ವಿಡಿಯೋ ಅಲ್ಲ ಆಡಿಯೋ
ಆದರೆ, ಇದನ್ನ ಆರಂಭದಲ್ಲಿ ಕೇಳಿದರೆ ಸಡನ್ ಆಗಿ ಇಷ್ಟ ಆಗುವುದಿಲ್ಲ. ಕೇಳ್ತಾ ಹೋದಂತೆ ಎಳೆಯುತ್ತಲೇ ಹೋಗುತ್ತದೆ. ಈ ಹಾಡನ್ನ ಲಿರಿಕ್ಸ್ ಜೊತೆಗೆ ಕೇಳಿದರೆ ಇನ್ನೂ ಚೆನ್ನಾಗಿರುತ್ತದೆ ನೋಡಿ.
ಕ್ರೇಜಿ ಪಯಣ ಹಾಡಿನ ಆಡಿಯೋ ಯುಟ್ಯೂಬ್ ಅಲ್ಲಿ ಶೇರ್ ಆಗಿದೆ. ರವಿಚಂದ್ರನ್ ಅವರ ಮ್ಯಾಜಿಕಲ್ ಮ್ಯೂಸಿಕಲ್ ಮಿರಾಕಲ್ ಯುಟ್ಯೂಬ್ ಚಾನೆಲ್ ಅಲ್ಲಿಯೇ ಈ ಒಂದು ಹಾಡನ್ನ ಅಪ್‌ಲೋಡ್ ಮಾಡಿದ್ದಾರೆ.
ಇದರ ರಿಸ್ಕ್ರಿಪ್ಷನ್ ಅಲ್ಲಿಯೇ ಇಡೀ ಹಾಡಿನ ಲಿರಿಕ್ಸ್ ಇದೆ. ಇದರಲ್ಲಿಯ ಕೆಲುವ ಸಾಲುಗಳು ಗಮನ ಸೆಳೆಯುವಂತೆ ಇವೆ. ಅವು ಇಲ್ಲಿವೆ ಓದಿ..
ರಾಮಾಯಣ…
ಮಹಾಭಾರತ ಇಲ್ಲದೆ…
ಯಾವಾ ಪ್ರಯಾಣನು ಮುಗಿಯೋದಿಲ್ಲ…
ಅಪ್ಪನ ನಂಬಿಕೆ…
ಅಮ್ಮನ ಪ್ರೀತಿ…
ಈ ಪ್ರಯಾಣಕೆ ಉಸಿರು ಅವರೇ…
ಅಂದು ಪ್ರೇಮಲೋಕ…
ಈ ಸಾಲುಗಳ ಈ ರೀತಿ ಇದ್ದರೆ, ಮುಂದಿನ ಸಾಲು ಕ್ರೇಜಿ ಸ್ಟಾರ್ ಜೀವನದ ಕತೆ ಹೇಳುತ್ತವೆ. ಅದು ಅಷ್ಟೆ ಗಮನ ಸೆಳೆಯುತ್ತವೆ.
ಕ್ರೇಜಿ ಸ್ಟಾರ್ ಜನ್ಮ ದಿನಕ್ಕೆ ಕ್ರೇಜಿ ಪಯಣ ರಿಲೀಸ್
ಅಪ್ಪನ ಅಪ್ಪುಗೆ…
ಅಮ್ಮನ ಆಸೆ…
ಆ ಈಶ್ವರಿಯ ಕೃಪೆ…
ಶುರು ಆಗಿದ್ದು ಇವರಿಂದ…
ಏಕಾಂಗಿ ಆಗಿದ್ದು ಇವರಿಂದ…
ಈ ಜೀವನ ವಿಪರ್ಯಾಸ…
ಹೆತ್ತವರನ್ನ…
ನಾವೇ ಎತ್ತಾಕಬೇಕು…
ಈ ಜೀವನ…
ಒಂದೇ ಸಾಲಲ್ಲಿ…
ಕಲಿಬೇಕು…
ಕಳಿಬೇಕು…
ಜೀವನದ ಈ ಸತ್ಯಗಳನ್ನ ರವಿಚಂದ್ರನ್ ಅವರು ತಮ್ಮದೇ ಶೈಲಿಯಲ್ಲಿಯೇ ಇಲ್ಲಿ ಹೇಳಿದ್ದಾರೆ. ಮ್ಯೂಸಿಕಲ್ ಮ್ಯಾಜಿಕಲ್ ಹಾಗೂ ಮಿರಾಕಲ್ ಅನ್ನುವ ಹಾಗೇನೆ ಈ ಒಂದು ಹಾಡು ಮಾಡಿದ್ದಾರೆ.
ಆದರೆ, ಈಗ ಬಿಟ್ಟಿರೋ ಈ ಹಾಡು ವಿಡಿಯೋ ಅಲ್ಲ. ಆಡಿಯೋ ಮಾತ್ರ ಆಗಿದೆ. ಈ ಆಡಿಯೋಗೆ ರವಿಚಂದ್ರನ್ ಅವರ ಒಂದೇ ಒಂದು ಫೋಟೋ ಇದೆ. ಅದು ಎಐ ಕ್ರಿಯೇಟೆಡ್ ಅನಿಸುತ್ತದೆ. ಇದು ಅಷ್ಟೆ ಆಕರ್ಷಕವಾಗಿಯೇ ಇದೆ.
ರವಿಚಂದ್ರನ್ ಅವರ ಎಂದಿನ ಲಾಂಗ್ ಹೇರ್ ಲುಕ್ ಇಲ್ಲೂ ಇದೆ. ಕುರ್ತಾ ಮತ್ತು ಧೋತಿನೂ ಇದೆ. ಡೋಲ್ ಬಡೀತಿರೋದು ಗಮನ ಸೆಳೆಯುತ್ತದೆ. ಒಟ್ಟಾರೆ, ಈ ಒಂದು ಸ್ಪೆಷಲ್ ಸಾಂಗ್ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜನ್ಮ ದಿನದಂದು ರಿಲೀಸ್ ಆಗಿದೆ. ಎಲ್ಲರಿಗೂ ಇಷ್ಟ ಆಗುವ ರೀತಿನೇ ಇದೆ ಅಂತಲೇ ಹೇಳಬಹುದು.












