Last Updated:
ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಹೊಸ ಸುದ್ದಿ ಹೊರ ಬಂದಿದೆ. ರಿಷಬ್ ಶೆಟ್ರ ಜೊತೆಗೆ ಭೂಮಿ ತೆರೆ ಹಂಚಿಕೊಳ್ತಿರೋ ಸುದ್ದಿ ಇದಾಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ರಿಷಬ್ ಶೆಟ್ಟಿ (Rishab Shetty) ಅವರ ಜೊತೆಗೆ ನಟಿಸ್ತಿರೋದು ತುಂಬಾನೆ ಖುಷಿ ಇದೆ. ಅವರ ಕಾಂತಾರ ಚಿತ್ರ ನನಗೆ ತುಂಬಾನೆ ಇಷ್ಟ ಆಗುತ್ತದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ (Rishab Shetty) ತುಂಬಾನೆ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಇಂತಹ ಅದ್ಭುತ ನಟನ ಜೊತೆಗೆ ಸ್ಕ್ರೀನ್ ಹಂಚಿಕೊಳ್ಳುತ್ತಿರೋದು ತುಂಬಾನೆ ಖುಷಿ ಆಗಿದೆ. ಹೀಗಂತ ಬಾಲಿವುಡ್ನ ನಟಿ ಭೂಮಿ ಪೆಡ್ನೇಕರ್ (Bhumi Pednekkar) ಹೇಳಿಕೊಂಡಿದ್ದಾರೆ. ಇವರು ರಿಷಬ್ ಶೆಟ್ಟಿ (Rishab Shetty) ಅವರ ಜೊತೆಗೆ ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಇಲ್ಲಿದೆ ಓದಿ.
ರೋಲ್ ಏನ್ ಗೊತ್ತಾ?
(ಚಿತ್ರ ಕೃಪೆ: ಭೂಮಿ ಪೆಡ್ನೇಕರ್ ಇನ್ಸ್ಟಾಗ್ರಾಮ್)
ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರ ಮಾಡುತ್ತಿದ್ದಾರೆ. ಸಂದೀಪ್ ಸಿಂಗ್ ಈ ಚಿತ್ರವನ್ನ ಡೈರೆಕ್ಷನ್ ಮಾಡ್ತಿದ್ದಾರೆ. ಇವರೇ ಈ ಚಿತ್ರವನ್ನ ನಿರ್ಮಾಣ ಕೂಡ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರು ನಟಿಸುತ್ತಿದ್ದಾರೆ. ಇವರ ಪಾತ್ರಕ್ಕೂ ಕರ್ನಾಟಕಕ್ಕೂ ಲಿಂಕ್ ಇದೆ. ಅದೇನು ಅಂತ ನೋಡೋದಾದ್ರೆ, ಭೂಮಿ ಪೆಡ್ನೇಕರ್ ಈ ಚಿತ್ರದಲ್ಲಿ ಕರ್ನಾಟಕದ ಧೀರ ವೀರ ರಾಣಿ ಬೆಳವಡಿ ಮಲ್ಲಮ್ಮ ಪಾತ್ರವನ್ನೆ ಮಾಡುತ್ತಿದ್ದಾರೆ.
ಈ ಒಂದು ಪಾತ್ರ ಮಾಡ್ತಿರೋದಕ್ಕೆ ತುಂಬಾನೆ ಖುಷಿ ಇದೆ. ಕರ್ನಾಟಕದ ವೀರ ರಾಣಿಯ ಪಾತ್ರವನ್ನ ಮಾಡ್ತಿರೋದು ತುಂಬಾನೆ ಖುಷಿಕೊಟ್ಟಿದೆ. ವೀರ ರಾಣಿಯ ಪಾತ್ರವನ್ನ ತೆರೆ ಮೇಲೆ ತರುವುದು ನನಗೆ ಸಿಕ್ಕ ಅತಿ ದೊಡ್ಡ ಸೌಭಾಗ್ಯ ಅಂತಲೂ ಹೇಳಿದ್ದಾರೆ.
ಈ ವರ್ಷ ಕೊನೆ ಶೂಟಿಂಗ್ ಶುರು
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್)
ನಾನು ಕಾಂತಾರ ಚಿತ್ರವನ್ನ ನೋಡಿದ್ದೇನೆ. ಇದರಲ್ಲಿ ರಿಷಬ್ ಶೆಟ್ಟಿ ಅವರು ತುಂಬಾನೆ ಚೆನ್ನಾಗಿ ಅಭಿನಯಿಸಿದ್ದಾರೆ. ಇವರ ಅಭಿನಯ ನನ್ನ ಮಂತ್ರಮುಗ್ಧಗೊಳಿಸಿದೆ ಅಂತೂ ಭೂಮಿ ಪೆಡ್ನೇಕರ್ ಹೇಳಿಕೊಂಡಿದ್ದಾರೆ.
ಭೂಮಿ ಪೆಡ್ನೇಕರ್ ಅವರು ಈ ಚಿತ್ರದ ಕತೆ ಕೇಳಿದಾಗ ತುಂಬಾನೆ ಖಷಿನೂ ಆಗಿದ್ದಾರೆ. ಡೈರೆಕ್ಟರ್ ಸಂದೀಪ್ ಸಿಂಗ್ ಅವರು ಕತೆ ಹೇಳಿದ್ದಾರೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಚಿತ್ರದಲ್ಲಿ ಭೂಮಿ ಪೆಡ್ನೇಕರ್
(ಚಿತ್ರ ಕೃಪೆ: ಭೂಮಿ ಪೆಡ್ನೇಕರ್ ಇನ್ಸ್ಟಾಗ್ರಾಮ್)
ಈ ಕಥೆ ಕೇಳಿದಾಕ್ಷಣ ಭೂಮಿ ಯೋಚನೆ ಮಾಡಿಯೇ ಇಲ್ಲ, ಆ ಕೂಡಲೇ ಒಪ್ಪಿಕೊಂಡಿದ್ದಾರೆ. ಆದರೆ, ಇದನ್ನ ಅವರ ವಿಭಿನ್ನವಾಗಿಯೇ ಹೇಳಿಕೊಳ್ಳುತ್ತಾರೆ. “ಸಂದೀಪ್ ಸಿಂಗ್ ಅವರು ಕತೆ ಹೇಳಿದರು. ಕತೆ ಕೇಳಿದಾಕ್ಷಣವೇ ನನ್ನ ಒಳಗಿನ ನಟಿ ಓಕೆ ಅಂತ ಹೇಳಿಯೇ ಬಿಟ್ಟಳು” ಅಂತಲೇ ಭೂಮಿ ಹೇಳಿಕೊಂಡಿದ್ದಾರೆ.
ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದ ಶೂಟಿಂಗ್ ಇನ್ನು ಶುರು ಆಗಿಲ್ಲ. ಆದರೆ, ಈ ವರ್ಷದ ಕೊನೆಯಲ್ಲಿ ಶೂಟಿಂಗ್ ಶುರು ಆಗುತ್ತಿದೆ.
ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸ ಶುರು ಆಗಿದೆ. ಈ ಚಿತ್ರಕ್ಕೆ ರಿಷಿ ವಿರ್ಮನಿ ಕತೆ ಬರೆದಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಕೊಟ್ಟಿದ್ದಾರೆ. ಪ್ರಸೂನ್ ಜೋಶಿ ಈ ಚಿತ್ರಕ್ಕೆ ಹಾಡುಗಳನ್ನ ಬರೆದಿದ್ದಾರೆ ಅಂತ Varietyindia.com ವರದಿ ಮಾಡಿದೆ.
Bangalore [Bangalore],Bangalore,Karnataka














