RCB vs GT Final: ಫ್ಯಾನ್ಸ್ಗೆ ಭಯ ಹುಟ್ಟಿಸಿದ ‘ಪಾಂಡ್ಯ’ ಸೆಂಟಿಮೆಂಟ್; ಫೋಟೋ ನೋಡಿ ಕಪ್ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್! | ಕ್ರೀಡಾ ಸುದ್ದಿ | ACTPnews

ಕ್ಯಾಪ್ಟನ್ ಗಳ ಫೋಟೋ ಶೂಟ್​​ (ಸಂಗ್ರಹ ಚಿತ್ರ)


Last Updated:

ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಮುಖಾಮುಖಿ, ಹಾರ್ದಿಕ್ ಪಾಂಡ್ಯ ಜೊತೆ ಫೋಟೋಶೂಟ್ ಸೆಂಟಿಮೆಂಟ್ ನಿಂದ ಗುಜರಾತ್ ಗೆಲುವು ಚರ್ಚೆ

ಕ್ಯಾಪ್ಟನ್ ಗಳ ಫೋಟೋ ಶೂಟ್​​ (ಸಂಗ್ರಹ ಚಿತ್ರ)
ಕ್ಯಾಪ್ಟನ್ ಗಳ ಫೋಟೋ ಶೂಟ್​​ (ಸಂಗ್ರಹ ಚಿತ್ರ)

ಐಪಿಎಲ್ 2026 ಆವೃತ್ತಿ ರೋಚಕವಾಗಿ (IPL 2026 Final) ಮುಕ್ತಾಯವಾಗುತ್ತಿದೆ. ಇಂದು ರಾತ್ರಿ 7:30ಕ್ಕೆ ಅಹಮದಾಬಾದ್ ನಗರದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಡಿಫೆಂಡಿಂಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ನಡುವೆ ಫೈನಲ್ (RCB vs GT) ಪಂದ್ಯ ನಡೆಯಲಿದೆ. ಆದರೆ ಈ ಮಹಾ ಸಂಗ್ರಾಮದ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಸಂಬಂಧಿಸಿದ ಒಂದು ವಿಶೇಷ ಟ್ರೋಫಿ ಸೆಂಟಿಮೆಂಟ್ ಫೋಟೋ ಸಖತ್ ವೈರಲ್ ಆಗುತ್ತಿದೆ.

ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ಆರ್​ಸಿಬಿ ನೇರವಾಗಿ ಫೈನಲ್ ಗೆ ಎಂಟ್ರಿಕೊಟ್ಟಿತ್ತು. ಮತ್ತೊಂದು ಕಡೆ ಕ್ವಾಲಿಫೈಯರ್ 2 ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ಟೈಟಲ್ ಫೈಟ್​ಗಾಗಿ ಫೈನಲ್​ಗೆ ಬಂದಿದೆ. ಭಾನುವಾರ ರಾತ್ರಿ ಈ ಮ್ಯಾಚ್ ನಡೆಯಲಿದ್ದು, ಆದರೆ ಫೈನಲ್ ಮ್ಯಾಚ್ ಮುನ್ನ ಹಾರ್ದಿಕ್ ಪಾಂಡ್ಯ ಸೆಂಟಿಮೆಂಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಜೋರು ಚರ್ಚೆ ನಡೆಯುತ್ತಿದ್ದು, ಈ ಸೆಂಟಿಮೆಂಟ್ ಅನ್ವಯ, ಗುಜರಾತ್ ಅಭಿಮಾನಿಗಳು ಟೈಟಲ್ ನಮ್ದೆ ಅಂತಿದ್ದಾರೆ. ಅಷ್ಟಕ್ಕೂ ಆ ಸೆಂಟಿಮೆಂಟ್ ಏನಪ್ಪಾ? ಸಡನ್ ಆಗಿ ಯಾಕೆ ಇದು ಚರ್ಚೆಗೆ ಬಂತು? ಅಂತ ಹೇಳ್ತೀವಿ ಕೇಳಿ.

ಐಪಿಎಲ್ ಆರಂಭಕ್ಕೂ ಮುನ್ನ ಪ್ರತಿಯೊಂದು ಆವೃತ್ತಿಯ ಆರಂಭದಲ್ಲಿ ಎಲ್ಲಾ ತಂಡಗಳ ನಾಯಕರೊಂದಿಗೆ ಫೋಟೋಶೂಟ್ ನಡೆಯುತ್ತದೆ. ಕಳೆದ 19 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ವೇಳೆ ಟ್ರೋಫಿಯೊಂದಿಗೆ ಕ್ಯಾಪ್ಟನ್ ಗಳು ಪೋಸ್ ನೀಡುತ್ತಾರೆ. ಆದರೆ ಈ ಫೋಟೋ ಶೂಟ್ ನಲ್ಲಿ 2023, 2024 ಮತ್ತು 2025ರ ಆವೃತ್ತಿಗಳಲ್ಲಿ ಹಾರ್ದಿಕ್ ಪಾಂಡ್ಯ ಪಕ್ಕ ಇರುವ ನಾಯಕರೇ ಕಪ್ ಗೆದ್ದು ಬೀಗಿದ್ದಾರೆ. ಈ ಆವೃತ್ತಿಯ ಆರಂಭದಲ್ಲೂ ಗುಜರಾತ್ ಟೈಟಾನ್ಸ್ ನಾಯಕ ಶುಭ್ ಮನ್ ಗಿಲ್, ಹಾರ್ದಿಕ್ ಪಾಂಡ್ಯ ಪಕ್ಕ ನಿಂತಿದ್ದಾರೆ. ಇದರಂತೆ ಗುಜರಾತ್ ತಂಡಕ್ಕೆ ಗೆಲುವು ಫಿಕ್ಸ್ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ.

ಐಪಿಎಲ್ 2023ರಲ್ಲಿ ಸಿಎಸ್​ಕೆ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಆ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಆಗ ಫೋಟೋ ಶೂಟ್ ನಲ್ಲಿ ಸಿಎಸ್ಕೆ ನಾಯಕ ಧೋನಿ, ಹಾರ್ದಿಕ್ ಪಕ್ಕದಲ್ಲಿ ನಿಂತಿದ್ದರು.

ಐಪಿಎಲ್ 2024ರಲ್ಲಿ ಕೆಕೆಆರ್: 2024ರ ಆವೃತ್ತಿಯಲ್ಲಿ ಮುಂಬೈ ತಂಡಕ್ಕೆ ಬಂದಿದ್ದ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ಫೋಟೋ ಶೂಟ್ ವೇಳೆ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ನಿಂತು ಪೋಸ್ ಕೊಟ್ಟಿದ್ದರು. ಈ ಆವೃತ್ತಿಯಲ್ಲಿ ಕೆಕೆಆರ್ ಕಪ್ ಗೆದ್ದಿತ್ತು.

ಐಪಿಎಲ್ 2025ರ ಆವೃತ್ತಿಯಲ್ಲಿ ಆರ್​ಸಿಬಿ: ಬೆಂಗಳೂರು ತಂಡ 18 ವರ್ಷಗಳ ಬಳಿಕ ಕಳೆದ ಆವೃತ್ತಿಯಲ್ಲಿ ಕಪ್ ಗೆದ್ದಿತ್ತು. ಆಗ ಆರ್ಸಿಬಿ ನಾಯಕ ಪಟಿದಾರ್, ಪಾಂಡ್ಯ ಪಕ್ಕ ನಿಂತಿದ್ದರು. ಇದರಂತೆ ಈ ಬಾರಿ ಗುಜರಾತ್ ಕಪ್ ಗೆಲ್ಲಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed