Saransh Jain: ಭಾರತ ಟೆಸ್ಟ್ ತಂಡಕ್ಕೆ 33 ವರ್ಷದ ಮಿಸ್ಟರಿ ಪ್ಲೇಯರ್ ಎಂಟ್ರಿ! ಈ ಸರಾಂಶ್ ಜೈನ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews

Saransh Jain: ಭಾರತ ಟೆಸ್ಟ್ ತಂಡಕ್ಕೆ 33 ವರ್ಷದ ಮಿಸ್ಟರಿ ಪ್ಲೇಯರ್ ಎಂಟ್ರಿ! ಈ ಸರಾಂಶ್ ಜೈನ್ ಯಾರು ಗೊತ್ತಾ? | ಕ್ರೀಡಾ ಸುದ್ದಿ


ಸರಾಂಶ್ ಜೈನ್ ಅವರು ಮಾರ್ಚ್ 31, 1993 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು.

ಅವರು 2014 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅಂದಿನಿಂದ ಮಧ್ಯಪ್ರದೇಶಕ್ಕಾಗಿ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿ ಆಡುತ್ತಾರೆ. ಬಲಗೈಯಿಂದ ಆಫ್-ಬ್ರೇಕ್ ಬೌಲಿಂಗ್ ಮಾಡುವುದರ ಜೊತೆಗೆ ಬ್ಯಾಟಿಂಗ್ ಕೂಡ ಮಾಡುತ್ತಾರೆ.

ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದ್ದು ಏಕೆ?

ಟೀಮ್ ಇಂಡಿಯಾದ ಜರ್ಸಿ ಧರಿಸುವುದು ಕೋಟಿ ಕೋಟಿ ಯುವಕರ ಕನಸು. ಆದರೆ ಆ ಕನಸು ಎಲ್ಲರಿಗೂ ಸುಲಭವಾಗಿ ನನಸಾಗುವುದಿಲ್ಲ. ಕೆಲವರು ಬಹಳಷ್ಟು ಕಷ್ಟಪಟ್ಟು, ಬೆವರು ಸುರಿಸಿ, ಕಣ್ಣೀರು ಸುರಿಸಿ ಅದನ್ನು ಸಾಧಿಸಬೇಕಾಗುತ್ತದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ 33 ವರ್ಷದ ಆಫ್-ಸ್ಪಿನ್ನರ್ ಸಾರಂಶ್ ಜೈನ್ ಅವರ ಕಥೆಯೂ ಹೀಗೆಯೇ ಭಾವನಾತ್ಮಕವಾಗಿದೆ.

ದೇಶೀಯ ಕ್ರಿಕೆಟ್​​​ನಲ್ಲಿ ಮ್ಯಾಜಿಕ್

2021-22ರಲ್ಲಿ ಮಧ್ಯಪ್ರದೇಶ ತಂಡ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದಾಗ ಸರಾಂಶ್ ಮುಖ್ಯ ಪಾತ್ರ ವಹಿಸಿದ್ದರು. ಫೈನಲ್‌ನಲ್ಲಿ ಮುಂಬೈ ವಿರುದ್ಧ 57 ರನ್ ಗಳಿಸಿ ತಂಡದ ಗೆಲುವಿಗೆ ಸಹಾಯ ಮಾಡಿದ್ದರು. 2022-23ರಲ್ಲಿ ಅವರು 360 ರನ್ ಮತ್ತು 35 ವಿಕೆಟ್ ಪಡೆದಿದ್ದರು. ಅದಕ್ಕಾಗಿ ಬಿಸಿಸಿಐ ಅವರಿಗೆ ಸರಣಿಯ ಅತ್ಯುತ್ತಮ ಆಲ್-ರೌಂಡರ್ ಪ್ರಶಸ್ತಿ (ಲಾಲಾ ಅಮರನಾಥ್ ಪ್ರಶಸ್ತಿ) ಕೊಟ್ಟಿತು. 2025ರ ದುಲೀಪ್ ಟ್ರೋಫಿಯಲ್ಲಿ 16 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಸರಾಂಶ್ ಜೈನ್ ದಾಖಲೆ

ಸರಾಂಶ್ ಜೈನ್ ಇದುವರೆಗೆ 54 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಒಟ್ಟು 188 ವಿಕೆಟ್‌ಗಳನ್ನು ತೆಗೆದುಕೊಂಡಿದ್ದಾರೆ. ಅವರು 10 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಅವರ ಬೌಲಿಂಗ್ ಎಕಾನಮಿ ದರ 3.01 ಇದೆ. 54 ಪಂದ್ಯಗಳಲ್ಲಿ 85 ಇನ್ನಿಂಗ್ಸ್‌ಗಳನ್ನು ಆಡಿ, ಅವರು 2,223 ರನ್‌ಗಳನ್ನು ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 31.75 ಇದೆ. ತಮ್ಮ

ವೃತ್ತಿಜೀವನದಲ್ಲಿ 14 ಅರ್ಧಶತಕಗಳು ಮತ್ತು 2 ಶತಕಗಳನ್ನು ಸಿಡಿಸಿದ್ದಾರೆ. ಇದರಿಂದ ಅವರನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಆಲ್‌ರೌಂಡರ್ ಎಂದು ಹೇಳಬಹುದು.

ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ತಂಡ

ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್*, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾ*, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸರಾಂಶ್ ಜೈನ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed