Rising Bharat Summit 2026: ರಕುಲ್ ಪ್ರೀತ್ ಮೊದಲ ಸಿನಿಮಾದ ಸಂಭಾವನೆ ಎಷ್ಟು? ರೈಸಿಂಗ್ ಭಾರತ್‌ನಲ್ಲಿ ಸೀಕ್ರೆಟ್ ಬಿಚ್ಚಿಟ್ಟ ಬಾಲಿವುಡ್ ನಟಿ | | ACTPnews

ನಟಿ ರಕುಲ್ ಪ್ರೀತ್ ಸಿಂಗ್


Last Updated:

ನ್ಯೂಸ್18 ನೆಟ್‌ವರ್ಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ದಕ್ಷಿಣ ಭಾರತದ ಮೊದಲ ಆವೃತ್ತಿಯಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದಿಂದ ಹಿಡಿದು ಸಿನಿಮಾ, ಉದ್ಯಮ, ಫಿಟ್‌ನೆಸ್ ಹಾಗೂ ಭವಿಷ್ಯದ ಯೋಜನೆಗಳವರೆಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು.

ನಟಿ ರಕುಲ್ ಪ್ರೀತ್ ಸಿಂಗ್
ನಟಿ ರಕುಲ್ ಪ್ರೀತ್ ಸಿಂಗ್

ಭಾರತದ ಬೆಳವಣಿಗೆ, ಉದ್ಯಮಶೀಲತೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಅನುಭವಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಆಯೋಜಿಸಲಾಗಿರುವ ‘ರೈಸಿಂಗ್ ಭಾರತ್ ಶೃಂಗಸಭೆ'(Rising Bharat Summit) ಗೆ ಬೆಂಗಳೂರಿನಲ್ಲಿ ಅದ್ದೂರಿ ಚಾಲನೆ ದೊರೆತಿದೆ. ನ್ಯೂಸ್18 ನೆಟ್‌ವರ್ಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ದಕ್ಷಿಣ ಭಾರತದ ಮೊದಲ ಆವೃತ್ತಿಯಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದಿಂದ ಹಿಡಿದು ಸಿನಿಮಾ, ಉದ್ಯಮ, ಫಿಟ್‌ನೆಸ್ ಹಾಗೂ ಭವಿಷ್ಯದ ಯೋಜನೆಗಳವರೆಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು.

ರಕುಲ್ ಪ್ರೀತ್ ಸಿಂಗ್ ತಮ್ಮ ಪತಿ ಜಾಕಿ ಭಗ್ನಾನಿ ಅವರೊಂದಿಗೆ ಮದುವೆಯಾದ ಬಳಿಕ ಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆ ಆಗಿಲ್ಲ ಎಂದು ಹೇಳಿದರು. ಇಬ್ಬರೂ ಹೊಸ ಜೀವನವನ್ನು ಸಹಜವಾಗಿ ಸ್ವೀಕರಿಸಿದ್ದು, ಪರಸ್ಪರರ ವೃತ್ತಿಜೀವನದ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಒಬ್ಬರ ಕನಸುಗಳಿಗೆ ಮತ್ತೊಬ್ಬರು ಬೆಂಬಲ ನೀಡುವುದು ತಮ್ಮ ದಾಂಪತ್ಯದ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದ ಅವರು, ಇದೇ ಕಾರಣದಿಂದ ಹಲವು ಉದ್ಯಮಗಳಲ್ಲಿ ಇಬ್ಬರೂ ಒಟ್ಟಾಗಿ ಹೂಡಿಕೆ ಮಾಡುತ್ತಿರುವುದಾಗಿ ತಿಳಿಸಿದರು.

ನಂತರ ಆರೋಗ್ಯ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ವೆಲ್‌ಬೀಯಿಂಗ್ ನ್ಯೂಟ್ರಿಷನ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರು. ಬಳಿಕ ಆರೋಗ್ಯಕರ ರಾಗಿ ಆಹಾರವನ್ನು ನೀಡುವ ಆರಂಭಮ್ ರೆಸ್ಟೋರೆಂಟ್ ಆರಂಭಿಸಿದ್ದು, ಅದು ಈಗ ದೇಶಾದ್ಯಂತ 40ಕ್ಕೂ ಹೆಚ್ಚು ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಇಂದಿನ ವೇಗದ ಬದುಕು, ಒತ್ತಡ, ಮಾಲಿನ್ಯ ಹಾಗೂ ಆಹಾರ ಪದ್ಧತಿಯ ಬದಲಾವಣೆಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೇಹದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಸಿನಿಮಾದಿಂದ ಆರಂಭವಾದ ಸಿನಿ ಪಯಣ

ತಮ್ಮ ಸಿನಿ ಬದುಕಿನ ಆರಂಭವನ್ನು ನೆನಪಿಸಿಕೊಂಡ ರಕುಲ್, ಮೊದಲ ಸಿನಿಮಾ ಕನ್ನಡದಲ್ಲೇ ಆಗಿತ್ತು ಎಂದು ಹೇಳಿದರು. ಆಗ ತಾವು ಕಾಲೇಜಿನಲ್ಲಿ ಓದುತ್ತಿದ್ದು, ಒಂದು ಕಾರು ಖರೀದಿಸಬೇಕೆಂಬ ಆಸೆಯಿಂದ ಮೊದಲ ಸಿನಿಮಾವನ್ನು ಒಪ್ಪಿಕೊಂಡಿದ್ದಾಗಿ ಅವರು ನಗುತ್ತಾ ನೆನಪಿಸಿಕೊಂಡರು.

ಆದರೆ ಚಿತ್ರದ ಚಿತ್ರೀಕರಣ ಮುಗಿಯುವಷ್ಟರಲ್ಲಿ ನಟನೆಯೇ ತಮ್ಮ ನಿಜವಾದ ವೃತ್ತಿ ಎಂಬುದು ಅರಿವಾಯಿತು. ಆದರೂ ಮೊದಲು ಪದವಿ ಪೂರ್ಣಗೊಳಿಸಿದ ಬಳಿಕವೇ ಸಂಪೂರ್ಣವಾಗಿ ಚಿತ್ರರಂಗಕ್ಕೆ ಪ್ರವೇಶಿಸಿದೆ ಎಂದು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed