Rangayana Raghu: ರಂಗಾಯಣ ರಘು 400ನೇ ಚಿತ್ರಕ್ಕೆ ಸ್ಟಾರ್ಸ್ ಸಪೋರ್ಟ್; ಸೂಪರ್ ಆಗಿದೆ ಹೊಸ ಜೀವನ ಪೋಸ್ಟರ್! | | ACTPnews

ರಂಗಾಯಣ ರಘು 400 ನೇ ಚಿತ್ರಕ್ಕೆ ಸ್ಟಾರ್ಸ್ ಸಪೋರ್ಟ್!


Last Updated:

ರಂಗಾಯಣ ರಘು ಅಭಿನಯದ 400 ನೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಕೌಟುಂಬಿಕ ಚಿತ್ರದಲ್ಲಿ ರಂಗಾಯಣ ರಘು ಪಾತ್ರ ಹೇಗಿದೆ ಅನ್ನೋದು ರಿವೀಲ್ ಆಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ರಂಗಾಯಣ ರಘು 400 ನೇ ಚಿತ್ರಕ್ಕೆ ಸ್ಟಾರ್ಸ್ ಸಪೋರ್ಟ್!
ರಂಗಾಯಣ ರಘು 400 ನೇ ಚಿತ್ರಕ್ಕೆ ಸ್ಟಾರ್ಸ್ ಸಪೋರ್ಟ್!

ರಂಗಾಯಣ ರಘು (Rangayana Raghu) ಅಭಿನಯದ 400 ನೇ ಚಿತ್ರದ ಫಸ್ಟ್ ಲುಕ್ ರಿಲೀಸ್ (First Look Release) ಆಗಿದೆ. ಈ ಚಿತ್ರದ ಟೈಟಲ್ ತುಂಬಾನೆ ಚೆನ್ನಾಗಿದೆ. ಹೊಸ ಜೀವನ (Hosa Jeevana) ಅನ್ನುವ ಈ ಶೀರ್ಷಿಕೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈ ಸಿನಿಮಾದಲ್ಲಿ ನವ ಕಲಾವಿದರೂ ಇದ್ದಾರೆ. ಇವರ ಜೊತೆಗೆ ರಂಗಾಯಣ ರಘು (Rangayana Raghu) ಪ್ರಮುಖ ರೋಲ್ ಮಾಡಿದ್ದಾರೆ. ಆ ಪ್ರಮುಖ ರೋಲ್ ಹೇಗೆ ಇರುತ್ತದೆ ಅನ್ನೋದನ್ನ ಈಗ ಬಿಟ್ಟಿರೋ ಪೋಸ್ಟರ್ ಹೇಳುತ್ತಿದೆ. ಅದರ ವಿವರ ಇಲ್ಲಿದೆ ಓದಿ.

ಹೊಸ ಜೀವನದ ಫಸ್ಟ್ ಲುಕ್

ಹೊಸ ಜೀವನ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕನ್ನಡ ಚಿತ್ರರಂಗದ ಕಲಾವಿದರು ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ಫಸ್ಟ್ ಲುಕ್ ಅನ್ನು ಇವರು ಶೇರ್ ಮಾಡಿಕೊಂಡಿದ್ದಾರೆ.

Rangayana Raghu 400th Hosa jeevana Movie First Look Release

ಸೂಪರ್ ಆಗಿದೆ ಹೊಸ ಜೀವನ ಪೋಸ್ಟರ್

ರಮೇಶ್ ರವಿಂದ್, ಸಿಂಪಲ್ ಸುನಿ, ಡಾರ್ಲಿಂಗ್ ಕೃಷ್ಣ, ಸತೀಶ್ ನೀನಾಸಂ, ನವೀನ್ ಕೃಷ್ಣ ಹೀಗೆ ಕನ್ನಡದ ನಟರು ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ರಂಗಾಯಣ ರಘು ಅವರ ಪಾತ್ರ ಹೇಗಿದೆ ಅನ್ನೋದು ತಿಳಿಯುತ್ತದೆ.

ಕೌಟುಂಬಿಕ ಸಿನಿಮಾ

ಹೊಸ ಜೀವನ ಚಿತ್ರ ಕೌಟುಂಬಿಕ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಮನರಂಜನೆನೂ ಇದೆ. ಹಾಗಾಗಿಯೇ ಚಿತ್ರ ತಂಡ ಇದನ್ನ ಕೌಟುಂಬಿಕ ಮನರಂಜನಾ ಚಿತ್ರ ಅಂತಲೇ ಹೇಳಿದೆ.

ಈ ಚಿತ್ರದ ಡೈರೆಕ್ಟರ್

ಹೊಸ ಜೀವನ ಚಿತ್ರದ ಡೈರೆಕ್ಟರ್ ಯಾರು? ಈ ಪ್ರಶ್ನೆಗೆ ಉತ್ತರವು ಸಿಕ್ಕಿದೆ. ಅದನ್ನ ಇಲ್ಲಿ ಹೇಳೋದಾದರೆ, ಕಿರುಚಿತ್ರಗಳನ್ನ ಡೈರೆಕ್ಷನ್ ಮಾಡ್ತಾನೇ ಗುರುತಿಸಿಕೊಂಡಿದ್ದ ಮೋಹನ್ ಕುಮಾರ್ ಹನುಮಯ್ಯ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಳ, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್.ಪೇಟೆ ಸೇರಿ ಇನ್ನು ಹಲವು ಕಲಾವಿದರು ನಟಿಸಿದ್ದಾರೆ.

Rangayana Raghu 400th Hosa jeevana Movie First Look Release

ಹೊಸ ಜೀವನ ಚಿತ್ರದ ಕಥೆ ಏನು
ಇಬ್ಬರು ಮ್ಯೂಸಿಕ್ ಡೈರೆಕ್ಟರ್

ಹೊಸ ಜೀವನ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಮುಖ ರಾವ್ ಸಂಗೀತ ಮಾಡಿದ್ದಾರೆ. ಸುನಾದ್ ಗೌತಮ್ ಹಿನ್ನೆಲೆ ಸಂಗೀತ ಮಾಡಿದ್ದಾರೆ.

ಪ್ರತಾಪ್ ಎಂ.ಆರ್. ಡೈಲಾಗ್ ಬರೆದಿದ್ದಾರೆ. ರಾಜ್ ಕಾಂತ್ ಎಸ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರವನ್ನ ಡೈರೆಕ್ಟರ್ ಮೋಹನ್ ಕುಮಾರ್ ಹನುಮಯ್ಯ ಕೂಡ ನಿರ್ಮಿಸಿದ್ದಾರೆ. ಆದರೆ, ಈ ವಿಷಯದಲ್ಲಿ ಜಿ.ಎಸ್.ಸಂಜೀವ್ ಪ್ರಸಾದ್ ಕೂಡ ಸಾಥ್ ಕೊಟ್ಟಿದ್ದಾರೆ. ಇವರೂ ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ.

ರಂಗಾಯಣ ರಘು ಸಿನಿಮಾಗಳು

ರಂಗಾಯಣ ರಘು ತಮ್ಮ ಚಿತ್ರ ಜೀವನದಲ್ಲಿ 399 ಚಿತ್ರ ಮಾಡಿದ್ದಾರೆ. ಆದರೆ, ಆರಂಭದಲ್ಲಿ ಇವರು ಹಾಸ್ಯಭರತಿ ವಿಲನ್ ರೋಲ್ ಮಾಡಿದ್ದಾರೆ.

ಆದರೆ, ಬರ್ತಾ ಬರ್ತಾ ಇವರು ಬೇರೆ ರೀತಿಯ ಪಾತ್ರಗಳನ್ನು ಮಾಡ್ತಾ ಬಂದಿದ್ದಾರೆ. ಶಾಖಾಹಾರಿ ಸಿನಿಮಾದಲ್ಲಿ ಇವರು ಅದ್ಭತವಾಗಿಯೇ ಅಭಿನಯಿಸಿದ್ದಾರೆ. ದೇವಿ ಮಹಾತ್ಮೆ ಚಿತ್ರದಲ್ಲಿ ಕೂಡ ರಂಗಾಯಣ ರಘು ಅದ್ಭುತವಾಗಿಯೇ ನಟಿಸಿದ್ದಾರೆ. ಇದರ ಟೀಸರ್ ರಿಲೀಸ್ ಆಗಿದೆ. ಇದು ಕೂಡ ಪ್ರಾಮಿಸಿಂಗ್ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports