Last Updated:
Rashmika Mandanna: ನಟ ಶಾಹಿದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ನಡೆದ ಒಂದು ಸಣ್ಣ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು , ಅದರ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತಷ್ಟು ಗಮನ ಸೆಳೆದಿದೆ.
ಬಾಲಿವುಡ್ನ ಬಹುನಿರೀಕ್ಷಿತ ‘ಕಾಕ್ಟೇಲ್ 2’ (Cocktail 2) ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವಂತೆ ಚಿತ್ರತಂಡದ ಪ್ರಚಾರ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಆದರೆ ಸಿನಿಮಾ ಕುರಿತ ಚರ್ಚೆಗಿಂತಲೂ ಇತ್ತೀಚೆಗೆ ನಡೆದ ಒಂದು ವೈರಲ್ ವಿಡಿಯೋವೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡಿತ್ತು. ನಟ ಶಾಹಿದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ(Rashmika Mandanna) ನಡುವೆ ನಡೆದ ಒಂದು ಸಣ್ಣ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು , ಅದರ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತಷ್ಟು ಗಮನ ಸೆಳೆದಿದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಕಾಕ್ಟೇಲ್ 2’ ಚಿತ್ರದ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನನ್ ಒಟ್ಟಿಗೆ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಪಾಪರಾಜಿಗಳಿಗೆ ಫೋಟೋ ಪೋಸ್ ನೀಡುವ ವೇಳೆ ಶಾಹಿದ್ ಕಪೂರ್ ರಶ್ಮಿಕಾ ಅವರ ಹೆಗಲ ಮೇಲೆ ಕೈ ಇಡಲು ಮುಂದಾಗಿದ್ದರು.
ಆದರೆ ಅದೇ ಕ್ಷಣದಲ್ಲಿ ರಶ್ಮಿಕಾ ಒಂದು ಹೆಜ್ಜೆ ಹಿಂದೆ ಸರಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡಲು ಆರಂಭಿಸಿದರು. ಕೆಲವರು ರಶ್ಮಿಕಾ ಅವರಿಗೆ ಇದು ಅನ್ ಕಂಫರ್ಟ್ ಆಗಿರಬೇಕು ಎಂದು ಹೇಳಿದರೆ ಇನ್ನೂ ಕೆಲವರು ಇದು ಸಾಮಾನ್ಯ ಘಟನೆ ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ ಈ ವಿಚಾರದ ಬಗ್ಗೆ ಆರಂಭದಲ್ಲಿ ಶಾಹಿದ್ ಕಪೂರ್ ಅಥವಾ ರಶ್ಮಿಕಾ ಮಂದಣ್ಣ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿದ್ದವು. ಈ ವಿವಾದದ ಬೆನ್ನಲ್ಲೇ ಮೇ 29ರಂದು ನಡೆದ ಚಿತ್ರದ ಮತ್ತೊಂದು ಪ್ರಚಾರ ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಮತ್ತೆ ಒಟ್ಟಿಗೆ ವೇದಿಕೆ ಹಂಚಿಕೊಂಡರು.
ಈ ವೇಳೆ ಫೋಟೋ ಸೆಷನ್ ನಡೆಯುತ್ತಿದ್ದಾಗ, ಶಾಹಿದ್ ಕಪೂರ್ ಹಿಂದಿನ ವೈರಲ್ ಘಟನೆಯನ್ನು ತಮಾಷೆಯಾಗಿ ನೆನಪಿಸಿಕೊಂಡರು. ರಶ್ಮಿಕಾ ಹಿಂದೆ ಸರಿದಿದ್ದ ಕ್ಷಣವನ್ನು ನಟ ಮತ್ತೆ ರೀ ಕ್ರಿಯೇಟ್ ಮಾಡಿದ್ದಾರೆ.ಅವರ ಈ ನಡೆ ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆದಿದ್ದು, ವಿಡಿಯೋಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿವೆ.
ಅಷ್ಟೇ ಅಲ್ಲದೆ, ತಾವು ಹಿಂದಿನ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಹಾಗೆ ಮಾಡಿರಲಿಲ್ಲ ಎಂಬುದನ್ನು ರಶ್ಮಿಕಾ ನಗುತ್ತಲೇ ಸ್ಪಷ್ಟಪಡಿಸಿದರು. ಇದರಿಂದ ವೈರಲ್ ಆಗಿದ್ದ ಘಟನೆಯ ಹಿಂದಿನ ಗೊಂದಲಕ್ಕೆ ಬಹುತೇಕ ತೆರೆ ಬಿದ್ದಂತಾಯಿತು.
ಈ ಘಟನೆಯ ನಡುವೆಯೂ ‘ಕಾಕ್ಟೇಲ್ 2’ ಚಿತ್ರದ ಬಗ್ಗೆ ಸಿನಿಪ್ರೇಮಿಗಳ ನಿರೀಕ್ಷೆ ಹೆಚ್ಚುತ್ತಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
Bangalore [Bangalore],Bangalore,Karnataka













