Last Updated:
Rashmika Mandanna: ಮದುವೆ ಸಮಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ. ಮುದ್ದಾದ ಜೋಡಿ ಮಾಡಿದ ಕೆಲಸ ಏನಂತ ಗೊತ್ತಾದ್ರೆ ಭೇಷ್ ಅಂತೀರಿ.
ಟಾಲಿವುಡ್ನ (Tollywood) ಅತ್ಯಂತ ಮುದ್ದಾದ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮದುವೆ (Marriage) ಸಮಯದಲ್ಲಿ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ವಿವಾಹವಾದ ನಂತರ ಆ ವೇಳೆ ನೀಡಿದ್ದ ಭರವಸೆಯನ್ನು (Promise) ಉಳಿಸಕೊಳ್ಳುವಲ್ಲಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ.
ಅವರು ತಮ್ಮ ಮಾತುಗಳಿಗೆ ಬದ್ಧರಾಗಿದ್ದು ವಿಜಯ್ ದೇವರಕೊಂಡ ಈ ಸಂಬಂಧ ಒಂದು ಟ್ವೀಟ್ ಕೂಡಾ ಮಾಡಿದ್ದಾರೆ. ತೆಲಂಗಾಣದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದರು.
ವಿಜಯ್ ದೇವರಕೊಂಡ ಅವರು ಮತ್ತು ಅವರ ಪತ್ನಿ ರಶ್ಮಿಕಾ ಮಂದಣ್ಣ ಅವರು ತುಮ್ಮನ್ಪೇಟೆ ಎಂಬ ಹಳ್ಳಿಗೆ ಪ್ರಯಾಣಿಸುತ್ತಿರುವುದಾಗಿ ತಮ್ಮ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅದು ಅವರ ತಂದೆ ಜನಿಸಿದ ಸ್ಥಳವಾಗಿತ್ತು.
ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಬೆಂಬಲಿಸುವ ತೆಲುಗಿನ ಸ್ಟಾರ್ ಜೋಡಿಯ ಕನಸು ನಿಧಾನವಾಗಿ ನನಸಾಗುತ್ತಿರುವುದನ್ನು ನೋಡಿ ನಟ ಸಂತೋಷ ವ್ಯಕ್ತಪಡಿಸಿದ್ದಾರೆ.
“ನಾವು ತುಮ್ಮನ್ಪೇಟೆಗೆ ಹೋಗುತ್ತಿದ್ದೇವೆ. ನನ್ನ ತಂದೆ ಜನಿಸಿದ ಪುಟ್ಟ ಹಳ್ಳಿ. ಫೆಬ್ರವರಿಯಲ್ಲಿ – ರಶ್ಮಿಕಾ ಮತ್ತು ನಾನು ನಮ್ಮ ಒಂದು ಸಣ್ಣ ಕನಸನ್ನು ಘೋಷಿಸಿದ್ದೆವು. ತೆಲಂಗಾಣದ ಅಚಂಪೇಟ್ ಮಂಡಲದ 9 ಮತ್ತು 10 ನೇ ತರಗತಿಯ ಎಲ್ಲಾ ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಫಲ ನೀಡಲು ಹೋಗುತ್ತಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.
ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳ ಮೇಲೆ ಹೊರೆಯಂತೆ ಭಾಸವಾಗಬಹುದಾದ ಸಮಯದಲ್ಲಿ ಅರ್ಥಪೂರ್ಣವಾದ ಕೆಲಸ ಮಾಡುವುದನ್ನು ನೋಡುವಾಗ ಖುಷಿಯಾಗುತ್ತದೆ ಎಂದು ಬಹಳಷ್ಟು ಜನ ಕಮೆಂಟ್ ಮಾಡಿದ್ದಾರೆ. ಅವರು 180 ವಿದ್ಯಾರ್ಥಿಗಳ ಪಟ್ಟಿಯನ್ನು ಸಹ ಬಹಿರಂಗಪಡಿಸಿದರು.
ದೇವರಕೊಂಡ ದಂಪತಿ ಈ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಗೆ ನೆರವಾಗುವುದನ್ನು ಘೋಷಿಸಿದರು. ತುಮ್ಮನ್ಪೇಟೆಯ 44 ಸರ್ಕಾರಿ ಶಾಲೆಗಳಲ್ಲಿ 9 ಮತ್ತು 10 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ದಂಪತಿ ನಿರ್ಧರಿಸಿದ್ದಾರೆ.
ಮಕ್ಕಳ ಫೀಸ್ ಸರಿಯಾದ ಸಮಯಕ್ಕೆ ಸರಿಯಾಗಿ ಪಾವತಿಸಲು ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಇತರ ಕಲಿಕಾ ಸಾಮಗ್ರಿಗಳನ್ನು ನೀಡಲು ಸಹಾಯ ಮಾಡಲು ಪ್ರತಿಷ್ಠಾನವು ಸಹಾಯ ನೆರವಾಗುತ್ತದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ರಣಬಾಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರವು ಮದುವೆಯ ನಂತರ ಒಟ್ಟಿಗೆ ನಟಿಸಿದ ಅವರ ಮೊದಲ ಚಿತ್ರ.
Bangalore,Karnataka













