Last Updated:
ದೋಷ್ನ ಮಾಫಿಸಾಕ್ಷಿ ಅರ್ಜಿಯನ್ನ ಕೋರ್ಟ್ ಅಂಗೀಕರಿಸಿದೆ. ಹೀಗಾಗಿ ಇಷ್ಟು ದಿನ ನಡೆದಿದ್ದೇ ಬೇರೆ, ಇನ್ಮುಂದೆ ನಡೆಯೋದೇ ಬೇರೆ ಆಗಿದೆ.
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ (Pradosh) ಅಪ್ರೂವರ್ ಆಗಿದ್ದು, ಆ ಮೂಲಕ ಆರೋಪಿ ನಟ ದರ್ಶನ್ (Darshan) ಸೇರಿದಂತೆ ಇತರರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಅಸಲಿ ಕಹಾನಿ ಬಿಚ್ಚಿಡ್ತೀನಿ ಅಂತಾ ತುದಿಗಾಲಲ್ಲಿ ನಿಂತಿದ್ದ ಪ್ರದೋಷ್ನ ಮಾಫಿಸಾಕ್ಷಿ ಅರ್ಜಿಯನ್ನ ಕೋರ್ಟ್ ಅಂಗೀಕರಿಸಿದೆ. ಹೀಗಾಗಿ ಇಷ್ಟು ದಿನ ನಡೆದಿದ್ದೇ ಬೇರೆ, ಇನ್ಮುಂದೆ ನಡೆಯೋದೇ ಬೇರೆ ಆಗಿದೆ.














