನು ನಂಬಿ ಮೋಸ ಹೋಗಿದ್ದೇನೆ. ಇದರಿಂದ ನನ್ನ ಜೀವನ ನಾಶ ಆಗಿದೆ. ನನ್ನನ್ನು ನನ್ನ ಕುಟುಂಬವನ್ನು ಯೂಸ್ ಮಾಡಿಕೊಂಡು ಈಗ ಪೊಲೀಸ್ ಕೇಸ್ ಹಾಕುತ್ತಿದ್ದಾರೆ. ಬಾಲಕಿಯೇ ನನ್ನನ್ನು ಪ್ರೀತಿ ಮಾಡುತ್ತಿದ್ದೀನಿ ಅಂತ ನನ್ನ ಹಿಂದೆ ಬಿದ್ದಳು. ನಾನು ಒಪ್ಪಿಲ್ಲ ಅಂದಿದ್ದಕ್ಕೆ ಸಾಯೋದಾಗಿ ಬೆದರಿಕೆ ಹಾಕಿದ್ದಳು. ಇದರಿಂದ ನಾನು ಪ್ರೀತಿಗೆ ಸರಿ ಅಂತ ಹೇಳಿದ್ದೆ, ಒಮ್ಮೆ ಆಕೆಯನ್ನು ಭೇಟಿ ಮಾಡಲು ತೆರಳಿದ ಸಂದರ್ಭದಲ್ಲಿ ಆಕೆಯ ತಾಯಿ, ಅಜ್ಜಿ ನೋಡಿ ನನಗೆ ಹಣ ನೀಡಲು ಬೆದರಿಕೆ ಹಾಕಿದ್ದರು. ಅವರು ಕೇಳಿದಾಗ ಎಲ್ಲಾ ಸಮಯದಲ್ಲೂ ಹಣ ಕೊಟ್ಟಿದ್ದೀನಿ. ಇದರಿಂದ ನನಗೆ ಇದ್ದ ಎರಡು ಎಕರೆ ಭೂಮಿಯನ್ನು ಮಾರಾಟ ಮಾಡಿ, ನನ್ನ ಕುಟುಂಬ-ಮಕ್ಕಳಿಗೆ ಏನು ಇಲ್ಲದಂತೆ ಮಾಡಿದ್ದೀನಿ. ಕೊನೆಗೆ ಈಗ ಪೊಲೀಸ್ ಕೇಸ್ ಹಾಕಿ ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
షాబాద్ జంట హత్యల కేసులో కీలక అప్డేట్!
అందరినీ చంపే ముందు రోజు (జూలై 10న) నరహంతకుడు రాజ్ కుమార్ రికార్డ్ చేసిన సెల్ఫీ వీడియో వెలుగులోకి..
”ఆ బాలికను నమ్మి అన్ని విధాలా మోసపోయా.
ఆ కుటుంబానికి డబ్బులిచ్చి అప్పులపాలయ్యా.
నా పిల్లలకు భూమి లేకుండా పోయింది, జీవితంపై విరక్తి… pic.twitter.com/hepNO6EQwN
— Radha Vara Lakshmi (@radhachinnulu) July 13, 2026
ನನಗೆ 50 ಲಕ್ಷ ರೂಪಾಯಿ ಕೊಡು, ಇಲ್ಲ ಎಂದರೇ ಜೈಲಿಗೆ ಹೋಗು ಅಂತ ಬೆದರಿಕೆ ಹಾಕಿದ್ದರು. ಇವರ ಕಿರುಕುಳದಿಂದ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದೆ. ನನ್ನಿಂದ ಹಣ ಪಡೆದು ನನ್ನನ್ನೇ ಜೈಲಿಗೆ ಹಾಕುವ ಕೆಲಸ ಮಾಡಿದ್ದರು. ಇದರಿಂದ ನನಗೆ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ನನ್ನ ಸಾವಿಗೆ ಮಾತ್ರ, ಈಗ ಆಗುತ್ತಿರುವ ಎಲ್ಲಾ ಸಾವಿಗೂ ಕಾರಣ ಬಾಲಕಿಯ ಮಾವ ರಾಜು, ಸೀನು, ಸಂಗೀತ ಹಾಗೂ ಅವರ ದೊಡ್ಡಪ್ಪನ ಮಗ ನರೇಶ್ ಎಂದು ಆರೋಪಿ ವಿಡಿಯೋದಲ್ಲಿ ಹೇಳಿದ್ದಾನೆ.
ಪರಿಸ್ಥಿತಿ ಇಲ್ಲಿವರೆಗೂ ಬರಲು ಕಾರಣ ಬಾಲಕಿಯ ತಂದೆ ಹಾಗೂ ಅಜ್ಜಿ ಸೇರಿದಂತೆ ಆಕೆಯ ನಾಲ್ವರು ಬಂಧುಗಳು. ಒಂದೊಮ್ಮೆ ನಾವು ಸಾವನ್ನಪ್ಪಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಇದರಲ್ಲಿ ನನ್ನ ಕುಟುಂಬದ ಪಾತ್ರ ಏನು ಇಲ್ಲ, ನನಗೆ ಭೂಮಿ ಇಲ್ಲ. ನಮ್ಮ ಕುಟುಂಬದ ನಾಲ್ವರನ್ನು ಅನಾಥ ಶವವಾಗಿ ಅಂತ್ಯ ಸಂಸ್ಕಾರ ಮಾಡಿ. ನಾನು ಮಾಡಿದ ತಪ್ಪಿಗೆ ನನಗೆ ಶಿಕ್ಷೆ ಆಗಲೇಬೇಕು, ಆದ್ದರಿಂದ ಅವರನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದೀನಿ ಎಂದು ಆರೋಪಿ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Selfie Video: 6 ಮಂದಿಯನ್ನು ದಾರುಣವಾಗಿ ಕೊಲೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೃತ್ಯಕ್ಕೂ ಮುನ್ನ ಆರೋಪಿ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದೇನು?














