Last Updated:
ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಮಕೃಷ್ಣ ಆಶ್ರಮಕ್ಕೆ ಬಂದು ಹೋಗಿದ್ದಾರೆ. ಈ ಒಂದು ಕ್ಷಣದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅದೆಷ್ಟು ಸಿಂಪಲ್ (Simple) ಅಂತ ಗೊತ್ತೇ ಇದೆ. ತೆರೆ ಮೇಲೆ ಅಷ್ಟೆ ಶ್ರೀಮಂತವಾಗಿಯೇ ಕಾಣಿಸುತ್ತಾರೆ. ತೆರೆ ಹಿಂದೆ ಇವರು ಸರಳಾತಿ ಸರಳ ಬಿಡಿ. ಬಿಳಿ ಪಂಚೆ ಉಟ್ಟುಕೊಳ್ಳುತ್ತಾರೆ. ಬಿಳಿ ಬಣ್ಣದ ಶಾರ್ಟ್ ಕುರ್ತಾ ಹಾಕ್ತಾರೆ. ಆಧ್ಯಾತ್ಮದ ಕಡೆಗೆ ವಾಲಿ ಬಹಳ ದಿನಗಳೇ ಕಳೆದಿವೆ. ಆಗಾಗ ರಾಮೃಕೃಷ್ಣ ಆಶ್ರಮಕ್ಕೂ ಬರ್ತಾ ಇರ್ತಾರೆ. ಜೂನ್-19 ರಂದು ಇವರು ಬೆಂಗಳೂರಿನ (Bangalore) ರಾಮಕೃಷ್ಣ ಆಶ್ರಮಕ್ಕೆ (Ramakrishna Ashrama) ಬಂದು ಹೋಗಿದ್ದಾರೆ. ಈ ಕ್ಷಣದ ವಿಡಿಯೋದಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇದೆ. ಅದರ ವಿವರ ಮುಂದೆ ಇದೆ ಓದಿ.
ಬಾಡಿಗಾರ್ಡ್ ಇಲ್ಲ ಗನ್ ಮ್ಯಾನೂ ಇಲ್ಲ..
ಈಗಲೂ ಬಂದು ಹೋಗುತ್ತಾರೆ. ಆದರೆ, ಮಾರುವೇಷದಲ್ಲಿ ಅಲ್ವೇ ಅಲ್ಲ. ಬಿಳಿ ಬಣ್ಣದ ಕುರ್ತಾ ಮತ್ತು ಪಂಚೆ ಉಟ್ಟುಕೊಂಡು ಬಂದು ಹೋಗ್ತಾರೆ. ಅದೆಷ್ಟು ಸಾಧ್ಯವೋ ಅಷ್ಟು ಸಿಂಪಲ್ ಆಗಿಯೇ ಇರ್ತಾರೆ. ಇವರ ಜೊತೆಗೆ ಯಾವುದೇ ಬಾಡಿಗಾರ್ಡ್ ಕೂಡ ಇರೋದಿಲ್ಲ. ಗನ್ ಮ್ಯಾನ್ ಕೂಡ ಇರೋದಿಲ್ಲ. ಹಾಗೆ ಬಂದು ಹೀಗೆ ಹೊರಟು ಹೋಗ್ತಾರೆ.
ಬೆಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ರಜನಿಕಾಂತ್ ಬಂದು ಹೋಗಿದ್ದಾರೆ. ಇವರು ಆಶ್ರಮಕ್ಕೆ ಬಂದು ಹೊರಡುವಾಗಿನ ವಿಡಿಯೋ ವೈರಲ್ ಆಗಿದೆ.
Extra_Flavour96 ಅನ್ನುವ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋ ಶೇರ್ ಆಗಿದೆ. ಯಾವುದೇ ಗನ್ ಮ್ಯಾನ್ ಇಲ್ಲ. ಮತ್ಯಾವ ಬಾಡಿಗಾರ್ಡ್ ಕೂಡ ಇಲ್ಲ. ರಜನಿಕಾಂತ್ ಅದೆಷ್ಟು ಸಿಂಪಲ್ ಅಂತಲೂ ಇದರಲ್ಲಿ ಬರೆಯಲಾಗಿದೆ.
ರಜನಿಕಾಂತ್ ಅವರು ಜೂನ್-19 ರಂದು ಬೆಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ಬಂದು ಹೋಗಿದ್ದಾರೆ. ಯಾವುದೇ ಸದ್ದು ಗದ್ದಲ ಇಲ್ಲದೆ ಇಲ್ಲಿ ಆಗಮಿಸಿದ್ದಾರೆ.
ಬಿಳಿ ಬಣ್ಣದ ಕಾರ್ ಹತ್ತಿ ಹೋದ ರಜನಿ
ಆದರೆ, ರಜನಿಕಾಂತ್ ಅಂದ್ಮೇಲೆ ಫೋಟೋ ತೆಗೆಸಿಕೊಳ್ಳುವ ಫ್ಯಾನ್ಸ್ ಇದ್ದೇ ಇರ್ತಾರೆ. ಇವರನ್ನ ಮಾತನಾಡಿಸೋ ಫ್ಯಾನ್ಸ್ ಕೂಡ ಇರ್ತಾರೆ. ಅದು ಇಲ್ಲೂ ಕಾಣಿಸುತ್ತದೆ.
ರಜನಿಕಾಂತ್ ಅವರು ಇತ್ತೀಚಿಗೆ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೂ ಬಂದಿದ್ದರು. ಅಲ್ಲಿ ತಮ್ಮ ವಿವಿಧ ಅನುಭವ ಹಂಚಿಕೊಂಡಿದ್ದರು.
ರಜನಿಕಾಂತ್ ಅವರು ಅದ್ಯಾವಾಗೋ ಆಧ್ಯಾತ್ಮದತ್ತ ವಾಲಿದ್ದಾರೆ. ತಮ್ಮ ಹೊಸ ಸಿನಿಮಾ ಶುರು ಆಗುವ ಮೊದಲು ಇಲ್ಲವೆ ಹೊಸ ಚಿತ್ರ ಮುಗಿದ್ಮೇಲೆ ಒಮ್ಮೆ ಹಿಮಾಲಯಕ್ಕೆ ಹೋಗಿ ಬರ್ತಾರೆ.
ಅಲ್ಲಿರುವ ಗುರುಗಳನ್ನ ಭೇಟಿ ಆಗಿಯೂ ಬರ್ತಾರೆ ಅನ್ನುವ ಮಾತು ಇದೆ. ಧ್ಯಾನದಲ್ಲಿಯೇ ಅದೆಷ್ಟೋ ಹೊತ್ತು ತಲೀನರಾಗ್ತಾರೆ ಅನ್ನುವ ಮಾತು ಇದೆ. ಒಟ್ಟಾರೆ, ರಜನಿಕಾಂತ್ ಅದೆಷ್ಟು ಸಾಧ್ಯವೋ ಅಷ್ಟು ಸರಳವಾಗಿಯೇ ಇರ್ತಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 20, 2026 10:06 AM IST













