RCB vs GT: ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್! ಸಾಲ್ಟ್​ ಇಲ್ಲದೆ ಆರ್​ಸಿಬಿ ಕಣಕ್ಕೆ | ಕ್ರೀಡಾ ಸುದ್ದಿ | ACTPnews

ಆರ್​ಸಿಬಿ vs ಜಿಟಿ


Last Updated:

ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್​ ಗೆದ್ದ ಜಿಟಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಗೆದ್ದ ತಂಡ ಫೈನಲ್​ಗೆ ಟಿಕೆಟ್ ಪಡೆಯಲಿದೆ. ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ.

ಆರ್​ಸಿಬಿ vs ಜಿಟಿ
ಆರ್​ಸಿಬಿ vs ಜಿಟಿ

IPL 2026 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮಂಗಳವಾರ ಮುಖಾಮುಖಿಯಾಗಿವೆ. ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್ ಟೈಟನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಗೆದ್ದ ತಂಡ ಫೈನಲ್​ಗೆ ಟಿಕೆಟ್ ಪಡೆಯಲಿದೆ. ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ. ಬೆಂಗಳೂರು ಮತ್ತು ಗುಜರಾತ್ ತಲಾ 18 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಿದ್ದವು. ಆದರೆ, ಹಾಲಿ ಚಾಂಪಿಯನ್ ಆರ್ ಸಿಬಿ ಉತ್ತಮ ನೆಟ್​ ರನ್ ರೇಟ್ ನಿಂದಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, ಜಿಟಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳು ಮೂರನೇ ಬಾರಿಗೆ ಮುಖಾಮುಖಿಯಾಗಲಿವೆ. ಏಪ್ರಿಲ್ 24 ರಂದು ಬೆಂಗಳೂರಿನಲ್ಲಿ ಆರ್ಸಿಬಿ ಜಿಟಿಯನ್ನು ಐದು ವಿಕೆಟ್ ಗಳಿಂದ ಸೋಲಿಸಿತ್ತು. ಏಪ್ರಿಲ್ 30 ರಂದು ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಜಿಟಿ ನಾಲ್ಕು ವಿಕೆಟ್​ಗಳಿಂದ ಆರ್​ಸಿಬಿ ಮಣಿಸಿ ಸೇಡು ತೀರಿಸಿಕೊಂಡಿತ್ತು.

ಆರ್ಸಿಬಿ ನೇರವಾಗಿ ಫೈನಲ್ ಪ್ರವೇಶಿಸಬೇಕಾದರೆ ಗುಜರಾತ್​​ನ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಎದುರಿಸಬೇಕಾಗುತ್ತದೆ. ಜಿಟಿಯ ವೇಗದ ಬೌಲಿಂಗ್ ಅದ್ಭುತವಾಗಿದ್ದು, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಜೇಸನ್ ಹೋಲ್ಡರ್​​ ಮತ್ತು ಪ್ರಸಿದ್ಧ್ ಕೃಷ್ಣ ಅವರ ಸಂಯೋಜನೆಯಲ್ಲಿ ಕರಾರುವಾಕ್ ಆಗಿದೆ. ಸ್ಪಿನ್ನರ್ ರಶೀದ್ ಖಾನ್ ಮಧ್ಯಮ ಓವರ್ ಗಳಲ್ಲಿ ಅದ್ಭುತ ನಿಯಂತ್ರಣವನ್ನು ಕಾಯ್ದುಕೊಂಡಿದ್ದಾರೆ. ನಾಯಕ ಶುಭ್​ಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಗುಜರಾತ್ ಬ್ಯಾಟಿಂಗ್​ನ ಬಲವಾಗಿವೆ.

ತಂಡಗಳಲ್ಲಿ ಬದಲಾವಣೆ

ಈ ಪಂದ್ಯದಲ್ಲಿ ಆರ್​ಸಿಬಿ ಎರಡು ಬದಲಾವಣೆ ಮಾಡಿಕೊಂಡಿದೆ. ಟಿಮ್ ಡೇವಿಡ್ ಹಾಗೂ ಡಫಿ ಪ್ಲೇಯಿಂಗ್ ಇಲೆವೆನ್​ಗೆ ಮರಳಿದ್ದಾರೆ, ರೊಮ್ಯಾರಿಯೋ ಶೆಫರ್ಡ್​ ಹಾಗೂ ಸುಯಾಶ್ ಶರ್ಮಾ ಹೊರಗುಳಿದಿದ್ದಾರೆ.

ಗುಜರಾತ್ ಕೂಡ ಎರಡೂ ಬದಲಾವಣೆ ಮಾಡಿಕೊಂಡಿದೆ. ಕುಲ್ವಂತ್ ಖೆಜ್ರೋಲಿಯಾ ಹಾಗೂ ಪ್ರಸಿದ್ಧ ಕೃಷ್ಣ ಇಲೆವೆನ್​ಗೆ ಮರಳಿದ್ದಾರೆ. ಅರ್ಷದ್ ಖಾನ್ ಹಾಗೂ ರಾಹುಲ್ ತೆವಾಟಿಯಾ ಹೊರಗುಳಿದಿದ್ದಾರೆ.

ಹೆಡ್​ ಟು ಹೆಡ್​ ದಾಖಲೆ

ಇಲ್ಲಿಯವರೆಗೆ ಎರಡೂ ತಂಡಗಳು 8 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 4ರಲ್ಲಿ ಗೆಲುವು ಸಾಧಿಸಿವೆ. ಈ ವರ್ಷ ನಡೆದಿರುವ 2 ಪಂದ್ಯಗಳಲ್ಲೂ ತಲಾ ಒಂದರಲ್ಲಿ ಗೆಲುವು ಸಾಧಿಸಿವೆ.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI: ಶುಭಮನ್ ಗಿಲ್ (ನಾಯಕ), ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೀ), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಕುಲ್ವಂತ್ ಖೆಜ್ರೋಲಿಯಾ, ಪ್ರಸಿದ್ಧ್ ಕೃಷ್ಣ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ (ವಿಕೀ), ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಂ, ಜೇಕಬ್ ಡಫಿ

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

RCB vs GT: ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್! ಸಾಲ್ಟ್​ ಇಲ್ಲದೆ ಆರ್​ಸಿಬಿ ಕಣಕ್ಕೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed