ಬೇರೆ ರಾಜ್ಯದಿಂದ ವಾಹನ ತಂದು, ಇಲ್ಲಿ ಸ್ಥಳೀಯ ನೋಂದಣಿ (Local Registration) ಮಾಡಿಸದೆ ರಸ್ತೆಗಿಳಿಸಿದ್ದರೆ ಅಥವಾ ನಿಯಮ ಮೀರಿ ವಾಹನಕ್ಕೆ ಮೇಕಪ್ ಮಾಡಿದರೆ ಇನ್ಮುಂದೆ ಕೇವಲ ದಂಡವಲ್ಲ, ಜೈಲೂಟ ಹಾಗೂ ಗಾಡಿ ಸೀಜ್ ಆಗೋದು ಗ್ಯಾರಂಟಿ! ಕರ್ನಾಟಕ ಹೈಕೋರ್ಟ್‌ನ ಖಡಕ್ ಆದೇಶದ ಮೇರೆಗೆ ಶುರುವಾಗಿರುವ ಈ ಕಾರ್ಯಾಚರಣೆಯ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ಓದಿ.
ಕೇಂದ್ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 47ರ ಪ್ರಕಾರ, ಬೇರೆ ರಾಜ್ಯದಲ್ಲಿ ನೋಂದಣಿಯಾದ ವಾಹನವನ್ನು ಕರ್ನಾಟಕದಲ್ಲಿ 12 ತಿಂಗಳಿಗಿಂತ ಹೆಚ್ಚು ಕಾಲ ಬಳಸುತ್ತಿದ್ದರೆ, ಕಡ್ಡಾಯವಾಗಿ ಮರು-ನೋಂದಣಿ (Re-registration) ಮಾಡಿಸಲೇಬೇಕು. ಎಲೆಕ್ಟ್ರಿಕ್ ವಾಹನಗಳಿಗೂ (EV) ಮತ್ತು ಹಳೆಯ ವಾಹನಗಳಿಗೂ ಕೆಲವು ರಿಯಾಯಿತಿಗಳಿದ್ದರೂ ಈ ನೋಂದಣಿ ನಿಯಮ ಕಡ್ಡಾಯವಾಗಿದೆ!
ಮರು-ನೋಂದಣಿ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಿಂಪಲ್ ಸ್ಟೆಪ್ಸ್
- NOC ಕಡ್ಡಾಯ: ಮೊದಲು ನಿಮ್ಮ ವಾಹನದ ಮೂಲ ರಾಜ್ಯದ RTO ಯಿಂದ ನಿರಾಕ್ಷೇಪಣಾ ಪತ್ರ (NOC – ನಮೂನೆ 28) ಪಡೆಯಬೇಕು. (ಕೇಂದ್ರ ಸರ್ಕಾರ ಈಗ NOC ಪ್ರಕ್ರಿಯೆಯನ್ನು ಸಾಕಷ್ಟು ಸರಳೀಕರಣಗೊಳಿಸಿದೆ).
- ತೆರಿಗೆ ಪಾವತಿ: ಕರ್ನಾಟಕ RTO ಗೆ ಅರ್ಜಿ ಸಲ್ಲಿಸಿ, ಜೀವಿತಾವಧಿ ರಸ್ತೆ ತೆರಿಗೆಯನ್ನು (Lifetime Tax) ಪಾವತಿಸಬೇಕು.
- ಹೊಸ ನಂಬರ್: ಬಳಿಕ ಕರ್ನಾಟಕದ ಹೊಸ ನೋಂದಣಿ ಸಂಖ್ಯೆ (KA Registration) ಪಡೆದು, RC ಯಲ್ಲಿ ವಿಳಾಸ ಬದಲಾವಣೆ ಮಾಡಿಕೊಳ್ಳಬೇಕು.
ಹೊರ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ (ಉದಾಹರಣೆಗೆ: ಪಾಂಡಿಚೇರಿ) ಕಡಿಮೆ ತೆರಿಗೆ ಪಾವತಿಸಿ ವಾಹನ ಖರೀದಿಸಿ, ಕರ್ನಾಟಕಕ್ಕೆ ತಂದು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಕೋಟಿಗಟ್ಟಲೆ ರಸ್ತೆ ತೆರಿಗೆ ಆದಾಯ ನಷ್ಟವಾಗುತ್ತಿದೆ. ಜೊತೆಗೆ ಹಳೆಯ ವಾಹನಗಳಿಂದ ಪರಿಸರ ನಿಯಮಗಳ (PUC, BS norms) ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಯಲು ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಭರ್ಜರಿ ಕಾರ್ಯಾಚರಣೆ ಶುರುವಾಗಿದ್ದು, ಮಂಡ್ಯ RTO ಕೂಡ ಈ ಮೆಗಾ ಡ್ರೈವ್‌ಗೆ ಕೈಜೋಡಿಸಿದೆ.
ಒಂದು ವೇಳೆ 12 ತಿಂಗಳು ಕಳೆದರೂ ಮರು-ನೋಂದಣಿ ಮಾಡಿಸದಿದ್ದರೆ ಕಾದಿದೆ ಮಾರಿಹಬ್ಬ!
ಭಾರಿ ದಂಡ: ನಿಯಮ ಉಲ್ಲಂಘನೆಗೆ ಭಾರಿ ದಂಡ, ಬಾಕಿ ಉಳಿಸಿಕೊಂಡಿರುವ ತೆರಿಗೆ (Tax arrears) ಹಾಗೂ ಅದರ ಮೇಲಿನ ಬಡ್ಡಿಯನ್ನೂ (Interest) ನಿಮ್ಮಿಂದಲೇ ವಸೂಲಿ ಮಾಡಲಾಗುತ್ತದೆ.
ಕೇವಲ ಹೊರ ರಾಜ್ಯದ ವಾಹನಗಳಷ್ಟೇ ಅಲ್ಲ, ವಾಹನಗಳ ಮೇಲೆ ದರ್ಪ ತೋರುವಂತೆ ಅಳವಡಿಸಿರುವ ಅನಧಿಕೃತ ಚಿಹ್ನೆಗಳು ಹಾಗೂ ಲಾಂಛನಗಳ ಮೇಲೂ ಅಧಿಕಾರಿಗಳ ಕಣ್ಣು ಬಿದ್ದಿದೆ. ವಿಐಪಿ ಲಾಂಛನಗಳು (ಅಶೋಕ ಚಕ್ರ, ಸರ್ಕಾರದ ಎಂಬ್ಲೆಮ್), ಜಾತಿ-ಧರ್ಮ-ರಾಜಕೀಯ-ನಟರ ಸ್ಟಿಕ್ಕರ್‌ಗಳು, “Press”, “Government”, “Police” ನಕಲಿ ಬೋರ್ಡ್‌ಗಳು ಹಾಗೂ ಅನಧಿಕೃತ ಲೈಟ್/ಮಾರ್ಕಿಂಗ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕು. ನಂಬರ್ ಪ್ಲೇಟ್ ಮೇಲೆ ಗೀಚುವಂತಿಲ್ಲ!
ಇಂತಹ ಅನಧಿಕೃತ ಫ್ಲ್ಯಾಗ್, ಲೋಗೋಗಳನ್ನು 4 ವಾರಗಳೊಳಗೆ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ (2025) ಖಡಕ್ ಸೂಚನೆ ನೀಡಿದೆ. ಪುನರಾವರ್ತಿತ ಉಲ್ಲಂಘನೆಗೆ ₹5,000 ಕ್ಕೂ ಹೆಚ್ಚು ದಂಡ, ಲೈಸೆನ್ಸ್ ರದ್ದು, ಗಾಡಿ ಜಪ್ತಿ. ಪೊಲೀಸ್/ಸರ್ಕಾರಿ ಅಧಿಕಾರಿ ಎಂದು ನಟಿಸಿ ವಂಚಿಸಿದರೆ ಕ್ರಿಮಿನಲ್ ಕೇಸ್ ದಾಖಲಾಗಿ ಜೈಲುಪಾಲು ಗ್ಯಾರಂಟಿ.
ವಾಹನ ಮಾಲೀಕರೇ ಗಮನಿಸಿ: ದಂಡ ಕಟ್ಟುವ ಮುನ್ನ ಈಗಲೇ ಈ ಕೆಲಸ ಮಾಡಿ!












