RCB vs GT: ಆರ್​​ಸಿಬಿ ಸಮಸ್ಯೆ ಅದೊಂದೇ! ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಬೆಂಗಳೂರು ತಂಡದ ದೊಡ್ಡ ನ್ಯೂನತೆ ತಿಳಿಸಿದ ಭಾರತದ ಮಾಜಿ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews

ರಾಯಲ್ ಚಾಲೆಂಜರ್ಸ್ ಬೆಂಗಳೂರು


Last Updated:

ಇಂದು ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಆರ್​​ಸಿಬಿ ತಂಡದ ದೊಡ್ಡ ನ್ಯೂನತೆಯನ್ನು ಭಾರತದ ಮಾಜಿ ಕ್ರಿಕೆಟರ್ ತಿಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

ಶ್ರೀಮಂತ (Rich) ಕ್ರಿಕೆಟ್ (Cricket) ಹಬ್ಬವು ಅಂತಿಮ ಹಂತವನ್ನು ತಲುಪುತ್ತಿದ್ದಂತೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಲೀಗ್ ಹಂತದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು (Teams) ಈಗ ಟ್ರೋಫಿಯಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿವೆ. ಇಂದು ನಡೆಯಲಿರುವ ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಫೈನಲ್‌ (Final) ಗೆ ಅರ್ಹತೆ ಪಡೆದರೆ, ಸೋತ ತಂಡವು ನಿರಾಶೆಗೊಳ್ಳಬೇಕಾಗಿಲ್ಲ. ಏಕೆಂದರೆ ಕ್ವಾಲಿಫೈಯರ್ (Qualifier) -2 ರೂಪದಲ್ಲಿ ಫೈನಲ್ ತಲುಪಲು ಆ ತಂಡಕ್ಕೆ ಮತ್ತೊಂದು ಸುವರ್ಣಾವಕಾಶ ಸಿಗಲಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಫೈನಲ್ ತಲುಪುವ ನಿರೀಕ್ಷೆಯಲ್ಲಿದೆ. ಇದಕ್ಕೂ ಮುನ್ನ ಆರ್​​ಸಿಬಿ ತಂಡದ ದೊಡ್ಡ ನ್ಯೂನತೆಯನ್ನು ಭಾರತದ ಮಾಜಿ ಕ್ರಿಕೆಟರ್ ತಿಳಿಸಿದ್ದಾರೆ. ಇದು ಅಭಿಮಾನಿಗಳನ್ನು ಚಿಂತಿಸುವಂತೆ ಮಾಡಿದೆ.

ಆರ್​​ಸಿಬಿ ತಂತ್ರ- ಓಪನಿಂಗ್ ಸಸ್ಪೆನ್ಸ್​!

ಆರ್​ಸಿಬಿ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿ ಕಾಣುತ್ತಿದೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಆದಾಗ್ಯೂ, ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ಬ್ಯಾಟರ್ ಫಿಲ್ ಸಾಲ್ಟ್ ತಂಡಕ್ಕೆ ಬರಲು ಸಿದ್ಧರಾಗಿದ್ದಾರೆ. ಈಗ ಅವರನ್ನು ನೇರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕೆ ತರಲಾಗುತ್ತದೆಯೇ ಅಥವಾ ಹಿಂದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವೆಂಕಟೇಶ್ ಅಯ್ಯರ್ ಮುಂದುವರಿಯುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: Virat Kohli-Travis Head: ಕೊಹ್ಲಿ ಜೊತೆ ಹ್ಯಾಂಡ್ ಶೇಕ್ ವಿವಾದ! ಟ್ರಾವಿಸ್ ಹೆಡ್ ಪತ್ನಿಯನ್ನು ಟ್ರೋಲ್ ಮಾಡಿದ್ದೇಕೆ ಫ್ಯಾನ್ಸ್?

ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಮಿಂಚುತ್ತಿದ್ದರೆ, ಜಿತೇಶ್ ಶರ್ಮಾ, ಟೀಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಫಿನಿಷರ್​ಗಳಾಗಿ ಮ್ಯಾಚ್ ಮುಗಿಸಲು ಸಿದ್ಧರಾಗಿದ್ದಾರೆ. ಬೌಲಿಂಗ್​ನಲ್ಲಿ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್​ವುಡ್ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಇದರ ನಡುವೆ ಆರ್​​ಸಿಬಿಯ ಏಕೈಕ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿದ್ದಾರೆ.

ಆರ್​​ಸಿಬಿ ತಂಡದ ಸಮಸ್ಯೆ ಏನು?

ಆರ್​ಸಿಬಿ ತಂಡದ ಏಕೈಕ ಸಮಸ್ಯೆಯನ್ನು ಹೈಲೈಟ್ ಮಾಡಿರುವ ಅಂಬಾಟಿ ರಾಯುಡು ಎಲ್ಲರ ಗಮನ ಸೆಳೆದಿದ್ದಾರೆ. ಆರ್​ಸಿಬಿಯ ಒಂದು ಸಮಸ್ಯೆ ಏನೆಂದರೆ, ಕೆಲವು ಪಂದ್ಯಗಳಲ್ಲಿ ಮಿಡಲ್ ಓವರ್​​ಗಳಲ್ಲಿ ಬೌಲಿಂಗ್ ಅಷ್ಟೊಂದು ಉತ್ತಮವಾಗಿಲ್ಲ. ಸ್ಪಿನ್ನರ್ ಸುಯಾಶ್ ಶರ್ಮಾ ಅಷ್ಟಾಗಿ ಫಾರ್ಮ್​ನಲ್ಲಿ ಇಲ್ಲ. ಮತ್ತೊಂದೆಡೆ ರೊಮರಿಯೋ ಶೆಫಾರ್ಡ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಇದರ ಹೊರೆತಾಗಿ ಆರ್​ಸಿಬಿ ಬ್ಯಾಟಿಂಗ್ ವಿಭಾಗ ಗುಜರಾತ್ ತಂಡಕ್ಕಿಂತ ಬಹಳ ಚೆನ್ನಾಗಿದೆ ಎಂದು ರಾಯುಡು ಹೇಳಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

RCB vs GT: ಆರ್​​ಸಿಬಿ ಸಮಸ್ಯೆ ಅದೊಂದೇ! ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಬೆಂಗಳೂರು ತಂಡದ ದೊಡ್ಡ ನ್ಯೂನತೆ ತಿಳಿಸಿದ ಭಾರತದ ಮಾಜಿ ಕ್ರಿಕೆಟರ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports