Last Updated:
ಧುರಂಧರ್ ಪಾತ್ರಕ್ಕೆ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡೋದಕ್ಕೆ ಅದೊಂದೇ ಕಾರಣವಾ? ಇಲ್ಲದಿದ್ದರೆ ನಟನಿಗೆ ಪಾತ್ರ ಸಿಗುತ್ತಿರಲಿಲ್ವಾ?
ಧುರಂಧರ್ ಸಿನಿಮಾದ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ, ರಣವೀರ್ ಸಿಂಗ್ ಅವರನ್ನು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾದ ಫ್ರಾಂಚೈಸಿಯಲ್ಲಿ ಏಕೆ ಆಯ್ಕೆ ಮಾಡಲಾಯಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ. ತಾರಾಗಣದ ಹಿಂದಿನ ಲೆಕ್ಕಾಚಾರವನ್ನು ವಿವರಿಸುತ್ತಾ, ಸಿನಿಮಾ ಮೊದಲೇ ತುಂಬಾ ದುಬಾರಿಯಾಗಿರುವುದರಿಂದ, ದುಬಾರಿ ನಟರನ್ನು ಹಾಕಿಕೊಳ್ಳೋ ಆಯ್ಕೆ ಅವರಿಗೆ ಇರಲಿಲ್ಲ ಎಂದಿದ್ದಾರೆ.
ನಾರ್ಮಲ್ ಹೀರೋ ಬದಲಿಗೆ ಶೋ ಮ್ಯಾನ್ ಅಗತ್ಯವಿದೆ. ಮತ್ತು ರಣವೀರ್ ಸಿಂಗ್ ಬಜೆಟ್ಗೆ ಕೂಡಾ ಸರಿಹೊಂದುತ್ತಾರೆ ಅರಿತುಕೊಂಡೆವು ಎಂದು ಅವರು ಉಲ್ಲೇಖಿಸಿದ್ದಾರೆ.
ಔಟ್‌ಲುಕ್ ಬ್ಯುಸಿನೆಸ್ ಜೊತೆ ಮಾತನಾಡಿದ ಜಿಯೋ ಸ್ಟುಡಿಯೋಸ್ ಸಿಇಒ ಜ್ಯೋತಿ ದೇಶಪಾಂಡೆ, “ಆರು ತಿಂಗಳಿಗಿಂತ ಹೆಚ್ಚು ಕಾಲ, ನಾವು ಅದರ ಬಗ್ಗೆ ಮಾತನಾಡುತ್ತಿದ್ದೆವು. ಆ ಆರು ತಿಂಗಳುಗಳಲ್ಲಿ ಡ್ರಾಫ್ಟ್ ಮತ್ತು ಕಥೆಯ ಹಲವಾರು ಬದಲಾವಣೆಗಳು ನಡೆದವು” ಎಂದು ಹೇಳಿದರು.
“ಚಿತ್ರ ದುಬಾರಿ ಎಂದು ನಮಗೆ ತಿಳಿದಿತ್ತು. ಪ್ರತಿ ಪೈಸೆಯೂ ತೆರೆಯ ಮೇಲೆ ಬೀಳಬೇಕಿತ್ತು. ಚಿತ್ರೀಕರಣಕ್ಕೆ ಈಗಾಗಲೇ ದುಬಾರಿ ಚಿತ್ರವಾಗಿದ್ದರಿಂದ ನಾವು ಮಾಡಲು ಯಾವುದೇ ರೀತಿ ಹಣ ಉಳಿಸೋಕೆ ಸಾಧ್ಯವಿರಲಿಲ್ಲ. ಅವರ ಮೇಲೆ ನಾವು ದುಬಾರಿ ನಟರನ್ನು ಕೂಡ ಸೇರಿಸಿದರೆ, ಅದು ಮೊದಲ ದಿನವೇ ಚಿತ್ರಕ್ಕೆ ಹೊಡೆತ. ಆದ್ದರಿಂದ ನಾವು ಹೀರೋಗಳ ಬದಲಿಗೆ ಶೋಮ್ಯಾನ್ಗಳನ್ನು ಹುಡುಕಿದೆವು” ಎಂದು ಅವರು ವಿವರಿಸಿದರು.
ರಣವೀರ್ ಅಷ್ಟು ದೊಡ್ಡ ಬಜೆಟ್ನವರಲ್ಲ. ನಾನು ಅವರೊಂದಿಗೆ ರಾಮ್-ಲೀಲಾ ಮತ್ತು ಬಾಜಿರಾವ್ ಮಸ್ತಾನಿ ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ಹಾಗಾಗಿ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾಗ ನಾನು ಅವರೊಂದಿಗೆ ಕೆಲಸ ಮಾಡಿದ್ದೆ. ಅವರು ತಮ್ಮ ಸರ್ವಸ್ವವನ್ನೂ ನೀಡುವ ಅತ್ಯುತ್ತಮ ನಟ ಎಂದು ನಾನು ಭಾವಿಸುತ್ತೇನೆ. ಅವರು ಪಾತ್ರವಾಗಿ ರೂಪಾಂತರಗೊಳ್ಳುತ್ತಾರೆ ಎಂದನಿಸಿತು” ಎಂದು ಜ್ಯೋತಿ ಹೇಳಿದರು.
“ಆ ಚಿತ್ರದಲ್ಲಿ ಅವನು ರಣವೀರ್ ಸಿಂಗ್ ಅಲ್ಲ ಎಂಬ ಅಂಶ ನನಗೆ ತುಂಬಾ ಇಷ್ಟವಾಯಿತು. ಬಾಜಿರಾವ್ ಆಗಬೇಕಾದಾಗ ಬಾಜಿರಾವ್ ಆಗುತ್ತಾನೆ. ಖಿಲ್ಜಿ ಆಗಬೇಕಾದಾಗ ಖಿಲ್ಜಿ ಆಗುತ್ತಾನೆ. ಗಲ್ಲಿ ಬಾಯ್ ಆಗಬೇಕಾದಾಗ ಗಲ್ಲಿ ಬಾಯ್ ಆಗುತ್ತಾನೆ. ಹಾಗಾಗಿ ಅವನು ರೂಪಾಂತರಗೊಳ್ಳುತ್ತಾನೆ; ಅವನು ರಣವೀರ್ ಸಿಂಗ್ ಪಾತ್ರ ಮಾಡುವುದಿಲ್ಲ, ಆ ಪಾತ್ರವಾಗಿ ನಟಿಸುತ್ತಾನೆ ಎನಿಸಿತು ಎಂದಿದ್ದಾರೆ.
ಧುರಂಧರ್ ಚಿತ್ರವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ನಿರ್ಮಾಪಕರಿಗೆ ಉತ್ತಮ ಲಾಭ ತಂದುಕೊಟ್ಟಿತು. ಹಮ್ಜಾ ಅಲಿ ಮಜಾರಿ ಮತ್ತು ಜಸ್ಕಿರತ್ ಸಿಂಗ್ ರಂಗಿ ಪಾತ್ರಕ್ಕಾಗಿ ರಣವೀರ್ ಸಿಂಗ್ ಕೂಡ ಮೆಚ್ಚುಗೆ ಪಡೆದರು. ಈಗ, ರಣವೀರ್ ಕಲ್ಯಾಣಿ ಪ್ರಿಯದರ್ಶನ್ ಜೊತೆ ನಟಿಸಿರುವ ಪ್ರಲೇ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ.
Bangalore,Karnataka














