Ram Charan: ಡೈಪರ್ ಚೇಂಜ್ ಮಾಡೋದು ಅಂದ್ರೆ ನನಗೆ ಆಗಲ್ಲ, ಅಲ್ಲಿಂದ ಎಸ್ಕೇಪ್ ಆಗ್ತೀನಿ! ರಾಮ್ ಚರಣ್ ಮಾತು ಫುಲ್ ವೈರಲ್ | | ACTPnews

ರಾಮ್ ಚರಣ್


Last Updated:

Ram Charan: ತಾವು ಬಹುತೇಕ ಎಲ್ಲ ತಂದೆಯ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ. ಆದರೆ ಡೈಪರ್ ಬದಲಾಯಿಸುವ ಕೆಲಸ ಬಂದಾಗ ಮಾತ್ರ ಅಲ್ಲಿಂದ ನಿಧಾನವಾಗಿ ಜಾರಿಕೊಳ್ಳುತ್ತೇನೆ ಎಂದು ನಟ ರಾಮ್ ಚರಣ್ ನಗುತ್ತಲೇ ಒಪ್ಪಿಕೊಂಡಿದ್ದಾರೆ.

ರಾಮ್ ಚರಣ್
ರಾಮ್ ಚರಣ್

ತೆಲುಗು ಚಿತ್ರರಂಗದ ಸ್ಟಾರ್ ನಟ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೆದ್ದಿ (Peddi) ಇಂದು ಭರ್ಜರಿಯಾಗಿ ಬಿಡುಗಡೆಯಾಗಿ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಸಿನಿಮಾ ಕುರಿತು ಎಲ್ಲೆಡೆ ಚರ್ಚೆಗಳು ನಡೆಯುತ್ತಿರುವ ಈ ಸಮಯದಲ್ಲೇ ರಾಮ್ ಚರಣ್ ಅವರ ಸಂದರ್ಶನದ ಒಂದು ಭಾಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ. ತಂದೆಯ ಜವಾಬ್ದಾರಿಗಳ ಬಗ್ಗೆ ಮಾತನಾಡುತ್ತಾ ಹಂಚಿಕೊಂಡಿರುವ ಮಾತುಗಳು ಇದೀಗ ಸಖತ್ ವೈರಲ್ ಆಗುತ್ತಿದೆ.

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಮ್ ಚರಣ್, ತಮ್ಮ ಕುಟುಂಬದ ವಿಷಯದಲ್ಲಿ ಸದಾ ಸರಳತೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಂದೆಯಾಗಿರುವ ಅನುಭವ, ಮಕ್ಕಳ ಜೊತೆಗಿನ ಬಾಂಧವ್ಯ ಹಾಗೂ ಕುಟುಂಬದ ಜವಾಬ್ದಾರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ವಿಶೇಷವಾಗಿ ಮಕ್ಕಳ ಡೈಪರ್ ಬದಲಾಯಿಸುವ ವಿಚಾರದಲ್ಲಿ ಅವರು ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪೆದ್ದಿ ಚಿತ್ರದ ಬಿಡುಗಡೆಗೆ ಸಂಬಂಧಿಸಿದ ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದ ಸಂದರ್ಭದಲ್ಲಿ ರಾಮ್ ಚರಣ್ ಹಲವು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದರು. ಅಂತಹ ಒಂದು ಸಂದರ್ಶನದಲ್ಲಿ ಅವರ ಸಿನಿ ಜೀವನದ ಜೊತೆಗೆ ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗಳೂ ಕೇಳಲಾಗಿತ್ತು.

ತಂದೆಯಾಗಿ ಸಾಧ್ಯವಾದಷ್ಟು ಹೆಚ್ಚು ಸಮಯ ಮಕ್ಕಳ ಜೊತೆ ಕಳೆಯಲು ಪ್ರಯತ್ನಿಸುತ್ತೇನೆ. ಕುಟುಂಬದೊಂದಿಗೆ ಇರುವ ಕ್ಷಣಗಳು ನನಗೆ ತುಂಬಾ ವಿಶೇಷ ಎಂದು ಅವರು ಸಂದರ್ಶನದಲ್ಲಿ ವಿವರಿಸಿದ್ದಾರೆ. ಸಿನಿ ಶೂಟಿಂಗ್ ಹಾಗೂ ವೃತ್ತಿಜೀವನದ ಒತ್ತಡಗಳ ನಡುವೆಯೂ ಕುಟುಂಬಕ್ಕೆ ಆದ್ಯತೆ ನೀಡುವ ಬಗ್ಗೆ ಅವರು ಮಾತನಾಡಿದ್ದಾರೆ.

ಸಂದರ್ಶನದ ಅತ್ಯಂತ ಕುತೂಹಲಕಾರಿ ಕ್ಷಣವೆಂದರೆ ಡೈಪರ್ ಬದಲಾಯಿಸುವ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಿದ ರಾಮ್ ಚರಣ್, ತಾವು ಬಹುತೇಕ ಎಲ್ಲ ತಂದೆಯ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ. ಆದರೆ ಡೈಪರ್ ಬದಲಾಯಿಸುವ ಕೆಲಸ ಬಂದಾಗ ಮಾತ್ರ ಅಲ್ಲಿಂದ ನಿಧಾನವಾಗಿ ಜಾರಿಕೊಳ್ಳುತ್ತೇನೆ ಎಂದು ನಗುತ್ತಲೇ ಒಪ್ಪಿಕೊಂಡಿದ್ದಾರೆ.

ಈ ಪ್ರಾಮಾಣಿಕ ಉತ್ತರವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯ ಕುಟುಂಬಗಳಲ್ಲಿ ನಡೆಯುವ ಸನ್ನಿವೇಶವೊಂದನ್ನು ಸ್ಟಾರ್ ನಟ ಕೂಡ ಹಾಸ್ಯಮಯವಾಗಿ ಒಪ್ಪಿಕೊಂಡಿರುವುದು ಅಭಿಮಾನಿಗಳಿಗೆ ಇಷ್ಟವಾಗಿದೆ. ಹಲವರು ಈ ಹೇಳಿಕೆಯನ್ನು ಮನರಂಜನಾತ್ಮಕವಾಗಿ ಹಂಚಿಕೊಳ್ಳುತ್ತಿದ್ದು, ನಟನ ಸರಳ ವ್ಯಕ್ತಿತ್ವವನ್ನು ಮೆಚ್ಚುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed