Last Updated:
Reservation Hathao Andolan: ಹಲವು ಬೆಂಬಲ, ಹಲವು ಆರೋಪಗಳ ನಡುವೆಯೇ ಜಿರಳೆಗಳು ದೇಶಾದ್ಯಂತ ಸುದ್ದಿಮಾಡಿದ್ದು ಗೊತ್ತೇ ಇದೆ. ಇದೀಗ ಸಿಜೆಪಿ ಪ್ರತಿಭಟನೆಯ ನಂತರ ಭಾರತದಲ್ಲಿ ಹೊಸ ಚಳವಳಿ ಆರಂಭವಾಗಿದೆ. ಇದನ್ನು ‘ರಿಸರ್ವೇಷನ್ ಹಟಾವೋ ಆಂದೋಲನ’ ಎಂದು ಕರೆಯಲಾಗುತ್ತಿದೆ. RHA ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ಪಡೆದಿದೆ.
ದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಹಾವಳಿ ಬಗ್ಗೆ ನಿಮಗೆ ಗೊತ್ತಾಗೇ ಇದೆ. ನೀಟ್ ವಿದ್ಯಾರ್ಥಿಗಳ (NEET students) ಪ್ರತಿಭಟನೆಯನ್ನೇ ಅಸ್ತ್ರವಾಗಿಸಿಕೊಂಡ ಸಿಜೆಪಿ, ಕೇಂದ್ರ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಪಡೆದು, ವಿಜಯೋತ್ಸವ ಆಚರಿಸಿದೆ. ಹಲವು ಬೆಂಬಲ, ಹಲವು ಆರೋಪಗಳ ನಡುವೆಯೇ ಜಿರಳೆಗಳು ದೇಶಾದ್ಯಂತ ಸುದ್ದಿಮಾಡಿದ್ದು ಗೊತ್ತೇ ಇದೆ. ಇದೀಗ ಸಿಜೆಪಿ ಪ್ರತಿಭಟನೆಯ ನಂತರ ಭಾರತದಲ್ಲಿ ಹೊಸ ಚಳವಳಿ ಆರಂಭವಾಗಿದೆ. ಇದನ್ನು ‘ರಿಸರ್ವೇಷನ್ ಹಟಾವೋ ಆಂದೋಲನ’ (Reservation Hatao Andolan) ಎಂದು ಕರೆಯಲಾಗುತ್ತಿದೆ.
‘ರಿಸರ್ವೇಷನ್ ಹಟಾವೋ ಆಂದೋಲನ’ ಚಳವಳಿ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ವೇಗವಾಗಿ ಬೆಳೆದು 4.6 ಮಿಲಿಯನ್ ಅನುಯಾಯಿಗಳನ್ನು ಪಡೆದುಕೊಂಡಿದೆ. ಇದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ರೀತಿಯ ಸಮಸ್ಯೆ ಆಧಾರಿತ ಅಭಿಯಾನಗಳು ಹುಟ್ಟಿಕೊಳ್ಳುತ್ತಿರುವುದನ್ನು ತೋರಿಸುತ್ತದೆ.
ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪರೀಕ್ಷೆ ಸಂಬಂಧಿತ ಪ್ರತಿಭಟನೆಗಳ ಕಾರಣದಿಂದ ರಾಜೀನಾಮೆ ನೀಡಿದ ನಂತರ ಈ ರೀತಿಯ ಅನೇಕ ಆನ್ಲೈನ್ ಅಭಿಯಾನಗಳು ಹೊರಹೊಮ್ಮುತ್ತಿವೆ. ರಿಸರ್ವೇಷನ್ ಹಟಾವೋ ಆಂದೋಲನವೂ ಅಂತಹದೇ ಒಂದು ಚಳವಳಿಯಾಗಿದೆ. ಇದರ ಸಂಘಟಕರು ಇದನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟಿಲ್ಲದ, ಬದಲಾಗಿ ಇದು ನಾಗರಿಕರ ಚಳವಳಿ ಎಂದು ಹೇಳುತ್ತಿದ್ದಾರೆ.
ಅವರು ಬಿ.ಆರ್. ಅಂಬೇಡ್ಕರ್ ಅವರ ‘ಎಜುಕೇಟ್-ಅಜಿಟೇಟ್-ಆರ್ಗನೈಜ್’ (ಶಿಕ್ಷಣ ನೀಡಿ-ಆಂದೋಲನ ಮಾಡಿ-ಸಂಘಟಿಸಿ ) ಎಂಬ ಘೋಷಣೆಯನ್ನು ಬಳಸುತ್ತಾರೆ. ಅವರ ಪ್ರೊಫೈಲ್ನಲ್ಲಿ “ಸಾರಿ ಜಾತಿ ಏಕ ಸಮಾನ್, ಮೇರಾ ಬಸ್ ಯೆ ದೇಶ್ ಮಹಾನ್” (ಎಲ್ಲಾ ಜಾತಿಗಳು ಸಮಾನ, ನನ್ನ ದೇಶ ಶ್ರೇಷ್ಠ) ಎಂಬ ಹಿಂದಿ ಸಾಲು ಮತ್ತು “ಜೈ ಹಿಂದ್” ಎಂದು ಬರೆದಿದೆ.
ಈ ಗುಂಪಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 109 ಪೋಸ್ಟ್ಗಳಿವೆ. ಅವರು ತಮ್ಮನ್ನು ನಾಗರಿಕರು ಬೆಂಬಲಿಸುವ ಸುಧಾರಣೆಗೆ ಧ್ವನಿ ಕೊಡುವ ಚಳವಳಿ ಎಂದು ವಿವರಿಸುತ್ತಾರೆ. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟಿಲ್ಲ. ಹಲವು ನಾಗರಿಕರಂತೆ ನಾವೂ ಸರ್ಕಾರ ಬದಲಾದರೆ ಮೀಸಲಾತಿ ವ್ಯವಸ್ಥೆಯಲ್ಲಿ ದೊಡ್ಡ ಸುಧಾರಣೆಗಳು ಬರುತ್ತವೆ ಎಂದು ನಂಬಿದ್ದೆವು. ಆದರೆ ಬಿಜೆಪಿ ಅದನ್ನು ಮಾಡಲಿಲ್ಲ. ಬದಲಿಗೆ ಮೀಸಲಾತಿ ನೀತಿಗಳು ಮುಂದುವರಿದು ವಿಸ್ತರಿಸುತ್ತಲೇ ಇವೆ. ಈ ಸಮಸ್ಯೆಯನ್ನು ಪಕ್ಷ ರಾಜಕೀಯಕ್ಕೆ ಸೀಮಿತಗೊಳಿಸಬಾರದು. ನಮ್ಮ ಗಮನ ನೀತಿಯ ಮೇಲೆ ಇದೆ, ಪಕ್ಷದ ಮೇಲೆ ಅಲ್ಲ. ಇದು ಎಲ್ಲಾ ರಾಜಕೀಯ ಪಕ್ಷಗಳಿಂದ ಸ್ವತಂತ್ರವಾದ ನಾಗರಿಕರ ಚಳವಳಿ ಅಂತ ಘೋಷಿಸಲಾಗಿದೆ.
ಈ ಚಳವಳಿಯ ಮುಖ್ಯ ಬೇಡಿಕೆ ಏನು?
- ಜಾತಿ ಆಧಾರಿತ ತಾರತಮ್ಯವನ್ನು ತೊಡೆದುಹಾಕುವುದೇ ಗುರಿಯಾಗಿದ್ದರೆ, ಸರ್ಕಾರವು ಜನರ ದೈನಂದಿನ ಜೀವನದಲ್ಲಿ ಜಾತಿ ಗುರುತನ್ನು ಕೇಳಬಾರದು ಅಥವಾ ಗುರುತಿಸಬಾರದು.
- ಯಾರನ್ನೂ ಬ್ರಾಹ್ಮಣ, ಜಾಟ್, ಗುರ್ಜರ್, ಎಸ್ಸಿ, ಎಸ್ಟಿ ಎಂದು ಕರೆಯಬಾರದು. ಸರ್ಕಾರಿ ಫಾರ್ಮ್ಗಳು, ಶಿಕ್ಷಣ ಪ್ರವೇಶ, ಉದ್ಯೋಗ ಅರ್ಜಿಗಳಲ್ಲಿ ಜಾತಿ ಬರೆಯುವ ಅಗತ್ಯವಿರಬಾರದು.
- ದೀರ್ಘಕಾಲೀನ ಗುರಿ “ಒಂದು ರಾಷ್ಟ್ರ. ಒಂದು ಗುರುತು. ಭಾರತೀಯ.” ಎಂದು
- “ಮೀಸಲಾತಿ ತೆಗೆಯಿರಿ. ಜಾತಿವಾದ ತೆಗೆಯಿರಿ.” ಎಂಬ ಘೋಷಣೆ
ಸಿಜೆಪಿ ಪ್ರತಿಭಟನೆಯ ಯಶಸ್ಸಿನ ನಂತರ ಇಂತಹ ಹೊಸ ಗುಂಪುಗಳು ಹುಟ್ಟಿಕೊಳ್ಳುತ್ತಿವೆ. ಉದಾಹರಣೆಗೆ, ಇ20 ಜನತಾ ಪಾರ್ಟಿ ಎಂಬ ಹೊಸ ಅಭಿಯಾನವೂ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಅದು ಸಂಪೂರ್ಣ ಪೆಟ್ರೋಲ್ ಆಯ್ಕೆಯನ್ನು ಕೇಳುತ್ತಿದೆ ಮತ್ತು ಎಥನಾಲ್ ನೀತಿಯ ಬಗ್ಗೆ ಪೆಟ್ರೋಲಿಯಂ ಸಚಿವರ ರಾಜೀನಾಮೆಯನ್ನು ಕೇಳುತ್ತಿದೆ.














