S Janaki: ಖ್ಯಾತ ಗಾಯಕಿ ಪಿ ಸುಶೀಲಾ ಕಣ್ಣೀರು! ಗೆಳತಿ ಎಸ್ ಜಾನಕಿ ಬಗ್ಗೆ ಹೇಳಿದ್ದೇನು ಗೊತ್ತಾ? | | ACTPnews

ಎಸ್. ಜಾನಕಿ


Last Updated:

ಹಿರಿಯ ಹಿನ್ನೆಲೆ ಗಾಯಕಿ ಪಿ. ಸುಶೀಲಾ (P. Sushila) ಅವರು ತಮ್ಮ ಆತ್ಮೀಯ ಸ್ನೇಹಿತೆ ಎಸ್. ಜಾನಕಿ ಅವರನ್ನು ನೆನೆದು ಭಾವುಕರಾಗಿ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

ಎಸ್. ಜಾನಕಿ
ಎಸ್. ಜಾನಕಿ

ಭಾರತೀಯ ಸಂಗೀತ ಲೋಕದ ಮರೆಯಲಾಗದ ಮಾಣಿಕ್ಯ ಎಸ್. ಜಾನಕಿ (S Janaki) ಅವರ ಅಗಲಿಕೆ ಸಂಗೀತಾಭಿಮಾನಿಗಳಿಗೆ ಮಾತ್ರವಲ್ಲ, ಅವರೊಂದಿಗೆ ದಶಕಗಳ ಕಾಲ ಕೆಲಸ ಮಾಡಿದ ಸಹ ಕಲಾವಿದರಿಗೂ ದೊಡ್ಡ ಆಘಾತವಾಗಿದೆ. ಇದೀಗ ಹಿರಿಯ ಹಿನ್ನೆಲೆ ಗಾಯಕಿ ಪಿ. ಸುಶೀಲಾ (P. Sushila) ಅವರು ತಮ್ಮ ಆತ್ಮೀಯ ಸ್ನೇಹಿತೆ ಎಸ್. ಜಾನಕಿ ಅವರನ್ನು ನೆನೆದು ಭಾವುಕರಾಗಿ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

ಹೌದು… ಎಸ್. ಜಾನಕಿ ಅವರ ಜೊತೆಗೆ ಕಳೆದ ದಿನಗಳನ್ನು ನೆನೆದು ಪಿ. ಸುಶೀಲಾ ಅವರು ಭಾವುಕರಾಗಿದ್ದಾರೆ. 50 ವರ್ಷಗಳಿಗೂ ಹೆಚ್ಚು ಕಾಲ ನನ್ನೊಂದಿಗೆ ಒಡನಾಟ ಹೊಂದಿದ್ದ ಆತ್ಮೀಯ ಸ್ನೇಹಿತೆಯನ್ನು ನಾನು ಕಳೆದುಕೊಂಡಿದ್ದೇನೆ. ಜಾನಕಿ ಇನ್ನಿಲ್ಲ ಎಂಬುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಪಿ. ಸುಶೀಲಾ ಅವರು ಭಾವುಕರಾಗಿ ದ್ದಾರೆ.

ಹಾಗೆಯೇ ನಾನು ಒಬ್ಬ ಶ್ರೇಷ್ಠ ಸಹೋದ್ಯೋಗಿಯನ್ನು ಮಾತ್ರವಲ್ಲ, ನನ್ನ ನಿಜವಾದ ಸ್ನೇಹಿತೆ ಹಾಗೂ ಸಹೋದರಿಯನ್ನು ಕಳೆದುಕೊಂಡಿದ್ದೇನೆ. ನಾವು ಸುಮಾರು ಐದು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಅನೇಕ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಿದ್ದೇವೆ. ಆ ನೆನಪುಗಳು ಎಂದಿಗೂ ಮರೆಯಲಾಗುವುದಿಲ್ಲ ಎಂದು ಪಿ. ಸುಶೀಲಾ ಅವರು ಹೇಳಿದ್ದಾರೆ.

ಜಾನಕಿಗೆ ಸರಿಸಾಟಿ ಯಾರೂ ಇಲ್ಲ

ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ಪಿ. ಸುಶೀಲಾ, ಜಾನಕಿಗೆ ಸರಿಸಾಟಿಯಾಗುವ ಗಾಯಕಿ ಯಾರೂ ಇಲ್ಲ. ಇಂದಿನ ದಿನಗಳಲ್ಲಿ ಅವರ ರೀತಿ ಹಾಡುವ ಸಾಮರ್ಥ್ಯ ಹೊಂದಿರುವವರು ವಿರಳ. ಅವರು ಹಾಡಿದ ಪ್ರತಿಯೊಂದು ಗೀತೆಯಲ್ಲೂ ಜೀವವಿತ್ತುಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾನಕಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ಪಿ. ಸುಶೀಲಾ, ಹಲವು ವರ್ಷಗಳಿಂದ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಹಾಗೆಯೇ ಹೊರಗಿನವರ ಮಾತುಗಳಿಂದ ತಮ್ಮ ಸ್ನೇಹಕ್ಕೆ ಯಾವುದೇ ಧಕ್ಕೆಯಾಗಲಿಲ್ಲ ಎಂದು ಪಿ. ಸುಶೀಲಾ ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಆತ್ಮೀಯತೆ ಹಾಗೆಯೇ ಉಳಿಯಿತು. ನಾವು ಸಂಗೀತಕ್ಕಾಗಿ ಬದುಕಿದವರು. ಪರಸ್ಪರರ ಪ್ರತಿಭೆಯನ್ನು ಗೌರವಿಸುತ್ತಿದ್ದೆವು. ಅದೇ ನಮ್ಮ ಸ್ನೇಹದ ಬಲವಾಗಿತ್ತು ಎಂದು ಹೇಳಿ ಕೊಂಡಿದ್ದಾರೆ.

ಜಾನಕಿಗೆ ಸಾವೇ ಇಲ್ಲ

ಹಾಗೆಯೇ ಜಾನಕಿ ಅವರ ಸಂಗೀತಾ ಪಯಣವನ್ನು ನೆನಪಿಒಸಿಕೊಂಡ ಪಿ. ಸುಶೀಲಾ, ಜಾನಕಿಗೆ ಸಾವೇ ಇಲ್ಲ. ಅವರು ದೇವರ ಬಳಿಗೆ ಹೋಗಿದ್ದಾರೆ ಅಷ್ಟೇ. ಅವರ ಧ್ವನಿ ಎಂದೆಂದಿಗೂ ಜೀವಂತವಾಗಿರುತ್ತದೆ. ಇಂತಹ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಜನರು ಪುಣ್ಯ ಮಾಡಿದ್ದರಿಂದಲೇ ಅವರ ಸುಮಧುರ ಕಂಠವನ್ನು ಕೇಳುವ ಅವಕಾಶ ಸಿಕ್ಕಿತು ಎಂದು ಭಾವುಕರಾಗಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed