Rambha: ಖ್ಯಾತ ನಟಿ ರಂಭಾ ಮನೆಯಲ್ಲಿ ದುರಂತ! ಕಣ್ಣೀರಾಕಿದ ನಟಿ, ಅಷ್ಟಕ್ಕೂ ಆಗಿದ್ದೇನು? | | ACTPnews

ನಟಿ ರಂಭಾ


Last Updated:

Rambha: ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ನಟನೆ ಮೂಲಕ ಕನ್ನಡ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದ ಹಿರಿಯ ನಟಿ ರಂಭಾ (Rambha) ಇದೀಗ ದುಃಖದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ನಟಿ ರಂಭಾ
ನಟಿ ರಂಭಾ

ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ನಟನೆ ಮೂಲಕ ಕನ್ನಡ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದ ಹಿರಿಯ ನಟಿ ರಂಭಾ (Rambha) ಇದೀಗ ದುಃಖದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಏನಪ್ಪಾ ಅಂದ್ರೆ ನಟಿ ರಂಭಾ ಅವರ ತಂದೆ ವೆಂಕಟೇಶ್ವರ ರಾವ್ ಇತ್ತೀಚಿಗೆ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಟಿ ರಂಭಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತಂದೆಯ ಮರಣದ ನಂತರ ರಂಭಾ ಅವರು ಹಾಕಿರುವ ಪೋಸ್ಟ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಸದಾ ಲವಲವಿಕೆಯಿಂದ ಕಾಣುವ ನಟಿ ರಂಭಾ, ಈ ಬಾರಿ ತಮ್ಮ ನೋವನ್ನು ಕಣ್ಣೀರಿನ ರೀತಿಯಲ್ಲಿ ಬಹಿರಂಗಪಡಿಸಿದ್ದಾರೆ . “ಪ್ರಿಯ ಅಪ್ಪಾ… ನನ್ನ ಹೃದಯದಲ್ಲಿ ನಿಮ್ಮ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ ತನ್ನ ತಂದೆಯೊಂದಿಗೆ ಅನೇಕ ಸಣ್ಣಪುಟ್ಟ ಜಗಳಗಳು ಆಗಿದ್ದರೂ , ಕೆಲವೊಮ್ಮೆ ತೊಂದರೆ ನೀಡಿದ್ದರೂ, ಅವರು ಯಾವಾಗಲೂ ತನ್ನನ್ನು ಪ್ರೀತಿಯಿಂದ ನೋಡುತ್ತಿದ್ದರು ಎಂದು ರಂಭಾ ಹೇಳಿಕೊಂಡಿದ್ದಾರೆ. “ನಾನು ಎಷ್ಟೇ ತಪ್ಪುಗಳನ್ನು ಮಾಡಿದರೂ, ನೀವು ಅದೇ ನಗುವಿನೊಂದಿಗೆ ನನ್ನನ್ನು ಅರ್ಥಮಾಡಿಕೊಂಡಿದ್ದೀರಿ” ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ನಟಿ ರಂಭಾ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ತನ್ನ ಸೌಂದರ್ಯದಿಂದ ವಿಶೇಷ ಮನ್ನಣೆ ಗಳಿಸಿದ್ದಾರೆ. ವಿಜಯವಾಡದಲ್ಲಿ ಜನಿಸಿದ ರಂಭಾ ಮೂಲ ಹೆಸರು ವಿಜಯಲಕ್ಷ್ಮಿ. ಅವಳ ಮುಗ್ಧ ಮುಖ, ಡೈಲಾಗ್, ನಟನೆ, ಡ್ಯಾನ್ಸ್ಗೆ ಫ್ಯಾನ್ಸ್ ಮನಸೋತಿದ್ದರು. ಆ ನಂತರ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ ನಟಿ ರಂಭಾ ಜನಪ್ರಿಯರಾದ್ರು.

ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆದ ಬಳಿಕ 2010ರಲ್ಲಿ ಕೈಗಾರಿಕೋದ್ಯಮಿ ಇಂದ್ರಕುಮಾರ್ ಅವರನ್ನು ರಂಭಾ ವಿವಾಹವಾದ್ರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. 8 ಪ್ರಾದೇಶಿಕ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ರಂಭಾ ನಟಿಸಿದ್ದಾರೆ. ರಂಭಾ ಮುಖ್ಯವಾಗಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಕೆಲವು ಬೆಂಗಾಲಿ ಮತ್ತು ಭೋಜ್​ಪುರಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ನಟಿ ರಂಭಾ ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದಾರೆ. 1993 ರಲ್ಲಿ ಅವರು ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದರು. ಸರ್ವರ್ ಸೋಮಣ್ಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಓ ಪ್ರೇಮವೇ, ಭಾವ ಭಾಮೈದ, ಸಾಹುಕಾರ, ಪಾಂಡುರಂಗ ವಿಠ್ಠಲ, ಗಂಡುಗಲಿ ಕುಮಾರರಾಮ ಚಿತ್ರಗಳಲ್ಲಿ ನಟಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports