Last Updated:
Ranveer Singh Ban: ನಟ ರಣವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ಪರೋಕ್ಷವಾಗಿ ಬ್ಯಾನ್ (Ban) ಮಾಡಲಾಗಿದೆ. ಈ ವಿಚಾರವಾಗಿ ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ‘ಧುರಂಧರ್’ (Dhurandhar) ಸಿನಿಮಾ ಮೂಲಕ ಬಹಳಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದ ನಟ ರಣವೀರ್ ಸಿಂಗ್ (Actor Ranveer Singh) ಇದೀಗ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ .ಡಾನ್ 3 (Don 3) ಸಿನಿಮಾದಿಂದ ನಟ ದಿಢೀರ್ ಹೊರನಡೆದ ವಿಚಾರ ಇದೀಗ ದೊಡ್ಡ ಚರ್ಚೆಯ ವಿಷಯವಾಗಿ ಪರಿಣಮಿಸಿದೆ. ಎಷ್ಟರ ಮಟ್ಟಿಗೆ ಅಂದ್ರೆ ಸಿನಿಮಾ ನೌಕರರ ಒಕ್ಕೂಟ FWICE ನಟನ ವಿರುದ್ಧ ಗಂಭೀರ ಆದೇಶ ಹೊರಡಿಸಿದೆ. ಈ ಹಿನ್ನೆಲೆ, ನಟ ರಣವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ಪರೋಕ್ಷವಾಗಿ ಬ್ಯಾನ್ (Ban) ಮಾಡಲಾಗಿದೆ. ಈ ವಿಚಾರವಾಗಿ ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ನಿರ್ದೇಶಕ ಫರ್ಹಾನ್ ಅಖ್ತರ್ (Farhan Akhtar) ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಡಾನ್ 3 ನಿರ್ಮಾಣಕ್ಕೆ ಸಿದ್ಧವಾಗಿತ್ತು. ಚಿತ್ರಕಥೆ, ಸೆಟ್ ವಿನ್ಯಾಸ, ಲೊಕೇಷನ್ ಫೈನಲ್, ತಾಂತ್ರಿಕ ಸಿದ್ಧತೆ ಹೀಗೆ ಅನೇಕ ಹಂತಗಳು ಪೂರ್ಣಗೊಂಡಿದ್ದವು. ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ರಣವೀರ್ ಸಿಂಗ್ ಚಿತ್ರದಿಂದ ಹಿಂದೆ ಸರಿದಿದ್ದಾರೆ.
ಈ ನಿರ್ಧಾರವು ನಿರ್ಮಾಣ ಸಂಸ್ಥೆಗೆ ಭಾರೀ ನಷ್ಟ ತಂದುಕೊಟ್ಟಿದೆ ಎನ್ನಲಾಗುತ್ತಿದ್ದು, ಕೋಟ್ಯಂತರ ರೂಪಾಯಿ ಪ್ರಿ-ಪ್ರೊಡಕ್ಷನ್ ಹಂತದಲ್ಲೇ ಖರ್ಚಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಮಧ್ಯೆ ಇದೀಗ ಮತ್ತೊಂದು ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ. ಅಂದು ಗೋವಾದಲ್ಲಿ ನಡೆದ ಸಿನಿಮಾ ಫೆಸ್ಟಿವಲ್ ವೇಳೆ ಕಾಂತಾರ ಸಿನಿಮಾ ಮತ್ತು ನಟನನ್ನ ಹೊಗಳುವ ಬರದಲ್ಲಿ ನಟ ರಣವೀರ್ ಸಿಂಗ್ (Ranveer Singh) ಕಾಂತಾರ ಚಿತ್ರದ ಚಾಮುಂಡಿ ದೈವದ ದೃಶ್ಯವೊಂದರ ಅನುಕರಣೆ ಮಾಡಿ ಫೀಮೇಲ್ ಗೋಸ್ಟ್ ಎಂದು ಹೇಳಿಕೆ ನೀಡಿದ್ರು. ಈ ಎಲ್ಲಾ ವಿವಾದದ ಬಳಿಕ ನಟನ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಇದೀಗ ನಟ ರಣವೀರ್ ಸಿಂಗ್ ಚಿತ್ರರಂಗದಿಂದ ಬ್ಯಾನ್ ಆಗಿರೋದಕ್ಕೆ ಇದೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಆದೇಶದ ಪ್ರಕಾರ, FWICEಗೆ ಸೇರಿದ ಯಾವುದೇ ಸದಸ್ಯರು ರಣವೀರ್ ಸಿಂಗ್ ಅಭಿನಯಿಸುವ ಚಿತ್ರಗಳಲ್ಲಿ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ.
ಈ ವಿವಾದ ಆರಂಭದಲ್ಲಿ ನಿರ್ಮಾಪಕರ ಸಂಘದ ಮಟ್ಟಕ್ಕೆ ಹೋಗಿತ್ತು. ಹಿರಿಯ ನಿರ್ಮಾಪಕರು ರಣವೀರ್ ಸಿಂಗ್ ಹಾಗೂ ಎಕ್ಸೆಲ್ ಎಂಟರ್ಟೈನ್ಮೆಂಟ್ ನಡುವೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದರು. ಆದರೆ, ನಷ್ಟ ಪರಿಹಾರ ಹಾಗೂ ಒಪ್ಪಂದ ಸಂಬಂಧಿತ ನಿಯಮಗಳ ವಿಚಾರದಲ್ಲಿ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಸ್ಥಿತಿಯಲ್ಲಿ FWICE ತನ್ನ ನಿಲುವನ್ನು ಮುಂದಿರಿಸಿದೆ.
Bangalore [Bangalore],Bangalore,Karnataka
Ranveer Singh Ban: ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ಬ್ಯಾನ್ ಆದ ರಣವೀರ್ ಸಿಂಗ್! ಕಾಂತಾರ ದೈವಕ್ಕೆ ಅವಮಾನ ಮಾಡಿದ್ದೇ ಶಾಪವಾಯಿತಾ?













