Recruitment: ಆಯಿಲ್ ಇಂಡಿಯಾದಲ್ಲಿ ಬೃಹತ್ ಉದ್ಯೋಗಾವಕಾಶ, ಈ ಹುದ್ದೆಗೆ ನೇರ ಸಂದರ್ಶನ! | ಉದ್ಯೋಗ ಸುದ್ದಿ | ACTPnews

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ


Last Updated:

ಆಯಿಲ್ ಇಂಡಿಯಾ ಲಿಮಿಟೆಡ್, ಅಸ್ಸಾಂನಲ್ಲಿ ಪ್ಯಾರಾಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ನೇರ ಸಂದರ್ಶನ. 2 ಹುದ್ದೆಗಳಿಗೆ ರೂ. 21,450 ವೇತನ. ಸಂದರ್ಶನ: ಜುಲೈ 31, 2026.

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ
ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ

ಅಸ್ಸಾಂ: ದೇಶದ ಹೆಮ್ಮೆಯ ಮಹಾರತ್ನ ಕಂಪನಿಗಳಲ್ಲಿ ಒಂದಾದ ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited) ಸಂಸ್ಥೆಯಲ್ಲಿ ಉದ್ಯೋಗ (Job) ಹುಡುಕುತ್ತಿರುವ ಯುವ ಜನತೆಗೆ ಸುವರ್ಣ ಅವಕಾಶವೊಂದು ಎದುರಾಗಿದೆ. ಅಸ್ಸಾಂನ (Assam) ದುಲಿಯಾಜನ್‌ನಲ್ಲಿರುವ ಆಯಿಲ್ ಇಂಡಿಯಾ ಆಸ್ಪತ್ರೆಯಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿಯನ್ (Paramedical Laboratory Technician) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ದೀರ್ಘವಾದ ಆನ್‌ಲೈನ್ ಅರ್ಜಿ ಪ್ರಕ್ರಿಯೆಯಿಲ್ಲದೆ, ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಿ ಸರ್ಕಾರಿ ಸ್ವಾಮ್ಯದ ಈ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ಇದೊಂದು ಸುಸಮಯವಾಗಿದೆ.

ಹುದ್ದೆಯ ವಿವರಗಳು ಹಾಗೂ ಇತರೆ ಮಾಹಿತಿ

ಸಂಸ್ಥೆಯ ಹೆಸರು: ಆಯಿಲ್ ಇಂಡಿಯಾ ಲಿಮಿಟೆಡ್

ಹುದ್ದೆಯ ಹೆಸರು: ಪ್ಯಾರಾಮೆಡಿಕಲ್ ಲ್ಯಾಬೊರೇಟರಿ ಟೆಕ್ನೀಷಿಯನ್

ಖಾಲಿ ಹುದ್ದೆಗಳ ಸಂಖ್ಯೆ: 02

ಕೆಲಸದ ಸ್ಥಳ: ದುಲಿಯಾಜನ್ – ಅಸ್ಸಾಂ

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಬರೋಬ್ಬರಿ ರೂ. 21,450/- ವೇತನ ಸಿಗಲಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‍ನಿಂದ 12ನೇ ತರಗತಿ ಹಾಗೂ MLT ಅಥವಾ DMLT ಕೋರ್ಸ್ ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು ಎಂದು karnatakacareers.org ವರದಿ ಮಾಡಿದೆ.

ವಯೋಮಿತಿ: ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 40 ವರ್ಷಗಳವರೆಗೆ ಇರಬೇಕು. ಸರ್ಕಾರದ ನಿಯಮಾನುಸಾರ OBC (NCL) ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ನೇರ ಸಂದರ್ಶನ ವಿವರಗಳು

ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರ ಸಂದರ್ಶನದ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಂದರ್ಶನದ ದಿನಾಂಕ: 31 ಜುಲೈ 2026

ಸಂದರ್ಶನ ನಡೆಯುವ ಸ್ಥಳ: ಆಕ್ಯುಪೇಷನಲ್ ಹೆಲ್ತ್ ಸೆಂಟರ್, ಔIಐ ಆಸ್ಪತ್ರೆ, ಆಯಿಲ್ ಇಂಡಿಯಾ ಲಿಮಿಟೆಡ್, ದುಲಿಯಾಜನ್, ಅಸ್ಸಾಂ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed