Recruitment: ನೀವು SSLC ಪಾಸ್‌ ಮಾಡಿದ್ದೀರಾ? ಈ ಕೌಶಲ್ಯ ನಿಮಗಿದೆಯಾ? ಕೇಂದ್ರ ಸರ್ಕಾರ ಮಾಡುತ್ತಿದೆ ನೇಮಕಾತಿ, 69000 ರೂಪಾಯಿವರೆಗೂ ಸಂಬಳ! | | ACTPnews

ನೇಮಕಾತಿ


Last Updated:

CRPF ಕಾನ್‌ಸ್ಟೆಬಲ್ ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ 9195 ಹುದ್ದೆಗಳಿಗೆ SSLC ITI ಅರ್ಹರಿಂದ ಅರ್ಜಿ ಆಹ್ವಾನ, ಆನ್‌ಲೈನ್ ಅರ್ಜಿ ಏಪ್ರಿಲ್ 20 ರಿಂದ ಮೇ 19 ರವರೆಗೆ, ವೇತನ 21700 ರಿಂದ 69100

ನೇಮಕಾತಿ
ನೇಮಕಾತಿ

ಬೆಂಗಳೂರು: ನೀವು 10ನೇ ತರಗತಿ ಪಾಸ್ (SSLC) ಆಗಿದ್ದೀರಾ? ITI ಸರ್ಟಿಫಿಕೇಟ್ ಇದೆಯಾ? ಹಾಗಾದರೆ ಈ ಸುದ್ದಿ ನಿಮ್ಮ ಜೀವನವನ್ನೇ ಬದಲಿಸಬಹುದು! ಭಾರತ ಸರ್ಕಾರದ (Central Government) ಅತ್ಯಂತ ಪ್ರತಿಷ್ಠಿತ ಸಂಸ್ಥೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಕಾನ್‌ಸ್ಟೆಬಲ್ (ಟೆಕ್ನಿಕಲ್ & ಟ್ರೇಡ್ಸ್‌ಮನ್) ವಿಭಾಗದಲ್ಲಿ 9,175 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಪಯೋನಿಯರ್ ವಿಭಾಗದ 20 ಹುದ್ದೆಗಳನ್ನು (Jobs) ಸೇರಿ ಒಟ್ಟು 9,195 ಹುದ್ದೆಗಳ ಭರ್ತಿ ನಡೆಯಲಿದೆ. ಈ ಪೈಕಿ ಪುರುಷ ಅಭ್ಯರ್ಥಿಗಳಿಗೆ 9,096 ಹುದ್ದೆಗಳು ಮತ್ತು ಮಹಿಳೆಯರಿಗೆ 79 ಹುದ್ದೆಗಳು ಮೀಸಲಾಗಿವೆ.

ನೇಮಕಾತಿಯಲ್ಲಿರುವ ಹುದ್ದೆಗಳ ವಿವರ

ಈ ನೇಮಕಾತಿಯಲ್ಲಿ ಹತ್ತಾರು ಬಗೆಯ ಟ್ರೇಡ್ ಹುದ್ದೆಗಳಿವೆ. ಕಾನ್‌ಸ್ಟೆಬಲ್ ಟ್ರೇಡ್ಸ್‌ಮನ್ ವಿಭಾಗದಲ್ಲಿ ಡ್ರೈವರ್, ಕುಕ್, ಗಾರ್ಡನರ್, ವಾಶರ್‌ಮನ್, ಕ್ಲೀನರ್, ಫಿಟ್ಟರ್, ಬಗ್ಲರ್, ಟೈಲರ್, ಕಾಬ್ಲರ್, ಪೇಂಟರ್, ಕಾರ್ಪೆಂಟರ್, ಹೇರ್ ಡ್ರೆಸ್ಸರ್, ಸಫಾಯಿ ಕರ್ಮಚಾರಿ ಮತ್ತು ಬ್ರಾಸ್ ಬ್ಯಾಂಡ್ ಸೇರಿದಂತೆ ಹಲವು ಟ್ರೇಡ್‌ಗಳಿವೆ. ಪಯೋನಿಯರ್ ವಿಭಾಗದಲ್ಲಿ ಎಲೆಕ್ಟ್ರಿಷಿಯನ್, ಮೋಟಾರ್ ಮೆಕಾನಿಕ್ ಮತ್ತು ಪ್ಲಂಬರ್ ಹುದ್ದೆಗಳಿವೆ. ಇಷ್ಟೊಂದು ವೈವಿಧ್ಯಮಯ ಟ್ರೇಡ್‌ಗಳಿರುವ ಕಾರಣ, ನಿಮ್ಮ ಕೌಶಲ್ಯಕ್ಕೆ ತಕ್ಕ ಹುದ್ದೆ ಇಲ್ಲಿ ಖಂಡಿತ ಸಿಗುತ್ತದೆ!

ವಯೋಮಿತಿಯ ವಿಷಯ ಇಲ್ಲಿದೆ

ಅರ್ಹತೆಯ ವಿಷಯದಲ್ಲಿ ಯಾವುದೇ ತಲೆನೋವಿಲ್ಲ. SSLC ಅಥವಾ 10ನೇ ತರಗತಿ ಪಾಸ್ ಜೊತೆಗೆ ಸಂಬಂಧಿತ ಟ್ರೇಡ್ ಪ್ರಮಾಣಪತ್ರ ಅಥವಾ ITI ಅರ್ಹತೆ ಹೊಂದಿದ್ದರೆ ಸಾಕು. ವಯೋಮಿತಿಯ ವಿಚಾರಕ್ಕೆ ಬಂದರೆ, ಹೆಚ್ಚಿನ ಎಲ್ಲ ಟ್ರೇಡ್ ಹುದ್ದೆಗಳಿಗೆ 18 ರಿಂದ 23 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ ಡ್ರೈವರ್ ಹುದ್ದೆಗೆ 21 ರಿಂದ 27 ವರ್ಷ ವಯೋಮಿತಿ ಅನ್ವಯಿಸುತ್ತದೆ. SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋ ಸಡಿಲಿಕೆ ಇದ್ದೇ ಇದೆ.

ಶುಲ್ಕದ ವಿವರ

ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳು ಕೇವಲ ₹100 ಶುಲ್ಕ ಕಟ್ಟಿದರೆ ಸಾಕು. SC/ST ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಏಪ್ರಿಲ್ 20ರಿಂದ ಆರಂಭವಾಗಿದ್ದು, ಮೇ 19 ಕೊನೆಯ ದಿನ. ಅರ್ಜಿ ಸಲ್ಲಿಕೆ ಅಧಿಕೃತ CRPF Recruitment Portal ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.
ಯಾವುದೇ ಕಾರಣಕ್ಕೂ ತಪ್ಪು ಮಾಡಬೇಡಿ!

ಇನ್ನು ಆಯ್ಕೆ ಪ್ರಕ್ರಿಯೆ ಒಂದೇ ಹಂತದಲ್ಲಿ ಮುಗಿಯದು, ಐದು ಹಂತಗಳ ಕಠಿಣ ಪ್ರಕ್ರಿಯೆ ಇದೆ. ಮೊದಲು PET/PST ಅಂದರೆ ದೈಹಿಕ ಸಾಮರ್ಥ್ಯ ಮತ್ತು ದೈಹಿಕ ಮಾನದಂಡ ಪರೀಕ್ಷೆ ನಡೆಯುತ್ತದೆ. ನಂತರ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಇದ್ದು, ಇದರಲ್ಲಿ 100 ಪ್ರಶ್ನೆಗಳಿಗೆ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತಿ 4 ತಪ್ಪು ಉತ್ತರಗಳಿಗೆ 1 ಅಂಕ ನೆಗೆಟಿವ್ ಮಾರ್ಕಿಂಗ್ ಇರುವ ಕಾರಣ ಉಡಾಫೆಯಿಂದ ಉತ್ತರಿಸಿದರೆ ಅಂಕ ಕಡಿಮೆಯಾಗುತ್ತದೆ, ಎಚ್ಚರ! ಬಳಿಕ ಟ್ರೇಡ್/ಸ್ಕಿಲ್ ಟೆಸ್ಟ್, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಆಗಸ್ಟ್ ಅಥವಾ ಸೆಪ್ಟೆಂಬರ್ 2026ರಲ್ಲಿ ನಡೆಯುವ ನಿರೀಕ್ಷೆ ಇದೆ.

69,100 ರೂಪಾಯಿವರೆಗೆ ಸಿಗುತ್ತೆ ಸಂಬಳ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed