Sanvi Sudeep: ಮ್ಯಾಂಗೋ ಪಚ್ಚ ನೋಡಲು ಬಂದ ಕಿಚ್ಚನ ಫ್ಯಾಮಿಲಿ; ಸಖತ್ ಸ್ಟೈಲ್​​ನಲ್ಲಿ ಎಂಟ್ರಿ ಕೊಟ್ಟ ಕಿಚ್ಚನ ಮಗಳು! | | ACTPnews

ಮಾಂಗೋ ಪಚ್ಚ ನೋಡಲು ಸಖತ್ ಸ್ಟೈಲ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಟ್ಟ ಕಿಚ್ಚನ ಮಗಳು!


Last Updated:

ಮ್ಯಾಂಗೋ ಪಚ್ಚ ಚಿತ್ರ ನೋಡಲು ಕಿಚ್ಚನ ಫ್ಯಾಮಿಲಿ ಬಂದಿದೆ. ಪತ್ನಿ ಪ್ರಿಯಾ ಸುದೀಪ್, ಅಕ್ಕಂದಿರು, ಮಗಳು ಸಾನ್ವಿ ಸುದೀಪ್ ಹೀಗೆ ಎಲ್ಲರೂ ಚಿತ್ರ ವೀಕ್ಷಿಸಲು ಆಗಮಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮಾಂಗೋ ಪಚ್ಚ ನೋಡಲು ಸಖತ್ ಸ್ಟೈಲ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಟ್ಟ ಕಿಚ್ಚನ ಮಗಳು!
ಮಾಂಗೋ ಪಚ್ಚ ನೋಡಲು ಸಖತ್ ಸ್ಟೈಲ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಟ್ಟ ಕಿಚ್ಚನ ಮಗಳು!

ಮ್ಯಾಂಗೋ ಪಚ್ಚ (Mango Pachcha Movie) ನೋಡಲು ಸಾನ್ವಿ ಸುದೀಪ್ (Sanvi Sudeepa) ಸಖತ್ ಆಗಿಯೇ ಬಂದಿದ್ದಾರೆ. ಕಪ್ಪು ಶರ್ಟ್ ಧರಿಸಿದ್ದಾರೆ. ಇದಕ್ಕೆ ಒಪ್ಪುವ ಜೀನ್ಸ್ ಹಾಕಿದ್ದಾರೆ. ಕಣ್ಣಿಗೆ ಸ್ಟೈಲಿಶ್ ಆದ ಸನ್ ಗ್ಲಾಸ್ ಹಾಕಿದ್ದಾರೆ. ಪಕ್ಕಾ ಹೀರೋ ತರವೇ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಕೆ.ಜಿ.ರಸ್ತೆಯ ಸಂತೋಷ್ ಥಿಯೇಟರ್ (Santhosh Theater) ಅಲ್ಲಿ ಫಸ್ಟ್ ಡೇ ಫಸ್ಟ್ ಶೋಗೇನೆ (First Day First Show) ಸಾನ್ವಿ ಸುದೀಪ್ ಆಗಮಿಸಿದ್ದಾರೆ. ಅಮ್ಮ ಪ್ರಿಯಾ ಸುದೀಪ್ ಕೂಡ ಆಗಮಿಸಿದ್ದಾರೆ. ಸಂಚಿತ್ ಸಂಜೀವ್ ಸೇರಿದಂತೆ ಮನೆಯವರೆಲ್ಲ ಬಂದಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಿಚ್ಚನ ಮಗಳ ಸಖತ್ ಸ್ಟೈಲ್

ಸಾನ್ವಿ ಸುದೀಪ್ ಹಾಗೂ ಕಿಚ್ಚ ಸುದೀಪ್ ಸಖತ್ ಸ್ಟೈಲಿಶ್ ಆಗಿದ್ದಾರೆ. ಮ್ಯಾಂಗೋ ಪಚ್ಚ ಚಿತ್ರ ನೋಡಲು ಸಾನ್ವಿ ಅಷ್ಟೆ ಸ್ಟೈಲಿಶ್ ಆಗಿಯೇ ಬಂದಿದ್ದಾರೆ.
kichcha sudeepa wife priya and daughter sanvi came to watch mango pachcha movie at santhosh theater

ಕಿಚ್ಚನ ಮಗಳ ಸಖತ್ ಸ್ಟೈಲ್

ಕಪ್ಪು ಶರ್ಟ್ ಧರಿಸಿದ್ದಾರೆ. ಇದಕ್ಕೆ ಒಪ್ಪುವ ಜೀನ್ಸ್ ತೊಟ್ಟಿದ್ದಾರೆ. ಸನ್ ಗ್ಲಾಸ್ ಹಾಕಿದ್ದಾರೆ. ಎಲ್ಲವೂ ಸೇರಿಯೇ ಸಾನ್ವಿ ಸುದೀಪ್ ಇಲ್ಲಿ ಹೀರೋ ರೀತಿನೇ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಬಂದ ಸಾನ್ವಿ ಅವರ ಈ ವಿಡಿಯೋಗಳು ಸೋಷಿಯಲ್ ಮೀಡಿಯದಲ್ಲೂ ಶೇರ್ ಆಗಿವೆ.

ಪ್ರಿಯಾ ಸುದೀಪ್

ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಸಂತೋಷ್ ಥಿಯೇಟರ್‌ಗೆ ಆಗಮಿಸಿದ್ದಾರೆ. ಈ ಒಂದು ಚಿತ್ರ ನೋಡಲು ಅಷ್ಟೆ ಸಿಂಪಲ್ ಆಗಿಯೇ ಆಗಮಿಸಿದ್ದಾರೆ.

ವಿವೇಕ್ ಡೈರೆಕ್ಷನ್

ನವ ನಿರ್ದೇಶಕ ವಿವೇಕ್ ಈ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. ಬಾಲಿವುಡ್ ಅಲ್ಲೂ ಇವರು ರೈಟಿಂಗ್ ವಿಭಾಗದಲ್ಲಿಯೇ ಹೆಚ್ಚು ಕೆಲಸ ಮಾಡಿದ್ದಾರೆ.

ಮೊದಲ ಅವಕಾಶವನ್ನು ಇವರು ಚೆನ್ನಾಗಿ ಬಳಕೆ ಮಾಡಿದ್ದಾರೆ. ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್ ಮತ್ತು ಟೀಸರ್ ಈ ವಿಷಯ ಹೇಳುತ್ತವೆ. ಶೇಖರ್‌ ಚಂದ್ರ ಮತ್ತು ಸ್ವಾಮಿ ಅವರ ಕ್ಯಾಮರಾವರ್ಕ್ ಕೂಡ ಚೆನ್ನಾಗಿದೆ.

kichcha sudeepa wife priya and daughter sanvi came to watch mango pachcha movie at santhosh theater

ಕಿಚ್ಚನ ಫ್ಯಾಮಿಲಿ
ಕಿಚ್ಚನ ಮಗಳ ಗಾನ

ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಈ ಚಿತ್ರದಲ್ಲೂ ಹಾಡಿದ್ದಾರೆ. ಮಾರ್ಕ್ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮಸ್ತ್ ಮಲೈಕಾ ಹಾಡಿದರು. ಇದು ಹಿಟ್ ಆಗಿತ್ತು. ವೈರಲ್ ಕೂಡ ಆಗಿತ್ತು. ಚಂದನವನ ಕ್ರಿಟಿಕ್ಸ್ ಅವಾರ್ಡ್ ಕೂಡ ತಂದು ಕೊಡ್ತು

ಮ್ಯಾಂಗೋ ಪಚ್ಚ ಚಿತ್ರದಲ್ಲಿ ಚರಣ್ ರಾಜ್ ಸಂಗೀತಕ್ಕೆ ಹಾಡಿದ್ದಾರೆ. ಅರಗಿಣಿ ಅನ್ನುವ ಮಧುರ ಹಾಡಿಗೆ ಧ್ವನಿ ಆಗಿದ್ದಾರೆ. ಚಿತ್ರದಲ್ಲಿ ಖಡಕ್ ಮಾಲ್ ಮತ್ತು ಹಸ್ರವ್ವ ಅನ್ನುವ ಇನ್ನೆರಡು ಹಾಡುಗಳೂ ಇವೆ. ಇವು ಗಮನ ಸೆಳೆದಿವೆ.

ಕಾಜಲ್ ಕುಂದರ್ ನಾಯಕಿ

ಈ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿ ಆಗಿದ್ದಾರೆ. ಸಂಚಿತ್ ಸಂಜೀವ್ ಜೋಡಿ ಆಗಿದ್ದಾರೆ. ವಿಜಯ್ ರಾಘವೇಂದ್ರ ಅಳಿಯ ಜೈ ಇಲ್ಲಿ ಸಂಚಿತ್ ಸಹೋದರ ರೋಲ್ ಮಾಡಿದ್ದಾರೆ.

ಭಾವನಾ ರಾಮಣ್ಣ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ನಟಿ ಹರಿಣಿ, ಮಯೂರ್ ಪಟೇಲ್, ಮ್ಯಾಕ್ಸ್ ಮಂಜು ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರದ ರಿವ್ಯೂ ಮತ್ತು ಫಸ್ಟ್ ಡೇ ರಿಪೋರ್ಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ ಅಂತ ಹೇಳಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed