RR vs DC: ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಸೂರ್ಯವಂಶಿ, ಪರಾಗ್! ಡೆಲ್ಲಿಗೆ 194 ರನ್​ಗಳ ಸವಾಲಿನ ಗುರಿ ನೀಡಿದ ರಾಯಲ್ಸ್ | ಕ್ರೀಡಾ ಸುದ್ದಿ | ACTPnews

ರಾಜಸ್ಥಾನ್ ರಾಯಲ್ಸ್


Last Updated:

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್​ಗಳಿಸಿದೆ.

ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್

2026ರ ಐಪಿಎಲ್​​ನ (IPL 2026) 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RR vs DC) ತಂಡಗಳು ಮುಖಾಮುಖಿಯಾಗಿವೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್​ಗಳಿಸಿದೆ. ವೈಭವ್ ಸೂರ್ಯವಂಶಿ (Vaibhav Sooryavanshi) 46, ಧ್ರುವ್ ಜುರೆಲ್ 53 ಹಾಗೂ ರಿಯಾನ್ ಪರಾಗ್ 51 ರನ್​​​ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು.

ಟಾಸ್ ಸೋತು ಬ್ಯಾಟಿಂಗ್​​ಗೆ ಇಳಿದ ರಾಜಸ್ಥಾನ್ ರಾಯಲ್ಸ್ 2ನೇ ಓವರ್​ನಲ್ಲಿಯೇ ಯಶಸ್ವಿ ಜೈಸ್ವಾಲ್​ (12) ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ 9 ಎಸೆತಗಳಲ್ಲಿ 12 ರನ್​ಗಳಿಸಿ ಲುಂಗಿ ಎನ್ಗಿಡಿ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 46 ರನ್ ಗಳಿಸಿ ಅಬ್ಬರಿಸಿದರು. ಸೂರ್ಯವಂಶಿ 2ನೇ ವಿಕೆಟ್ ಜೊತೆಯಾಟದಲ್ಲಿ ಜುರೆಲ್ ಜೊತೆಗೂಡಿ 70 ರನ್​ಗಳ ಜೊತೆಯಾಟ ನೀಡಿದರು. ಮಾಧವ್ ತಿವಾರಿ ಸೂರ್ಯವಂಶಿ ವಿಕೆಟ್ ಪಡೆದು ಡೆಲ್ಲಿಗೆ ಬ್ರೇಕ್ ನೀಡಿದರು.

ನಾಯಕ ಪರಾಗ್ ಅಬ್ಬರ

ಸೂರ್ಯವಂಶಿ ವಿಕೆಟ್ ಬಳಿಕ ಬಂದ ನಾಯಕ ರಿಯಾನ್ ಪರಾಗ್ ಕೂಡ ಅಬ್ಬರಿಸಿದರು. ಕೇವಲ 26 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. ಆದರೆ ಮಿಚೆಲ್ ಸ್ಟಾರ್ಕ್​ 15ನೇ ಓವರ್​ನಲ್ಲಿ ಮೂರು ವಿಕೆಟ್ ಪಡೆದು ರಾಜಸ್ಥಾನದ ಬೃಹತ್ ಮೊತ್ತದ ಕನಸಿಗೆ ಭಂಗ ತಂದರು. 15ನೇ ಓವರ್​ನ 2ನೇ ಎಸೆತದಲ್ಲಿ ಪರಾಗ್​​ರನ್ನ ಪೆವಿಲಿಯನ್​ಗಟ್ಟಿದ ಸ್ಟಾರ್ಕ್ ನಂತರ 3ನೇ ಎಸೆತದಲ್ಲಿ ಡೊನೊವೆನ್ ಪರೇರಾ(0) ಹಾಗೂ 5ನೇ ಎಸೆತದಲ್ಲಿ ರವಿ ಸಿಂಗ್ (4) ವಿಕೆಟ್ ಪಡೆದರು.

ಅನಂತರ ರಾಜಸ್ಥಾನ್ ರಾಯಲ್ಸ್ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಶುಭಂ ದುಬೆ 5, ದಾಸುನ್ ಶನಕಾ 8 ಎಸೆತಗಳಲ್ಲಿ 10, ಧ್ರುವ್ ಜುರೆಲ್ 40 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 53 ರನ್​ಗಳಿಸಿ 20ನೇ ಓವರ್​ನಲ್ಲಿ ಔಟ್ ಆದರು. ಜೋಫ್ರಾ ಆರ್ಚರ್ ಅಜೇಯ 2, ಆ್ಯಡಂ ಮಿಲ್ನೆ ಅಜೇಯ 2 ರನ್​ಗಳಿಸಿದರು.

ಕೊನೆ 5 ಓವರ್​ಗಳಲ್ಲಿ ಕಳಪೆ ಬ್ಯಾಟಿಂಗ್

ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಸ್ಟಾರ್ಕ್ 40ಕ್ಕೆ4,  ಲುಂಗಿ ಎನ್​ಗಿಡಿ 24ಕ್ಕೆ2 ಹಾಗೂ 27ಕ್ಕೆ2 ವಿಕೆಟ್ ಪಡೆದರು. ವೈಭವ್ ಮೊದಲು, ನಂತರ ಪರಾಗ ಆಡುವಾಗ ರಾಜಸ್ಥಾನ್ 220-230 ರನ್​ಗಳಿಸುವ ಸಾಧ್ಯತೆ ಇತ್ತು. ಆದರೆ 15 ಓವರ್​ ಬಳಿಕ ಎಲ್ಲಾ ಲೆಕ್ಕಾಚಾರ ಉಲ್ಟಾ ಆಯಿತು. 15 ಓವರ್​​ ಇದ್ದಾಗ 166 ರನ್​ಗಳಿಸಿದ್ದ ರಾಯಲ್ಸ್ ಮುಂದಿನ ಡೆಲ್ಲಿ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ  5 ಓವರ್​ಗಳಲ್ಲಿ ಕೇವಲ 27 ರನ್​ ಮಾತ್ರ ಸಿಡಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed