Last Updated:
ರಕ್ಕಸಪುರದೋಳ್ ಚಿತ್ರ ಒಟಿಟಿಗೆ ಹೇಳಿ ಮಾಡಿಸಿದಂತಹ ಚಿತ್ರವೇ ಆಗಿದೆ. ಆದರೆ, ಈ ಸಿನಿಮಾ ಹೆಚ್ಚು ಕಡಿಮೆ 7 ತಿಂಗಳ ಬಳಿಕ ಒಟಿಟಿಗೆ ಬಂದಿದೆ.ಇದರ ಇತರ ವಿವರ ಇಲ್ಲಿದೆ ಓದಿ.
ರಾಜ್ ಬಿ ಶೆಟ್ಟಿ (Raj B Shetty) ಅಭಿನಯದ ರಕ್ಕಸಪುರದೋಳ್ ಚಿತ್ರ ಬಂದು ಹೆಚ್ಚು ಕಡಿಮೆ 7 ತಿಂಗಳಾಗಿದೆ. ಫೆಬ್ರವರಿ ತಿಂಗಳಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಈ ಚಿತ್ರ ಒಟಿಟಿಗೆ (Ott) ಹೇಳಿ ಮಾಡಿಸಿದಂತೆನೂ ಇತ್ತು. ಆದರೂ ಈ ಸಿನಿಮಾ ಒಟಿಟಿಗೆ ಬರೋಕೆ ತುಂಬಾನೆ ತಡ ಮಾಡಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಇದು ಸ್ಟ್ರೀಮಿಂಗ್ (Streaming) ಆಗುತ್ತಿದೆ. ಸೆಪ್ಟೆಂಬರ್-11 ರಿಂದಲೆ ಇದರ ಪ್ರಸಾರ ಶುರು ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














