Last Updated:
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 220 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
IPL 2026ರ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 220 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಮಿಚೆಲ್ ಮಾರ್ಷ್ (96), ಜೋಶ್ ಇಂಗ್ಲಿಸ್ (60) ಅರ್ಧಶತಕ ಸಿಡಿಸಿ ಈ ಬೃಹತ್ ಮೊತ್ತಕ್ಕೆ ಕಾರಣರಾದರು. ರಾಯಲ್ಸ್ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಾದರೆ 20 ಓವರ್ಗಳಲ್ಲಿ 221 ರನ್ಗಳ ಬೃಹತ್ ಮೊತ್ತವನ್ನ ಚೇಸ್ ಮಾಡಿ ಗೆಲ್ಲಬೇಕಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಲಖನೌ ತಂಡಕ್ಕೆ ಜೋಶ್ ಇಂಗ್ಲಿಸ್ ಮತ್ತು ಮಿಚೆಲ್ ಮಾರ್ಷ್ ಭರ್ಜರಿ ಆರಂಭ ನೀಡಿದರು. ಈ ಆಸೀಸ್ ಜೋಡಿ ಮೊದಲ ವಿಕೆಟ್ ಗೆ 109 ರನ್ ಗಳ ಜೊತೆಯಾಟ ನೀಡಿತು. ಒಂಬತ್ತನೇ ಓವರ್ ನಲ್ಲಿ ಯಶ್ ರಾಜ್ ಪುಂಜಾ ಇಂಗ್ಲಿಸ್ ಅವರನ್ನು ಬೌಲ್ಡ್ ಮಾಡಿ ರಾಯಲ್ಸ್ಗೆ ಮೊದಲ ಬ್ರೇಕ್ ನೀಡಿದರು. ಇಂಗ್ಲಿಸ್ 29 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು. ನಂತರ ಬಂದ ನಿಕೋಲಸ್ ಪೂರನ್ 11 ಎಸೆತಗಳಲ್ಲಿ 16 ರನ್ ಗಳಿಸಿ ನಿರ್ಗಮಿಸಿದರು. 13ನೇ ಓವರ್ ನಲ್ಲಿ ಪೂರನ್ ಅವರನ್ನು ಪುಂಜಾ ಪೆವಿಲಿಯನ್ ಗೆ ಕಳುಹಿಸಿದರು.
3ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಮಿಚೆಲ್ ಮಾರ್ಷ್ ಹಾಗೂ ನಾಯಕ ರಿಷಭ್ ಪಂತ್ 64 ರನ್ಗಳ ಜೊತೆಯಾಟ ನೀಡಿದರು. ರಿಷಭ್ ಪಂತ್ 23 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ಸಹಿತ 35 ರನ್ಗಳಿಸಿ 20ನೇ ಓವರ್ನ ಮೊದಲ ಎಸೆತದಲ್ಲಿ ರನ್ಔಟ್ ಆದರು. ಆರಂಭಿಕನಾಗಿ ಬಂದು ಕೊನೆಯ ಓವರ್ವರೆಗೂ ಆಡಿದ ಮಿಚೆಲ್ ಮಾರ್ಷ್ 57 ಎಸೆತಗಳಲ್ಲಿ 11 ಬೌಂಡರಿ, 5ಸಿಕ್ಸರ್ಗಳ ಸಹಿತ 96 ರನ್ಗಳಿಸಿದರು. ಕೊನೆಯ ಓವರ್ನ 5ನೇ ಎಸೆತದಲ್ಲಿ ರನ್ಔಟ್ ಆಗುವ ಮೂಲಕ ಶತಕ ಮಿಸ್ ಮಾಡಿಕೊಂಡರು.
ರಾಜಸ್ಥಾನ್ ರಾಯಲ್ಸ್ ಪರ ಯಶ್ ರಾಜ್ ಪೂಂಜಾ 35ಕ್ಕೆ2 ವಿಕೆಟ್ ಪಡೆದು ಮಿಂಚಿದರೆ, ಜೋಫ್ರಾ ಆರ್ಚರ್ 39ಕ್ಕೆ1 ವಿಕೆಟ್ ಪಡೆದರು. ಸಂದೀಪ್ ಶರ್ಮಾ(43), ಬ್ರಿಜೇಷ್ ಶರ್ಮಾ (44) ಹಾಗೂ ಸುಶಾಂತ್ ಶರ್ಮಾ (46) ದುಬಾರಿಯಾದರು. ಕೊನೆಯ ಮೂರು ಓವರ್ಗಳಲ್ಲಿ ಕೇವಲ 26 ರನ್ ನೀಡುವ ಮೂಲಕ ರಾಯಲ್ಸ್ ಬೌಲರ್ಗಳು ಲಖನೌ 240-250 ದಾಟದಂತೆ ತಡೆದರು. ಕೊನೆಯ ಓವರ್ನಲ್ಲಿ ಆರ್ಷರ್ ಕೇವಲ 5 ರನ್ ನೀಡಿದರು.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ರಿಷಭ್ ಪಂತ್ (ನಾಯಕ/ವಿಕೀ), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಆಕಾಶ್ ಸಿಂಗ್, ಪ್ರಿನ್ಸ್ ಯಾದವ್]
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಧ್ರುವ್ ಜುರೆಲ್ (ವಿಕೀ), ಡೊನೊವನ್ ಫೆರೇರಾ, ಶುಭಂ ದುಬೆ, ದಾಸುನ್ ಶನಕ, ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ಸುಶಾಂತ್ ಮಿಶ್ರಾ, ಬ್ರಿಜೇಶ್ ಶರ್ಮಾ, ಯಶ್ ಪುಂ













