Sathish Ninasam Exclusive: 50 ದಿನಗಳತ್ತ ಸತೀಶ್ ನೀನಾಸಂ ಸಿನಿಮಾ; ‘ಮರುಭೂಮಿಯಲ್ಲಿ ನೀರು ಸಿಕ್ಕಂತಾಗಿದೆ’ ಎಂದ ನಟ! | | ACTPnews

sathish ninasam exclusive interview ayogya 2 50 days


ಮರಳುಗಾಡಿನಲ್ಲಿ ನೀರು ಸಿಕ್ಕಂಗೆ….

ಸದ್ಯದ ದಿನಗಳಲ್ಲಿ ಒಂದು ಚಿತ್ರ ಎರಡು ವಾರ ಓಡೋದೇ ಕಷ್ಟ ನೋಡಿ. ಇಲ್ಲ ನಾನು ಓಡಿಸ್ತೀನಿ ಅಂತಲೂ ಹೇಳೋಕೆ ಆಗೋದಿಲ್ಲ. “ಚಿತ್ರವನ್ನ ನೋಡೋಕೆ ಜನ ಥಿಯೇಟರ್‌ಗೆ ಬಂದ್ರೆ ಮಾತ್ರ ಥಿಯೇಟರ್ ಅಲ್ಲಿ ಚಿತ್ರವನ್ನ ಉಳಿಸೋಕೆ ಸಾಧ್ಯ” ಹಾಗೆ ನಮ್ಮ ಚಿತ್ರವನ್ನ ಜನ ನೋಡಿದ್ದಾರೆ. ಥಿಯೇಟರ್‌ಗೆ ಬಂದು ಗೆಲ್ಲಿಸಿದ್ದಾರೆ.

50 ದಿನದ ಸಂಭ್ರಮ ಮಾಡ್ತೀವಿ

(ಚಿತ್ರ ಕೃಪೆ: ಸತೀಶ್ ನೀನಾಸಂ ಇನ್​ಸ್ಟಾಗ್ರಾಮ್)

ಈ ಚಿತ್ರದ ಗೆಲುವು ತುಂಬಾನೆ ಸಂತೋಷ ತಂದುಕೊಟ್ಟಿದೆ. “ಮರಳುಗಾಡಿನಲ್ಲಿ ನೀರು ಸಿಕ್ಕಂಗ್ ಆಗಿದೆ.” ಒಂದು ಚಿತ್ರ ಥಿಯೇಟರ್ ಅಲ್ಲಿ ಇನ್ನು ಓಡ್ತಿದೆ ಅನ್ನೋದೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಚಿತ್ರ ಈಗ 50 ನೇ ದಿನದತ್ತ ಸಾಗುತ್ತಿದೆ. ಇದು ತುಂಬಾನೆ ಖುಷಿ ತಂದಿದೆ.

ಜವಾಬ್ದಾರಿ ಹೆಚ್ಚಾಗಿದೆ…

ನಮ್ಮ ಚಿತ್ರ 50 ದಿನದತ್ತ ಸಾಗುತ್ತಿದೆ. ಜನರೇ ಇದನ್ನ ಗೆಲ್ಲಿಸಿದ್ದಾರೆ. ಚಿತ್ರ ನೋಡಿದವರು ಸೋಷಿಯ್ ಮೀಡಿಯಾದಲ್ಲೂ ಪ್ರಮೋಟ್ ಮಾಡಿದ್ದಾರೆ.

50 ದಿನದ ಸಂಭ್ರಮ ಮಾಡ್ತೀವಿ

ನಾವು ನಮ್ಮ ಈ ಚಿತ್ರದ ಸಕ್ಸಸ್ ಅನ್ನ ಸಂಭ್ರಮಿಸುತ್ತಿದ್ದೇವೆ. ನಮ್ಮ ಚಿತ್ರ ಈ ತಿಂಗಳು ಸೆಪ್ಟೆಂಬರ್ 25 ರಂದು 50 ದಿನ ಪೂರೈಸುತ್ತಿದೆ.

sathish ninasam exclusive interview ayogya 2 50 days

ಲೂಸಿಯಾ-2 ಮಾಡುವೆ

(ಚಿತ್ರ ಕೃಪೆ: ಸತೀಶ್ ನೀನಾಸಂ ಇನ್​ಸ್ಟಾಗ್ರಾಮ್)

ಈ ದಿನಗಳಲ್ಲಿ ಚಿತ್ರಗಳು 50 ದಿನ ಓಡೋದು ಕಷ್ಟವೇ ಬಿಡಿ. ಆದರೆ, ನಮ್ಮ ಚಿತ್ರ ಹೋಗುತ್ತಿದೆ. ಇದನ್ನ ನಾವೆಲ್ಲ ಸೆಲೆಬ್ರೇಟ್ ಮಾಡುತ್ತಿದ್ದೇವೆ ಅಂತಲೇ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ.
ನನ್ನ ಡೈರೆಕ್ಷನ್ ಸಿನಿಮಾ

ನಾನು ಒಂದು ಸಿನಿಮಾ ಡೈರೆಕ್ಷನ್ ಮಾಡುತ್ತೇನೆ. ಆ ಚಿತ್ರದ ಸ್ಕ್ರಿಪ್ಟ್ ಅಲ್ಲಿ ಉತ್ತರ ಕರ್ನಾಟಕದ ಒಂದು ಕ್ಯಾರೆಕ್ಟರ್ ತರುತ್ತೇನೆ. ಉತ್ತರ ಕರ್ನಾಟಕದ ಒಂದು ಪಾತ್ರವನ್ನ ನನ್ನ ಚಿತ್ರದಲ್ಲಿ ತರಬೇಕು ಅಂತ ಆಸೆ ಇದೆ. ಅದನ್ನ ಪಕ್ಕಾ ಮಾಡುತ್ತೇನೆ.

ಲೂಸಿಯಾ-2 ಮಾಡುವೆ

ಡೈರೆಕ್ಟರ್ ಪವನ್ ಕುಮಾರ್ ಅವರಿಗೆ ಲೂಸಿಯಾ-2 ಮಾಡಬಹುದು ಅನಿಸಿದೆ. ಈ ಒಂದು ಚಿತ್ರದಲ್ಲಿ ನಟಿಸೋ ಆಸಕ್ತಿ ನನಗೂ ಇದೆ.

ಈ ಚಿತ್ರ ಶುರು ಆದರೆ ನಾನು ಈ ಚಿತ್ರದಲ್ಲಿ ಇರೋಕೆ ಇಷ್ಟಪಡ್ತೀನಿ. ಹಾಗೆ ಪವನ್ ಕುಮಾರ್ ಅವರಿಗೆ ಈಗಷ್ಟೆ ಆ ಯೋಚನೆ ಬಂದಿದೆ ಅಂತಲೇ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports