Ravichandran Birthday: ಕ್ರೇಜಿ ಸ್ಟಾರ್‌ಗೆ 65; ಈ ವರ್ಷ ಒಪ್ಪಿರೋ ಸಿನಿಮಾಗಳೆಷ್ಟು? | | ACTPnews

Crazy Star Ravichandran Upcoming Movie Details


ರವಿಚಂದ್ರನ್ ಪ್ಯಾರ್ ಸಿನಿಮಾ

ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಜೋಡಿ ಯಾರೂ ಇಲ್ಲ. ಇವರು ಇಲ್ಲಿ ತಂದೆಯ ಪಾತ್ರ ಮಾಡಿದ್ದಾರೆ. ಅಪ್ಪ ಮತ್ತು ಮಗಳ ಬಾಂಧವ್ಯದ ಕತೆಯ ಚಿತ್ರ ಇದಾಗಿದೆ.
“ದಿ ಕ್ರೇಜಿ” ಸ್ಟಾರ್ ಸಿನಿಮಾ

(ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್‌ಸ್ಟಾಗ್ರಾಮ್)

ಇದರಲ್ಲಿ ರವಿಚಂದ್ರನ್ ಪ್ರೀತಿಯ ಪಾಠವನ್ನು ಮಾಡುತ್ತಾರೆ. ಆದರೆ, ಇಲ್ಲಿ ಪ್ರೀತಿಯ ಪರಿ ಬೇರೆ ಇದೆ. ಹಾಗೆ ಭರತ್ ಮತ್ತು ರಾಶಿಕಾ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ರವಿಚಂದ್ರನ್ ಇಡೀ ಚಿತ್ರದಲ್ಲಿ ತಮ್ಮದೇ ಒಂದು ಸೆಳೆತವನ್ನ ಕ್ರಿಯೇಟ್ ಮಾಡುತ್ತಿದ್ದಾರೆ.

ಡೈರೆಕ್ಟರ್ ಯಾರು

ರವಿಚಂದ್ರನ್ ಅವರು ಅಭಿನಯಿಸಿರೋ ಈ ಚಿತ್ರವನ್ನ ಎಸ್.ಸುಪ್ರೀತ್ ಡೈರೆಕ್ಷನ್ ಮಾಡಿದ್ದಾರೆ. ಪಳನಿ ಡಿ.ಸೇನಾಪತಿ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ.

ಕನ್ನಡದ ಹಿರಿಯ ನಟ ಶ್ರೀನಿವಾಸಮೂರ್ತಿ, ಶಂಕರ್ ಅಶ್ವಥ್, ವಿಜಯ್ ಸೂರ್ಯ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿದ್ದಾರೆ. ಇದು ಪಕ್ಕಾ ಕೌಟುಂಬಿಕ ಕತೆಯುಳ್ಳ ಚಿತ್ರವೇ ಆಗಿದೆ.

“ದಿ ಕ್ರೇಜಿ” ಸ್ಟಾರ್ ಸಿನಿಮಾ

ಕ್ರೇಜಿ ಅಥವಾ ದಿ ಕ್ರೇಜಿ ಅನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಮೇಲೆ ಹೆಚ್ಚು ಕಡಿಮೆ 2 ವರ್ಷ ಕೆಲಸ ಮಾಡಿದ್ದಾರೆ. ಇನ್ನು ಒಂದು ವಿಶೇ‍‍‍‍‍ಷವೆಂದ್ರೆ ಈ ಚಿತ್ರಕ್ಕೆ ನಟನೆ, ನಿರ್ದೇಶನ, ಸಂಗೀತ ಹೀಗೆ ಎಲ್ಲವನ್ನು ರವಿಚಂದ್ರನ್ ಅವರೇ ಮಾಡಿದ್ದಾರೆ.

ಆದರೆ, ಇಲ್ಲಿ ಕ್ಯಾಮರಾಮನ್ ಒಬ್ಬರು ಇದ್ದಾರೆ. ಇವರಿಬ್ಬರು ಬಿಟ್ಟರೆ, ಇವರ ಕೆಲಸಕ್ಕೆ “AI” ಸಾಥ್ ಕೊಟ್ಟಿದೆ. ಈ ಚಿತ್ರದ ಚಿತ್ರೀಕರಣ 400 ದಿನ ಆಗಿದೆ ಅಂತ ಸ್ವತಃ ರವಿಚಂದ್ರನ್ ಹೇಳಿಕೊಂಡಿದ್ದಾರೆ.

Crazy Star Ravichandran Upcoming Movie Details

ಕನಸುಗಾರ ಮುಗಿದ ಕನಸುಗಳು

(ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್‌ಸ್ಟಾಗ್ರಾಮ್)

ಕನಸುಗಾರ ಮುಗಿದ ಕನಸುಗಳು

ರವಿಚಂದ್ರನ್ ಕನಸುಗಳು ಎಂದೂ ಮುಗಿಯೋದೇ ಇಲ್ಲ. ಅದು ನಿರಂತರ ಅನಿಸುತ್ತದೆ. ಹೊಸದನ್ನ ಕಲಿಯುತ್ತಾರೆ. ಇಂದಿನ ಯುವಕರಿಗೆ ಏನು ಬೇಕು ಅನ್ನೋದನ್ನ ತಿಳಿದುಕೊಳ್ಳುತ್ತಾರೆ.

ಸದ್ಯದ ಯುವಕರು ಬಳಕೆ ಮಾಡುವ ಗೆಜೆಟ್‌ಗಳನ್ನು ಬಳಕೆ ಮಾಡ್ತಾರೆ. ಅವುಗಳ ಉಪಯೋವನ್ನು ತಿಳಿದುಕೊಳ್ಳುತ್ತಾರೆ. “AI” ಅನ್ನು ತಿಳಿದುಕೊಂಡು ತಮ್ಮ ಹೊಸ ಕನಸುಗಳಿಗೆ ಸಿನಿಮಾ ರೂಪ ಕೂಡ ಕೊಡುತ್ತಿದ್ದಾರೆ.

ದಿ ಕ್ರೇಜಿ ಚಿತ್ರದ ಪ್ರೋಮೋ

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಈ ಕ್ರೇಜಿ ಚಿತ್ರದ ಟೈಟಲ್ ಇಂಟ್ರಸ್ಟಿಂಗ್ ಆಗಿದೆ. I Am God the Crazy ಅನ್ನೋದು ಈ ಚಿತ್ರದ ಪೂರ್ಣ ಟೈಟಲ್ ಆಗಿದೆ.

ಈ ಚಿತ್ರದ ಹೊಸ ರೀತಿಯ ಪ್ರೋಮೋಗಳನ್ನ ರವಿಚಂದ್ರನ್ ಅವರು ರೆಡಿ ಮಾಡ್ತಾನೇ ಇದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲೂ ಹಂಚಿಕೊಳ್ಳುತ್ತಿದ್ದಾರೆ.

ಕ್ರೇಜಿ-ಬ್ರಹ್ಮ ಕಾನ್ಸರ್ಟ್

ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಹಂಸಲೇಖ ಅವರು ಒಂದು ಕಾನ್ಸರ್ಟ್ ಮಾಡುತ್ತಿದ್ದಾರೆ. ಇದರಲ್ಲಿ ತಮ್ಮ ಜರ್ನಿಯ ಎಲ್ಲ ಹಾಡುಗಳ ಬಗ್ಗೆ ಮಾತನಾಡಲಿದ್ದಾರೆ. ಹಾಡು ಹುಟ್ಟಿದ್ದು ಹೇಗೆ ಅನ್ನೋದನ್ನು ಹೇಳಿಕೊಳ್ಳಲಿದ್ದಾರೆ.

ರವಿಚಂದ್ರನ್ ಅವರ 65 ನೇ ಜನ್ಮ ದಿನದಂದು ಈ ಕಾನ್ಸರ್ಟ್ ಪ್ಲಾನ್ ಆಗಿದೆ. ಬೆಂಗಳೂರಿನಲ್ಲಿಯೇ ಮೇ-30 ರಂದು ಈ ಕಾನ್ಸರ್ಟ್ ನಡೆಯುತ್ತಿದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed