School Holidays: ಶಾಲೆಗಳಿಗೆ 13 ದಿನ ರಜೆ! ಈ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಯಾಕೆ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ (ಕೃಪೆ: Canva)


Last Updated:

School Holidays: ಈ ರಾಜ್ಯದ ವಿದ್ಯಾರ್ಥಿಗಳಿಗೆ (students) ಒಳ್ಳೆಯ ಸುದ್ದಿ ಬಂದಿದೆ. 2026–27ನೇ ಶೈಕ್ಷಣಿಕ ವರ್ಷದ ಅಕಾಡೆಮಿಕ್ ಕ್ಯಾಲೆಂಡರ್ (academic calendar) ಪ್ರಕಾರ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಎಯ್ಡೆಡ್ ಶಾಲೆಗಳಿಗೆ ಈ ಬಾರಿ ದಸರಾ ಹಬ್ಬದ (Dasara festival) ಸಂದರ್ಭದಲ್ಲಿ ಒಟ್ಟು 13 ದಿನಗಳ ರಜೆ ಘೋಷಿಸಲಾಗಿದೆ.

ಸಾಂಕೇತಿಕ ಚಿತ್ರ (ಕೃಪೆ: Canva)
ಸಾಂಕೇತಿಕ ಚಿತ್ರ (ಕೃಪೆ: Canva)

ಈ ರಾಜ್ಯದ ವಿದ್ಯಾರ್ಥಿಗಳಿಗೆ (students) ಒಳ್ಳೆಯ ಸುದ್ದಿ ಬಂದಿದೆ. 2026–27ನೇ ಶೈಕ್ಷಣಿಕ ವರ್ಷದ ಅಕಾಡೆಮಿಕ್ ಕ್ಯಾಲೆಂಡರ್ (academic calendar) ಪ್ರಕಾರ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಎಯ್ಡೆಡ್ ಶಾಲೆಗಳಿಗೆ ಈ ಬಾರಿ ದಸರಾ ಹಬ್ಬದ (Dasara festival) ಸಂದರ್ಭದಲ್ಲಿ ಒಟ್ಟು 13 ದಿನಗಳ ರಜೆ (Dasara holidays) ಘೋಷಿಸಲಾಗಿದೆ. ಶಾಲೆಗಳ ರಜೆ ಅಕ್ಟೋಬರ್ 10ರಿಂದ ಪ್ರಾರಂಭವಾಗಿ ಅಕ್ಟೋಬರ್ 22ರವರೆಗೆ ಮುಂದುವರಿಯಲಿದೆ. ಅಕ್ಟೋಬರ್ 23ರಂದು ಶಾಲೆಗಳು ಮತ್ತೆ ತೆರೆಯಲಿವೆ. 

ದಸರಾ, ವಿಜಯ ದಶಮಿ ರಜೆ

ಅಂದಹಾಗೆ ಈ ರಜೆಯನ್ನು ತೆಲಂಗಾಣ ರಾಜ್ಯದಲ್ಲಿ ಘೋಷಿಸಲಾಗಿದೆ. ಈ ರಜಾವಧಿಯಲ್ಲಿ ತೆಲಂಗಾಣದ ಪ್ರಮುಖ ಹಬ್ಬಗಳಾದ ಬತುಕಮ್ಮ ಮತ್ತು ವಿಜಯದಶಮಿ ಬರುತ್ತವೆ. ಬತುಕಮ್ಮ ಆಚರಣೆ ಅಕ್ಟೋಬರ್ 11ರಂದು ಪ್ರಾರಂಭವಾಗಲಿದೆ. ಸದ್ದುಲ ಬತುಕಮ್ಮ ಹಬ್ಬ ಅಕ್ಟೋಬರ್ 19ರಂದು ನಡೆಯಲಿದೆ. ವಿಜಯದಶಮಿ ಅಕ್ಟೋಬರ್ 20ರಂದು ಬರುತ್ತದೆ. ಹೂವಿನ ಅಲಂಕಾರ, ಹಾಡುಗಳು ಮತ್ತು ನೃತ್ಯಗಳೊಂದಿಗೆ ರಾಜ್ಯಾದ್ಯಂತ ನಡೆಯುವ ಈ ಆಚರಣೆಗಳಲ್ಲಿ ವಿದ್ಯಾರ್ಥಿಗಳು ಕುಟುಂಬದೊಂದಿಗೆ ಭಾಗವಹಿಸಲು ಅವಕಾಶ ಸಿಗಲಿದೆ.

ಶಾಲೆಗೆ 13 ದಿನ, ಇಂಟರ್ ಮೀಡಿಯಟ್‌ಗಳಿಗೆ 12 ದಿನ ರಜೆ

ಜೂನಿಯರ್ ಕಾಲೇಜುಗಳಿಗೆ ರಜೆಯ ವೇಳಾಪಟ್ಟಿ ಸ್ವಲ್ಪ ಭಿನ್ನವಾಗಿದೆ. ತೆಲಂಗಾಣ ಇಂಟರ್‌ಮೀಡಿಯಟ್ ಬೋರ್ಡ್ ಪ್ರಕಾರ ಜೂನಿಯರ್ ಕಾಲೇಜುಗಳಿಗೆ ಅಕ್ಟೋಬರ್ 10ರಿಂದ ಅಕ್ಟೋಬರ್ 21ರವರೆಗೆ ದಸರಾ ರಜೆ ಇದೆ. ಅಕ್ಟೋಬರ್ 22ರಂದು ತರಗತಿಗಳು ಮತ್ತೆ ಪ್ರಾರಂಭವಾಗಲಿವೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳಿಗೆ 13 ದಿನಗಳು ಮತ್ತು ಇಂಟರ್ ವಿದ್ಯಾರ್ಥಿಗಳಿಗೆ 12 ದಿನಗಳ ರಜೆ ದೊರೆಯಲಿದೆ.

ರಜೆಗೂ ಮುನ್ನ ಎದುರಿಸಲೇಬೇಕು ಪರೀಕ್ಷೆ!

ರಜೆಗೆ ಮುನ್ನ ಪರೀಕ್ಷೆಗಳು ನಡೆಯಲಿವೆ. ಶಾಲೆಗಳಲ್ಲಿ ಸಮ್ಮೇಟಿವ್ ಅಸೆಸ್‌ಮೆಂಟ್-1 (ಎಸ್‌ಎ-1) ಪರೀಕ್ಷೆಗಳು ನಿಗದಿಯಾಗಿವೆ. 6ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅಕ್ಟೋಬರ್ 1ರಿಂದ 9ರವರೆಗೆ ಪರೀಕ್ಷೆಗಳು ನಡೆಯಲಿವೆ. 1ನೇ ತರಗತಿಯಿಂದ 5ನೇ ತರಗತಿಯವರೆಗಿನ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಅಕ್ಟೋಬರ್ 5ರಿಂದ 9ರವರೆಗೆ ಪರೀಕ್ಷೆಗಳಿವೆ. ಇಂಟರ್ ವಿದ್ಯಾರ್ಥಿಗಳ ಅರ್ಧವಾರ್ಷಿಕ ಪರೀಕ್ಷೆಗಳು ಅಕ್ಟೋಬರ್ 3ರಿಂದ 9ರವರೆಗೆ ನಡೆಯಲಿವೆ. ಪರೀಕ್ಷೆಗಳು ಮುಗಿದ ನಂತರವೇ ರಜೆ ಪ್ರಾರಂಭವಾಗುವಂತೆ ವೇಳಾಪಟ್ಟಿ ರೂಪಿಸಲಾಗಿದೆ.

ವೇಳಾಪಟ್ಟಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲ ಶಿಕ್ಷಣ ಸಂಸ್ಥೆಗಳು ಈ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಒಂದೆಡೆ ಪರೀಕ್ಷೆಯ ಒತ್ತಡ, ಇನ್ನೊಂದೆಡೆ ದಸರಾ ರಜೆಯ ನಿರೀಕ್ಷೆ ಈ ಎರಡೂ ಭಾವನೆಗಳ ನಡುವೆ ವಿದ್ಯಾರ್ಥಿಗಳು ದಿನಗಳನ್ನು ಕಳೆಯುತ್ತಿದ್ದಾರೆ.

ಅಕ್ಟೋಬರ್ 9 ಕೆಲಸದ ಕೊನೆಯ ದಿನ

ಪ್ರಮುಖ ದಿನಾಂಕಗಳು ಇಂತಿವೆ: ಅಕ್ಟೋಬರ್ 9 ಕೊನೆಯ ಕಾರ್ಯದಿನ, ಅಕ್ಟೋಬರ್ 10ರಿಂದ ರಜೆ ಆರಂಭ, ಅಕ್ಟೋಬರ್ 11ರಂದು ಬತುಕಮ್ಮ ಆರಂಭ, ಅಕ್ಟೋಬರ್ 19ರಂದು ಸದ್ದುಲ ಬತುಕಮ್ಮ, ಅಕ್ಟೋಬರ್ 20ರಂದು ವಿಜಯದಶಮಿ, ಅಕ್ಟೋಬರ್ 22ರಂದು ಶಾಲಾ ರಜೆ ಅಂತ್ಯ, ಅಕ್ಟೋಬರ್ 23ರಂದು ಶಾಲೆಗಳು ಮರುಪ್ರಾರಂಭ. ಜೂನಿಯರ್ ಕಾಲೇಜುಗಳು ಅಕ್ಟೋಬರ್ 22ರಂದು ಮರುಪ್ರಾರಂಭವಾಗಲಿವೆ.

ಹಬ್ಬದ ರಜೆಯಲ್ಲಿ ವಿದ್ಯಾರ್ಥಿಗಳು ವಿಶ್ರಾಂತಿ ಪಡೆಯುವುದರ ಜೊತೆಗೆ ಸಂಸ್ಕೃತಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶವಿದೆ. ಪರೀಕ್ಷೆಗಳನ್ನು ಶಾಂತಿಯಿಂದ ಮುಗಿಸಿ ನಂತರ ರಜೆಯನ್ನು ಆನಂದಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ತೆಲಂಗಾಣದಾದ್ಯಂತ ಶಾಲೆ ಮತ್ತು ಇಂಟರ್ ಕಾಲೇಜುಗಳ ವಿದ್ಯಾರ್ಥಿಗಳು ಈಗಾಗಲೇ ರಜೆಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಸಾಕ್ಷಿ.ಕಾಮ್ ವರದಿ ಮಾಡಿದೆ.

(ಮೂಲ: ತೆಲಂಗಾಣ ಶಿಕ್ಷಣ ಇಲಾಖೆಯ 2026–27 ಅಕಾಡೆಮಿಕ್ ಕ್ಯಾಲೆಂಡರ್ ಮತ್ತು ಇಂಟರ್ ಬೋರ್ಡ್ ವೇಳಾಪಟ್ಟಿ)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed