Sathish Ninasam: ನಿನ್ನೆ ರೋಷಾವೇಷ, ಇಂದು ಕ್ಷಮಾಪಣೆ! ಸತೀಶ್ ನೀನಾಸಂ ಉಲ್ಟಾ ಹೊಡೆದಿದ್ಯಾಕೆ? | | ACTPnews

ನಿನ್ನೆ ರೋಷಾವೇಷ ಇಂದು ಕ್ಷಮಾಪಣೆ; ಸತೀಶ್ ನೀನಾಸಂ ಬದಲಾಗಿದ್ಯಾಕೆ?


Last Updated:

ಅಯೋಗ್ಯ-2 ಚಿತ್ರದ ಸಾಂಗ್ ರಿಲೀಸ್ ಇವೆಂಟ್ ಅಲ್ಲಿ ನಾಯಕ ಸತೀಶ್ ನೀನಾಸಂ ನೇರಾ ನೇರವಾಗಿಯೇ ಮಾತನಾಡಿದ್ದರು. ನಿರ್ಮಾಪಕರು ಸಿನಿಮಾ ಬಗ್ಗೆ ತಿಳಿದುಕೊಂಡು ಬರಬೇಕು, ಇದರ ಬಗ್ಗೆ ಶಿಕ್ಷಣ ಪಡೆಯಬೇಕು ಅಂತ ಹೇಳಿದ್ದರು. ಆದರೆ,ಇಂದು ಸತೀಶ್ ನೀನಾಸಂ ಕ್ಷಮೆ ಕೇಳಿದ್ದಾರೆ. ಯಾಕೆ ಕೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ನಿನ್ನೆ ರೋಷಾವೇಷ ಇಂದು ಕ್ಷಮಾಪಣೆ; ಸತೀಶ್ ನೀನಾಸಂ ಬದಲಾಗಿದ್ಯಾಕೆ?
ನಿನ್ನೆ ರೋಷಾವೇಷ ಇಂದು ಕ್ಷಮಾಪಣೆ; ಸತೀಶ್ ನೀನಾಸಂ ಬದಲಾಗಿದ್ಯಾಕೆ?

ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ನೀನಾಸಂ (Sathish Ninasam) ಕ್ಷಮೆ ಕೇಳಿದ್ದಾರೆ. ನಿನ್ನೆಯ ದಿನ ಅಯೋಗ್ಯ-2 ಸಾಂಗ್ ರಿಲೀಸ್ ಇವೆಂಟ್ ಇತ್ತು. ಈ ಸಮಯದಲ್ಲಿಯೇ ಸತೀಶ್ ನೀನಾಸಂ (Sathish Ninasam) ಖಾರವಾಗಿಯೇ ಮಾತನಾಡಿದ್ದರು. ಸಿನಿಮಾರಂಗ ಮುಳುಗುತ್ತಿದೆ ಅಂದವರಿಗೆ ಮಾತಿನಲ್ಲಿಯೇ ಚಾಟಿ ಏಟು ಕೊಟ್ಟಿದ್ದರು. ಈ ವರ್ಷದ ಸೆಕೆಂಡ್ ಹಾಫ್ ಚೆನ್ನಾಗಿ ಇರ್ತದೆ. ಅಯೋಗ್ಯ-2 ಚಿತ್ರ ಇದೆ. ಕರಾವಳಿ ಸಿನಿಮಾ (Karavali Movie) ಇದೆ. ಅಷ್ಟೆ ಯಾಕೆ ಡಾಲಿ ಅವರ ಮದರ್ ಪ್ರಾಮಿಸ್ ಇದೆ. ಈ ಸಿನಿಮಾಗಳು ಬಂದ್ಮೇಲೆ ನೀವೇ ಭೇಷ್ ಅಂತೀರಾ ಅಂತಲೂ ಹೇಳಿದ್ದರು. ಆದರೆ, ಮಾತಿನ ಭರದಲ್ಲಿ ನಿರ್ಮಾಪಕರಿಗೂ (Procucers) ಟಾಂಗ್ ಕೊಟ್ಟಿದ್ದರು. ಏನ್ ಹೇಳಿದ್ದರು. ಈಗ ಏನ್ ಹೇಳ್ತಿದ್ದಾರೆ ಅನ್ನೋದು ಇಲ್ಲಿದೆ ಓದಿ.

ಸತೀಶ್ ನೀನಾಸಂ ನಿನ್ನೆ…

ಕನ್ನಡ ಚಿತ್ರಂಗದಿಂದ ಜನರಿಗೆ ಮನರಂಜನೆ ಕೊಟ್ಟಿದ್ದೇವೆ. ಅಣ್ಣವ್ರಂತಹ ಮಹಾನ್ ಕಲಾವಿದರು ಈ ಚಿತ್ರರಂಗದವರೇ ಅಲ್ಲವೆ? ಒಂದು ಸಿನಿಮಾ ಮಾಡಿ ಅಷ್ಟು ಹೋಯಿತು. ಇಷ್ಟು ಹೋಯಿತು ಅಂತ ಮಾಧ್ಯಮಗಳ ಮುಂದೆ ಹೇಳಿದ್ರೆ ಹೇಗೆ?

ayogya-2 movie sathish ninasam apologize to kannada producer

ಸುಪ್ರೀತ್ ಅವರ ವಿಚಾರದಲ್ಲೂ

ಈ ರೀತಿ ಹೇಳಿದ್ರೆ ಹೇಗೆ? ಸಿನಿಮಾ ಮಾಡುತ್ತಿರೋರ ಕತೆ ಏನು? ನಿಮಗೆ ನಂಬಿಕೆ ಇಲ್ದೆ ಇದ್ದರೆ ಸಿನಿಮಾ ಯಾಕೆ ಮಾಡ್ತೀರಾ? ಸಿನಿಮಾ ಸ್ಟಡಿ ಮಾಡಿ , ಸರಿಯಾದ ಶಿಕ್ಷಣ ಪಡಿರಿ, ಸಿನಿಮಾದಲ್ಲಿ ಕೆಲಸ ಮಾಡಿ, ಆ ನಂತರ ಚಿತ್ರರಂಗಕ್ಕೆ ಬನ್ನಿ ಅಂತಲೇ ನಿರ್ಮಾಪಕರಿಗೆ ಹೇಳಿದ್ದರು.

ಸಿನಿಮಾ ಅಂದ್ರೆ ದುಡ್ಡುಹಾಕೋದಲ್ಲ

ಸಿನಿಮಾ ಅಂದ್ರೆ ಕೇವಲ ದುಡ್ಡು ಹಾಕೋದಲ್ಲ. ಸಿನಿಮಾದ ಮೇಕಿಂಗ್ ಗೊತ್ತಿರಬೇಕು. ಇದು ಗೊತ್ತಿದ್ದರೆ ಮಾತ್ರ ಸಿನಿಮಾ ಮಾಡಿ. ಏನು ಗೊತ್ತೇ ಇಲ್ಲದೆ ಸಿನಿಮಾ ಮಾಡುವುದರಿಂದ 10 ಜನ ನಿರ್ಮಾಪಕರು ಹೆಜ್ಜೆ ಹಿಂದೆ ಇಡುತ್ತಿದ್ದಾರೆ. ಆಗ ಚಿತ್ರರಂಗದ ಕತೆ ಏನು ಅಂತಲೂ ಕೇಳಿದ್ದಾರೆ.

ಪರ ಭಾಷೆಯ ತೆಲುಗು, ತಮಿಳು, ಮಲೆಯಾಳಂ ಚಿತ್ರಗಳು ಬಂದ್ರೆ ಹೊಗಳಿ ಪೋಸ್ಟ್ ಮಾಡ್ತಾರೆ. ಆದರೆ, ಕನ್ನಡದ ಒಳ್ಳೆ ಚಿತ್ರಗಳು ಬಂದ್ರೆ ಯಾರಾದರೂ ಪೋಸ್ಟ್ ಮಾಡ್ತಾರಾ? ನಾನು ನಿಮ್ಮವನು ನನ್ನ ಹತ್ರ ಯಾಕೆ ದ್ವೇಷ, ನಾನು ಹೊರಗಿನವನಾ? ಅಂತಲೂ ಕೇಳಿದ್ದಾರೆ. ನೀವೆಲ್ಲ ಇದನ್ನ ಅರ್ಥ ಮಾಡಿಕೊಳ್ತೀರಿ ಅಂತ ನಂಬಿದ್ದೇನೆ ಅಂತಲೂ ಸತೀಶ್ ಹೇಳಿದ್ದಾರೆ.

ಆದರೆ, ಇಂದು ಕ್ಷಮೆ ಕೇಳಿದ ಸತೀಶ್

ಸತೀಶ್ ನೀನಾಸಂ ಜೂನ್-21 ರಂದು ಆಕ್ರೋಶದಿಂದಲೇ ಅಯೋಗ್ಯ-2 ಚಿತ್ರದ ಸಾಂಗ್ ರಿಲೀಸ್ ಇವೆಂಟ್ ಮೇಲೆ ಹೇಳಿದಂತೆ ಮಾತನಾಡಿದ್ದರು. ಆದರೆ, ಜೂನ್-22 ರಂದು ನಿರ್ಮಾಪಕರಿಗೆ ಕ್ಷಮೆ ಕೇಳಿದ್ದಾರೆ.
ayogya-2 movie sathish ninasam apologize to kannada producer

ಸುಪ್ರೀತ್ ಅವರ ವಿಚಾರದಲ್ಲೂ

ನಾನು ಸಿನಿಮಾ ಬಗ್ಗೆ ಸ್ಟಿಡಿ ಮಾಡಿ ಅಂತ ಹೇಳಿದ್ದೇನೆ. ಇದರ ಬಗ್ಗೆ ಶಿಕ್ಷಣ ಇರಲಿ ಅಂತ ಹೇಳಿದ್ದೇನೆ. ಆದರೆ, ಇದು ಸಿನಿಮಾ ಕುರಿತೇ ಆಗಿದೆ. ಹೊರತು ಬೇರೆ ಏನೂ ಅಲ್ಲ. ನಾನು ಸಿನಿಮಾ ನಿರ್ಮಾಪಕನಾಗಿ ಸೋತು ಸಾಕಷ್ಟು ಕಲಿತುಕೊಂಡಿದ್ದೇನೆ. ಆದರೆ, ಹೊಸಬರು ಎಲ್ಲ ವಿಭಾಗವನ್ನು ತಿಳಿದುಕೊಳ್ಳಬೇಕು ಅಂತಲೇ ಹೇಳಿದ್ದೇನೆ ಹೊರತು ಬೇರೆ ಏನೂ ಇಲ್ಲ.

ಸುಪ್ರೀತ್ ಅವರ ವಿಚಾರದಲ್ಲೂ

ಸುಪ್ರೀತ್ ಅವರ ಬಗ್ಗೆ ಮಾತನಾಡಿದ್ದೇನೆ. ಆದರೆ, ಅದು ವಿತರಣೆ ವಿಚಾರಕ್ಕೆ ಸಂಬಂಧಿಸಿದ್ದೇ ಆಗಿದೆ. ವಿತರಣೆ ಅನ್ನುವ ಪದ ಬಳಕೆ ಮಾಡಲಿಲ್ಲ. ಆದರೆ, ಇದು ಬಿಟ್ಟರೆ ಬೇರೆ ಏನು ಇಲ್ಲ.

ನನ್ನ ಮಾತುಗಳಿಂದ ಕೆಲವು ನಿರ್ಮಾಪಕರಿಗೆ ನೋವಾಗಿದೆ ಅಂತ ಗೊತ್ತಾಯಿತು. ಅದಕ್ಕೇನೆ ಈ ಒಂದು ವಿಡಿಯೋ ಮೂಲಕ ಕ್ಷಮೆ ಕೇಳುತ್ತಿದ್ದೇನೆ ಅಂತಲೇ ಸತೀಶ್ ಹೇಳಿದ್ದಾರೆ.

ಪ್ರಚಾರಕ್ಕೆ ಮಾತನಾಡಿಲ್ಲ…

ನಿನ್ನ ಪ್ರೆಸ್ ಅಲ್ಲಿ ನಡೆದಿರೋದು ಪ್ರಚಾರಕ್ಕಾಗಿ ಮಾಡಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿವೆ. ಆದರೆ, ನಿನ್ನೆ ಮಾತನಾಡಿರೋದು ಚಿತ್ರದ ಪ್ರಚಾರಕ್ಕೆ ಅಲ್ವೇ ಅಲ್ಲ. ಅಲ್ಲಿ ಏನು ಬಂತೋ ಅದನ್ನೆ ಹೇಳಿದ್ದೇನೆ.

ಅಷ್ಟು ದುಡ್ಡು ಹಾಕಿದೆ, ಇಷ್ಟು ದುಡ್ಡು ಹಾಕಿದೆ. ಆದರೆ, ಹೋಯಿತು ಅಂತ ನಿರ್ಮಾಪಕರು ಹೇಳಿದಾಗ, ಚಿತ್ರ ಮಾಡುವವರು ಡಿಮೋಟಿವೇಟ್ ಆಗ್ತಾರೆ ಅನ್ನುವ ಕಾರಣಕ್ಕೇನೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವವರ ಬಗ್ಗೆ ಹೇಳಿದೆ ಅಂತಲೂ ಸತೀಶ್ ನೀನಾಸಂ ಈ ವಿಡಿಯೋದಲ್ಲಿ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed