Last Updated:
ಪೆದ್ದಿ ಚಿತ್ರಕ್ಕಾಗಿಯೇ ರಾಮ್ ಚರಣ್ ಅಷ್ಟು ಕಷ್ಟಪಟ್ಟಿರೋದು ಯಾಕೆ? ಇಡೀ ದೇಹವನ್ನ ದಂಡಿಸೋಕೆ ಕಾರಣ ಆದ ಆ ವ್ಯಕ್ತಿ ಯಾರು? ಈ ಮ್ಯಾಟರ್ ಇದೀಗ ರಿವೀಲ್ ಆಗಿದೆ. ಇದನ್ನ ಸ್ವತಃ ರಾಮ್ ಚರಣ್ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಪೆದ್ದಿ ಚಿತ್ರದಲ್ಲಿ (Peddi Movie) ರಾಮ್ ಚರಣ್ (Ram Charan) ಸಖತ್ ಆಗಿಯೇ ಕಾಣಿಸಿದ್ದಾರೆ. ಈ ಒಂದು ಪಾತ್ರಕ್ಕಾಗಿಯೇ ಸಾಕಷ್ಟು ಕಸರತ್ತು ಮಾಡಿದ್ದಾರೆ. ಆದರೆ, ಇಷ್ಟೆಲ್ಲ ಮಾಡೋಕೆ ಒಂದು ಬಲವಾದ ಕಾರಣವೂ ಇದೆ. ಅದು ದುಡ್ಡು ಅಲ್ಲ, ಅವಕಾಶವೂ ಅಲ್ಲ. ಬದಲಾಗಿ ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಅನ್ನೋದೇ ಆಗಿದೆ. ಇದನ್ನ ರಾಮ್ ಚರಣ್ (Ram Charan) ಅವರೇ ಹೇಳಿಕೊಂಡಿದ್ದಾರೆ. ಪೆದ್ದಿ ಆಗಲು ತಾವು ಯಾಕೆ ಅಷ್ಟೆಲ್ಲ ರಿಸ್ಕ್ ತೆಗೆದುಕೊಂಡಿರೋದು ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪೆದ್ದಿಗೆ ಯಾರು ಸ್ಪೂರ್ತಿ
ಪೆದ್ದಿ ಚಿತ್ರದಲ್ಲಿ ಕತೆ ತುಂಬಾನೆ ಸ್ಟ್ರಾಂಗ್ ಆಗಿದೆ. ಈ ಕತೆಯನ್ನ ಬರೆದ ಡೈರೆಕ್ಟರ್ ಬುಚಿ ಬಾಬು ಸನಾ ಎಲ್ಲರಿಗೂ ತಮ್ಮ ಬರವಣಿಗೆಯಿಂದಲೇ ಸ್ಪೂರ್ತಿ ನೀಡಿದ್ದಾರೆ.
ಡೈರೆಕ್ಟ್ ಬುಚಿ ಬಾಬು ಸನಾ ನೋಡೊಕೆ ತುಂಬಾನೆ ಸಣ್ಣ ಇದ್ದಾರೆ. ಆದರೆ, ಇವರ ಬ್ರೇನ್ ಆನೆ ಗಾತ್ರದ್ದೇ ಬಿಡಿ. ಅಷ್ಟೊಂದು ಓಡುತ್ತದೆ. ಯಾರೇ ಇದ್ದರೂ ಅಷ್ಟೇನೆ, ಬಿಡದೆ ಒಳ್ಳೆ ಕೆಲಸ ತೆಗೆಸುತ್ತಾರೆ.
ಶಿವಣ್ಣನನ್ನು ಬುಚಿ ಬಾಬು ಬಿಡಲಿಲ್ಲ. ಅವರಿಂದಲೂ ಒಳ್ಳೆ ಕೆಲಸ ತೆಗೆಸಿದ್ದಾರೆ. ಆಗ ಶಿವಣ್ಣ ಹೇಳ್ತಾ ಇದ್ದರು. ಬುಚಿ…ಏನಿದು? ಅಂತಲೇ ಕೂಗ್ತಿದ್ದರು ಅನ್ನೋದನ್ನ ರಾಮ್ ಚರಣ್ ನೆನಪಿಸಿಕೊಂಡಿದ್ದಾರೆ.
ಬುಚಿ ಬಾಬಾ ಸನಾ ಒಳ್ಳೆ ಕತೆ ಮಾಡಿದ್ದಾರೆ. ಈ ಕತೇನೆ ನಮ್ಮಿಂದ ಎಲ್ಲ ಮಾಡಿಸಿದೆ. ನಾವು ಏನೂ ಮಾಡಿಲ್ಲ. ಬುಚಿ ಬಾಬು ಆ ರೀತಿನೇ ಕತೆ ಮಾಡಿಕೊಂಡಿದ್ದಾರೆ.
ಜೂನ್-4 ರಂದು ರಿಲೀಸ್
ಈ ಚಿತ್ರದ ಹಳ್ಳಿ ಇಂಡಿಯಾದ ಮ್ಯಾಪ್ ಅಲ್ಲಿಯೇ ಇರೋದಿಲ್ಲ. ಆದರೆ, ಪೆದ್ದಿ ಎಲ್ಲ ಕ್ರೀಡೆಯಲ್ಲಿ ಗೆದ್ದು ಹಳ್ಳಿಗೊಂದು ಐಡೆಂಟಿಟಿ ತಂದುಕೊಡ್ತಾನೆ. ಆ ರೀತಿಯ ಕತೆಯ ಚಿತ್ರ ಇದಾಗಿದೆ ಅಂತಲೂ ರಾಮ್ ಚರಣ್ ಹೇಳಿಕೊಂಡಿದ್ದಾರೆ.
ಪೆದ್ದಿ ಚಿತ್ರದಲ್ಲಿ ಶಿವಣ್ಣನ ಪಾತ್ರ ಹೆಚ್ಚು ಇರೋದಿಲ್ಲ. ನಾಲ್ಕೈದು ಸೀನ್‌ಗಳಿರುತ್ತವೆ. ಆದರೆ, ಇವರ ಕಡಿಮೆ ಸೀನ್‌ಗಳಿದ್ದರೂ ಅಷ್ಟೆ ಪವರ್ ಫುಲ್ ಆಗಿವೆ.
ಹಾಗೆ ಪೆದ್ದಿ ಚಿತ್ರದ ನಾಯಕಿ ಜಾನ್ವಿ ಕಪೂರ್ ಜೊತೆಗೂ ಒಂದೇ ಒಂದು ಸೀನ್ ಬರುತ್ತದೆ. ಅದರಲ್ಲಿ ಶಿವಣ್ಣನ ಕಣ್ಣಗಳನ್ನ ನೋಡಿಯೇ ಜಾನ್ವಿ ಕಪೂರ್ ಗಾಬರಿ ಆಗಿದ್ದಾರೆ. ಈ ಒಂದು ಶಾಕಿಂಗ್ ಅನುಭವವನ್ನು ಜಾನ್ವಿ ಕಪೂರ್ ಹಂಚಿಕೊಂಡಿದ್ದಾರೆ. ಆ್ಯಂಕರ್ ಅನುಶ್ರೀ ಅವರ ಸಂದರ್ಶನದಲ್ಲಿಯೇ ಈ ಎಲ್ಲ ಅನುಭವವನ್ನ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಶೇರ್ ಮಾಡಿಕೊಂಡಿದ್ದಾರೆ.
ಜೂನ್-4 ರಂದು ಪೆದ್ದಿ ಚಿತ್ರ ರಿಲೀಸ್ ಆಗುತ್ತಿದೆ. ಜೂನ್-3 ರಂದು ಈ ಸಿನಿಮಾದ ಪ್ರೀಮಿಯರ್ ಶೋಗಳು ಇವೆ. ಎ.ಆರ್.ರೆಹಮಾನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.
ರತ್ನವೇಲು ಅವರು ಈ ಸಿನಿಮಾಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಅಲ್ಲದೆ ಜಗಪತಿ ಬಾಬು ಕೂಡ ಅಭಿನಯಿಸಿದ್ದಾರೆ. ಆದರೆ, ಎಲ್ಲೂ ಇವರು ಜಗಪತಿ ಬಾಬು ಅಂತ ಹೇಳೋದಿಲ್ಲ. ಆ ರೀತಿನೇ ಜಗಪತಿ ಬಾಬು ಕಂಪ್ಲೀಟ್ ಬದಲಾಗಿದ್ದಾರೆ. ಇನ್ನುಳಿದಂತೆ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













