Last Updated:
ಈ ಕೇಸ್ ಕುರಿತು ಕೋರ್ಟ್ನಲ್ಲಿ ವಿಚಾರಣೆ ನಡುವೆಯುವಾಗಲೇ ಆರೋಪಿಗಳ ಪರ ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕಿದ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಪ್ರಕರಣದಲ್ಲಿ ಮೂವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು (ಜು.28): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ಕೇಸ್ನಲ್ಲಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದಾಸ ಇದೀಗ ಜೈಲು ಹಕ್ಕಿ ಆಗಿರೋದು ಅನೇಕ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. ಈ ಕೇಸ್ ಕುರಿತು ಕೋರ್ಟ್ನಲ್ಲಿ ವಿಚಾರಣೆ ನಡುವೆಯುವಾಗಲೇ ಆರೋಪಿಗಳ ಪರ ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕಿದ ವಿಚಾರ ಬೆಳಕಿಗೆ ಬಂದಿತ್ತು. ಬೆದರಿಕೆ ಹಾಕಿದ್ದವರನ್ನ ಪೊಲೀಸರು ಬಂಧಿಸಿ ತರಾಟೆಗೆ ತೆಗದುಕೊಂಡಿದ್ರು. ಈ ಕೇಸ್ನ ಮೂವರು ಆರೋಪಿಗಳಿಗೆ ಇದೀಗ ಜಾಮೀನು (Bail) ಸಿಕ್ಕಿದೆ.
ತುಮಕೂರಿನ ಬಾರ್ ಮಾಲೀಕನಿಗೆ ಆರೋಪಿಗಳ ಪರ ಸಾಕ್ಷಿ ನುಡಿಯುವಂತೆ ಮತ್ತೋರ್ವ ಸಾಕ್ಷಿ ಹಾಗೂ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಕೆಲವರು ಬೆದರಿಕೆ ಹಾಕಿದ್ರು ಎನ್ನುವ ಆರೋಪವಿದೆ. ಈ ಕೇಸ್ನಲ್ಲಿ ಸುಹಾಸ್, ವೈಭವ್, ಪುನೀತ್ ಮೂವರನ್ನ ಪೊಲೀಸರು ಬಂಧಿಸಿದ್ರು.
ಸಾಕ್ಷಿದಾರರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಂಧಿಯಾಗಿದ್ದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ 59ನೇ CCH ಕೋರ್ಟ್ ನಿಂದ ಆದೇಶ ಹೊರಡಿಸಿದೆ. ಸುಹಾಸ್, ವೈಭವ್, ಪುನೀತ್ ಮೂವರಿಗೂ ಜಾಮೀನು ಸಿಕ್ಕಿದ್ದು, ಇಂದು ಅಥವಾ ನಾಳೆ ಜೈಲಿಂದ ಹೊರಗೆ ಬರಲಿದ್ದಾರೆ ಎನ್ನಲಾಗ್ತಿದೆ.
ಸಾಕ್ಷಿಗೆ ಬೆದರಿಕೆ ಸಂಬಂಧ ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ರು. ಘಟನೆ ಬಳಿಕ ಜಾಮೀನು ಕೋರಿ ಅರ್ಜಿ ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದರು ಇದೀಗ ಮೂವರು ಆರೋಪಿಗಳಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರೇಣುಕಾಸ್ವಾಮಿಯ ಕಿಡ್ನ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಸಾಕ್ಷಿಗಳ ವಿಚಾರಣೆ ನಡೆದಿದೆ. ಇತ್ತ ಬೆದರಿಕೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. FIRನಲ್ಲಿ ಉಲ್ಲೇಖವಾದ ಕಂಪ್ಲೀಟ್ ಮಾಹಿತಿ ಲಭ್ಯವಾಗಿತ್ತು, ಬೆದರಿಕೆ ಹಾಕಿದ್ದು, ಒಬ್ಬರಲ್ಲ ನಾಲ್ವರು ಅನ್ನೋ ವಿಚಾರ ಬಯಲಾಗಿತ್ತು.
ಸಿಸಿಟಿವಿ ಡಿವಿಆರ್ ಸೀಜ್ ಸಂಬಂಧ ಸಾಕ್ಷಿ ಸಂದೀಪ್ಗೆ ಸುಳ್ಳು ಹೇಳುವಂತೆ ಕೆಲವರು ಬೆದರಿಸಿದ ಆರೋಪ ಕೇಳಿ ಬಂದಿದೆ. 29/06/2026 ರಂದು ಸಾಕ್ಷಿ ನುಡಿಯಲು ಕೋರ್ಟ್ಗೆ ಬರುವಂತೆ ಎಎಸ್ಐ ನಟೇಶ್ ಅವರು ಸಂದೀಪ್ ಗೆ ಕರೆ ಮಾಡಿದ್ದರಂತೆ. ಬಳಿಕ ಕೆಲವರು ಸಂದೀಪ್ಗೆ ಆಮಿಷವೊಡ್ಡಿದ್ದಾರೆ ಎನ್ನುವ ಆರೋಪವಿದೆ.
ಮೊದಲಿಗೆ ಭೋವಿಪಾಳ್ಯದ ನಿವಾಸಿ ಆಕೃಷ್ ಎಂಬಾತನಿಂದ ಸಂದೀಪ್ ಅವ್ರಿಗೆ ಕರೆ ಬಂದಿದ್ದು. 25/06/2026 ರಂದು ಸಂಜೆ ಸುಮಾರು 18:30 ರ ವೇಳೆಗೆ ಆಕೃಷ್ ನಂಬರ್ ನಿಂದ ಕರೆ ಬಂದಿತ್ತಂತೆ. ಪದೇ ಪದೇ ಕರೆ ಬರ್ತಿದ್ದ ಹಿನ್ನಲೆ ಸಂದೀಪ್ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹೋಗಿ ಅವರನ್ನ ಭೇಟಿಯಾಗಿದ್ದರು ಎನ್ನಲಾಗ್ತಿದೆ.
ಬಿಳಿ ಬಣ್ಣದ ಹ್ಯುಂಡೈ ವೆರ್ನಾ (Hyundai Verna) ಕಾರಲ್ಲಿ ಬಂದು ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳಲು ತಿಳಿಸಿದ್ದಾರೆ.ಕಾರಿನ ಮುಂಭಾಗದ ಸೀಟಿನಲ್ಲಿ ಡ್ರೈವರ್ ಜೊತೆಗೆ ಓರ್ವ ವ್ಯಕ್ತಿ ಹಾಗೂ ಹಿಂಭಾಗದ ಸೀಟಿನಲ್ಲಿ ಮತ್ತೊಬ್ಬ ವ್ಯಕ್ತಿ ಕುಳಿತಿದ್ರು. ಆಗ ಸಂದೀಪ್ ಅವರನ್ನ ನ್ಯಾಯಾಲಯಕ್ಕೆ ಹೋಗಿದ್ದೀರಾ? ಏನು ಹೇಳಿದ್ದೀರಾ?” ಎಂದು ಓರ್ವ ಪ್ರಶ್ನಿಸಿದ್ದಾನೆ. ಬಳಿಕ ಸಂದೀಪ್ ಮೊಬೈಲ್ ಫೋನ್ ಕಸಿದುಕೊಂಡು, ಮಾತನಾಡಿದ್ರು. ಕಾರಿನಲ್ಲೇ ಫೋನ್ ಮಾಡಿ ಲೌಡ್ ಸ್ಪೀಕರ್ ಆನ್ ಮಾಡಿದ್ರು. ಬಳಿಕ ಆ ಕಡೆಯಿಂದ ವಾಟ್ಸಾಪ್ ಕರೆ ಮಾಡಲು ತಿಳಿಸಿದ್ರು ಎಂದು ಸಾಕ್ಷಿ ಹೇಳಿಕೆ ನೀಡಿದ್ರು.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)














