Last Updated:
ಎಸ್.ಜಾನಕಿ ಅವರು ಬಾಲ್ಯದಲ್ಲಿಯೇ ಹಾಡ್ತಾ ಇದ್ದರು. ಹುಡುಗಿ ಚೆನ್ನಾಗಿಯೇ ಹಾಡ್ತಾಳೆ ಅಂತ ಅಕ್ಕಪಕ್ಕದ ಮನೆಯವರೂ ಕರೆದುಕೊಂಡು ಹೋಗ್ತಾ ಇದ್ದರು. ಪುಟ್ಟ ಜಾನಕಿಯಿಂದ ಹಾಡುಗಳನ್ನ ಹಾಡಿಸ್ತಾ ಇದ್ರು. ಜಾನಕಿ ಅವರ ಅಮ್ಮ ಸತ್ಯವತಿ ಸಂಗೀತ ಕ್ಲಾಸ್ಗೂ ಕಳಿಸಿದ್ದರು. ಆದರೆ, ಆ ಗುರುಗಳು ಜಾನಕಿ ಹಾಡುಗಾರಿಕೆ ಕೇಳಿ ಸ್ವರಗಳು ನಿನ್ನ ಕಂಠಸಿರಿಯಲ್ಲಿಯೇ ಇವೆ ಅಂತಲೂ ಹೇಳಿದ್ದರು ನೋಡಿ. ಗಾನಕೋಗಿಲೆ ಎಸ್.ಜಾನಕಿ ಅವರ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಎಸ್. ಜಾನಕಿ (S Janaki) ಅವರು ಬಾಲ್ಯದಲ್ಲಿಯೇ ಮಧುರ ಕಂಠಸಿರಿಯನ್ನ ಹೊಂದಿದ್ದರು. ಇವರು ಚೆನ್ನಾಗಿ ಹಾಡ್ತಾರೆ ಅಂತ ಅಕ್ಕ-ಪಕ್ಕದ ಮನೆಯವರು ಎತ್ತಿಕೊಂಡು ತಮ್ಮ ಮನೆಗೂ ಕರೆದುಕೊಂಡು ಹೋಗುತ್ತಿದ್ದರು. ಯಾರೇ ಕೇಳಿದರು ಜಾನಕಿ (Janaki) ಇಲ್ಲ ಅಂತ ಹೇಳದೇ ಹಾಡಿ ಬಿಡ್ತಾ ಇದ್ದರು. ಅಮ್ಮ ಸತ್ಯವತಿ (Satyavathi) ಶಾಸ್ತ್ರೀಯ ಸಂಗೀತ ಕಲಿಕೆಗೂ ಕಳಿಸಿದ್ದರು. ಆದರೆ, ಅದ್ಯಾಕೋ ಇವರಿಗೆ ಆ ಕಲಿಕೆ ಒಗ್ಗಲೇ ಇಲ್ಲ. ನಿನಗೆ ಸ್ವರಗಳ ಕಲಿಕೆಯ ಅಗತ್ಯವೇ ಇಲ್ಲ. ಸ್ವರ ನಿನ್ನ ಕಂಠದಲ್ಲಿಯೇ ಇದೆ ಅಂತ ಆ ಸಂಗೀತ ಗುರುಗಳು ಹೇಳಿದ್ದರು. ಮುಂದೆ ಎಸ್. ಜಾನಕಿ ತಮ್ಮ ಹಾಡುಗಾರಿಕೆಯನ್ನ ಹಾಗೆ ಮುಂದುವರೆಸಿದ್ದರು…
ಜಾನಕಿ ಧ್ವನಿಗೆ ಮಂತ್ರಮುಗ್ಧ
ಅಗತ್ಯ ಇರೋರಿಗೆ ನೆರವಾಗಲು ವಿದ್ಯಾರ್ಥಿಗಳು ತಂಡ ಕಟ್ಟಿಕೊಂಡು ಹಾಡ್ತಾ ಇದರು. ಹೈದ್ರಾಬಾದ್ನ ಆ ತಂಡದಲ್ಲೂ ಜಾನಕಿ ಹಾಡ್ತಾ ಇದ್ದರು. ಇದಾದ್ಮೇಲೆ ಎಸ್.ಜಾನಕಿ ಅವರ ಮಾವ ವಿ.ಚಂದ್ರಶೇಖರ್ ಮೋನೋ ಆರ್ಟಿಸ್ಟ್ ಆಗಿದ್ದರು. ತಾವೇ ಮೇಕ್ ಅಪ್ ಮಾಡಿಕೊಳ್ಳುತ್ತಿದ್ದರು. ಬೇರೆ ಮೇಕ್ ಅಪ್ ಮಾಡಿಕೊಳ್ಳುವ ಗ್ಯಾಪ್ ಅಲ್ಲಿಯೆ ಎಸ್.ಜಾನಕಿ ಬಂದು ಹಿಂದಿ ಸಿನಿಮಾಗಳ ಹಾಡು ಹಾಡುತ್ತಿದ್ದರು.
ಮಾವನ ಮೋನೋ ಆ್ಯಕ್ಟ್ ಮಧ್ಯ ಹಾಡುಗಳನ್ನ ಕೇಳಿದ ಜನರಲ್ಲಿ ಯುವಕರು ಜಾನಕಿ ಧ್ವನಿ ಕೇಳಿ ಕಳೆದು ಹೋಗಿದ್ದರು. ಫೋನ್ ನಂಬರ್ ಕೊಡಿ ಅಂತಲೂ ಕೇಳುತ್ತಿದ್ದರು.
ಆದರೆ, ಜಾನಕಿ ಅವರ ಮಾವನವರು ಬಂದು ಬೈದೇ ಬಿಟ್ಟರು. ಹಾಗೆಲ್ಲ ಕಲಾವಿದರಿಗೆ ತೊಂದರೆ ಕೊಡ್ಬೇಡಿ ಅಂತಲೇ ಹೇಳಿದ್ದರು. ಹೀಗೆ ಎಸ್. ಜಾನಕಿ ಅವರು ತಮ್ಮ ವಿಶೇಷ ಕಂಠಸಿರಿಯಿಂದಲೇ ಜನರ ಮನದಲ್ಲಿ ಜಾಗ ಮಾಡಿಕೊಂಡಿದ್ದರು.
ಎಸ್.ಜಾನಕಿ ಅವರನ್ನ ಮಾವ ತಮ್ಮೂರಿಗೆ ಕರೆದುಕೊಂಡು ಹೋದರು. ಎಸ್.ಜಾನಕಿ ಮದುಗೆ ಆಗುವ ಹುಡುಗನ ಫೋಟೋ ತೋರಿಸಿದರು.
ಆ ಕಂಠಸಿರಿಗೆ ಕಾಲೇಜು ವಿದ್ಯಾರ್ಥಿಗಳು ಮಂತ್ರಮುಗ್ಧ
ಆ ಫೋಟೋ ನೋಡಿಯೇ ಎಸ್.ಜಾನಕಿ ಲವ್ ಅಲ್ಲಿ ಬಿದ್ದರು. ಆ ಫೋಟೋವನ್ನು ಜಾನಕಿ ಕದ್ದು ಇಟ್ಟುಕೊಂಡರು. ಹಾಗೆ ವಿ. ರಾಮಪ್ರಸಾದ್ ಅವರ ಮುಂದೆ ಎಸ್. ಜಾನಕಿ ಆ ಒಂದು ಹಾಡು ಕೂಡ ಹಾಡಿದ್ದರು.
ಅದು ಬಾಲಿವುಡ್ನ ರಸಿಕ ಬಲಮಾ ಹಾಡೇ ಆಗಿತ್ತು. ಚೋರಿ ಚೋರಿ ಚಿತ್ರದ ಈ ಹಾಡನ್ನ ಕೇಳಿಯೇ ರಾಮ್ ಪ್ರಸಾದ್ ಅವರು ಕಳೆದು ಹೋಗಿದ್ದರು.
ಕನ್ನಡದಲ್ಲಿ ಎಸ್.ಜಾನಕಿ ಅವರು ಹ್ಯಾಪಿ ಸಾಂಗ್ ಮತ್ತು ಪ್ಯಾಥೋ ಸಾಂಗ್ ಹಾಡಿದ್ದರು. ಆದರೆ, ಕನ್ನಡದಲ್ಲಿ ಇವರು ಹಾಡಿರೋ ಪ್ಯಾಥೋ ಸಾಂಗೇ ಮೊದಲು ರಿಲೀಸ್ ಆಗಿತ್ತು. ಈ ಎಲ್ಲ ವಿಚಾರಗಳನ್ನ ಎಸ್.ಜಾನಕಿ ಅವರು ಆಕಾಶವಾಣಿ ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 11, 2026 10:15 PM IST














